Home / Photos
Namma Metro Purple Line: ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ ಬಹುತೇಕ ಸಿದ್ಧ
ಸೆಪ್ಟೆಂಬರ್ 15ರ ಬಳಿಕ ನೇರಳೆ ಮಾರ್ಗದಲ್ಲಿ ಸಂಪೂರ್ಣವಾಗಿ ಮೆಟ್ರೋ ಸಂಚಾರ ಆರಂಭವಾಗಲಿದೆ. ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು, ಸೇವೆ ಆರಂಭಿಸಲು ಕಾಯುತ್ತಿದೆ.
1/7
Photo Credit: ಚಿತ್ರಕೃಪೆ: ಟ್ವಿಟರ್ @ever_pessimist
Share
ನೇರಳೆ ಮಾರ್ಗ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ ಬಳಿಕ ಪ್ರತಿದಿನದ ಮೆಟ್ರೋ ಪ್ರಯಾಣಿಕರ ಸಂಖ್ಯೆ 6.2 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.
2/7
Photo Credit: ಚಿತ್ರಕೃಪೆ: ಟ್ವಿಟರ್ @ever_pessimist
Share
ಬೆನ್ನಿಗಾನಹಳ್ಳಿ ನಿಲ್ದಾಣದಲ್ಲಿನ ಕೊನೆ ಹಂತದ ಕಾಮಗಾರಿ ನಡೆಯುತ್ತಿದ್ದು, ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆಗೆ ಮುನ್ನವೇ ಮುಗಿಯಲಿದೆ.
3/7
Photo Credit: ಚಿತ್ರಕೃಪೆ: ಟ್ವಿಟರ್ @ever_pessimist
Share
ಈ ನೇರಳೆ ಮಾರ್ಗ ಚಲ್ಲಘಟ್ಟವನ್ನು - ವೈಟ್ಫೀಲ್ಡ್ (ಕಾಡುಗೋಡಿ) ಜೊತೆ ಸಂಪರ್ಕಿಸುವ 43.5-ಕಿಲೋ ಮೀಟರ್ ಉದ್ದದ ಮಾರ್ಗ.
4/7
Photo Credit: ಚಿತ್ರಕೃಪೆ: ಟ್ವಿಟರ್ @ever_pessimist
Share
ನೇರಳೆ ಮಾರ್ಗದಲ್ಲಿ ಸಂಪೂರ್ಣ ಓಡಾಟ ಶುರುವಾದ ನಂತರ ಬೆಂಗಳೂರು ಪೂರ್ವ ಮತ್ತು ಪಶ್ಚಿಮ ಭಾಗಗಳ ನಡುವಿನ ಓಡಾಟ ಮತ್ತಷ್ಟು ಸುಲಭವಾಗಲಿದ್ದು, ಟ್ರಾಫಿಕ್ ಸಮಸ್ಯೆಗೆ ಸ್ವಲ್ಪ ಕಡಿವಾಣ ಬೀಳಲಿದೆ.
5/7
Photo Credit: ಚಿತ್ರಕೃಪೆ: ಟ್ವಿಟರ್ @ever_pessimist
Share
ಜುಲೈನಲ್ಲೇ ಈ ಮಾರ್ಗದಲ್ಲಿ ಮೆಟ್ರೋ ಓಡಾಟ ಆರಂಭವಾಗಬೇಕಿತ್ತಾದರೂ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಮುಗಿಯಲು ವಿಳಂಬವಾಗಿತ್ತು.
6/7
Photo Credit: ಚಿತ್ರಕೃಪೆ: ಟ್ವಿಟರ್ @ever_pessimist
Share
ಹಳೆಯ ಮದ್ರಾಸ್ ರಸ್ತೆಯಲ್ಲಿರುವ ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು, ಸೇವೆ ಆರಂಭಿಸಲು ಕಾಯುತ್ತಿದೆ.
7/7
Photo Credit: ಚಿತ್ರಕೃಪೆ: ಟ್ವಿಟರ್ @ever_pessimist
Share
ಸೆಪ್ಟೆಂಬರ್ 15ರ ಬಳಿಕ ನೇರಳೆ ಮಾರ್ಗದಲ್ಲಿ ಸಂಪೂರ್ಣವಾಗಿ ಮೆಟ್ರೋ ಸಂಚಾರ ಆರಂಭವಾಗಲಿದೆ.

Click it and Unblock the Notifications