ಸಿಂಚನ ಸಾಹಿತ್ಯ ಸ್ಪರ್ಧೆಗೆ ಕಥೆ ಕವನಗಳನ್ನು ಕಳಿಸಿ

2011ರ ಆಗಸ್ಟ್‌ನಲ್ಲಿ ಜನ್ಮತಾಳಿದ ಕನ್ನಡ ಸಂಘ (ಸಿಂಗಪುರ)ದ ಹೆಮ್ಮೆಯ 'ಸಿಂಚನ' ಮಾಸಪತ್ರಿಕೆ, ನಾಲಕ್ಕು ಸಾರ್ಥಕ ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಕನ್ನಡ ಸಂಘ (ಸಿಂಗಪುರ) ನಾಲ್ಕನೆಯ 'ಸಿಂಚನ ಸಾಹಿತ್ಯ ಸ್ಪರ್ಧೆ'ಯನ್ನು ಆಯೋಜಿಸಿದೆ.

'ಸಿಂಚನ' ಮಾಸಪತ್ರಿಕೆ ಪ್ರತಿ ತಿಂಗಳು ಹಲವು ವೈವಿಧ್ಯಮಯ ವಿಷಯಗಳನ್ನು ಓದುಗರೊಂದಿಗೆ ಹಂಚಿಕೊಂಡು ಬರುತ್ತಿದೆ. ಈ ವರ್ಷದ ಸ್ಪರ್ಧೆಯಲ್ಲಿ ಸಣ್ಣಕಥೆ ಮತ್ತು ಕವನವನ್ನು ಒಳಗೊಂಡ ಎರಡು ವರ್ಗಗಳಿಗೆ ನಿಮ್ಮ ಬರಹಗಳನ್ನು ಕಳುಹಿಸಬಹುದು. ವರ್ಗಗಳ ವಿವರಗಳನ್ನು ಕೆಳಗೆ ನೀಡಲಾಗಿದೆ.

ಗಮನಿಸಿ : ಹೊರದೇಶದಲ್ಲಿ ನೆಲಸಿರುವ ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸಲು ಈ ವರ್ಷ ಪ್ರತಿವರ್ಗದಲ್ಲೂ ಅತ್ಯುತ್ತಮ ಅನಿವಾಸಿ ಬರಹಗಾರರಿಗೆ ಪ್ರತ್ಯೇಕ ಬಹುಮಾನವಿದೆ! ಇನ್ನೇಕೆ ತಡ? ನಿಮ್ಮ ಬರಹಗಳನ್ನು ಆದಷ್ಟು ಬೇಗ ನಮಗೆ ಕಳುಹಿಸುತ್ತೀರಾ ತಾನೆ?

ವರ್ಗ 1 - ಸಣ್ಣಕಥೆ (ಮಿತಿ - 4 ಪುಟಗಳು)

ವರ್ಗ 2 - ಕವನ (ಮಿತಿ - 1 ಪುಟ) [ಸಿಂಚನ ಸಾಹಿತ್ಯ ಸ್ಪರ್ಧೆ 2014ರ ಫಲಿತಾಂಶ]

Sinchana short story and poem contest in Singapore

ಬರಹಗಾರರ ಗಮನಕ್ಕೆ:

1. ಸ್ಪರ್ಧೆಗೆ ಕಳಿಸುವ ಕಥೆ ಮತ್ತು ಕವನಗಳು ಸ್ವಂತದ್ದಾಗಿರಬೇಕು ಮತ್ತು ಬೇರೆಲ್ಲೂ (ಅಂತರ್ಜಾಲ ಮತ್ತು ಮುದ್ರಿತ ಮಾಧ್ಯಮ) ಈ ಮೊದಲು ಪ್ರಕಟವಾಗಿರಬಾರದು.

2. ಕಥೆ ಮತ್ತು ಕವನಗಳು 'ಬರಹ' ಅಥವ 'ನುಡಿ' ತಂತ್ರಾಂಶದಲ್ಲಿರಬೇಕು. ಕೈ ಬರಹದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.

3. ಬಹುಮಾನಿತ ಕೃತಿಗಳನ್ನು "ಸಿಂಚನ' ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು. 'ಸಿಂಚನ' ಸಂಪಾದಕ ಸಮಿತಿಯ ತೀರ್ಮಾನವೇ ಅಂತಿಮ. ಬರಹಗಳನ್ನು ಪರಿಷ್ಕರಿಸಿ ಪ್ರಕಟಿಸುವ ಹಕ್ಕು 'ಸಿಂಚನ' ಸಂಪಾದಕ ಸಮಿತಿಗೆ ಸೇರಿದ್ದು.

4. ಎರಡೂ ವರ್ಗಗಳಿಗೂ ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ 2, 2015. ನಂತರ ಬಂದ ಬರಹಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಬಹುಮಾನ ವಿಜೇತರಿಗೆ ನವೆಂಬರ್ ತಿಂಗಳಲ್ಲಿ ಮಿಂಚಂಚೆ ಮೂಲಕ ತಿಳಿಸಲಾಗುವುದು.

5. ಬರಹಗಾರರು ತಮ್ಮ ಕೃತಿಯ ಜೊತೆಗೆ ತಮ್ಮ ಸಂಪೂರ್ಣ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಯಸ್ಸು, ಭಾವಚಿತ್ರ ಮತ್ತು EMAIL idಯನ್ನು ತಪ್ಪದೇ ಕಳುಹಿಸಬೇಕು. ಈ ವಿವರಗಳಿಲ್ಲದ ಬರಹಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

6. ಪ್ರತಿ ವರ್ಗಕ್ಕೆ ಒಬ್ಬರು ಒಂದಕ್ಕಿಂತ ಹೆಚ್ಚು ಲೇಖನ ಕಳುಹಿಸುವಂತಿಲ್ಲ.

7. ನಿಮ್ಮ ಬರಹಗಳನ್ನು [email protected]ಗೆ ಮಿಂಚಂಚೆ ಮೂಲಕ ಕಳುಹಿಸಿ.

8. ವಿಶ್ವಕನ್ನಡಿಗರೆಲ್ಲರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಯಾವುದೇ ವಯೋಮಿತಿಯ ನಿಬಂಧನೆಯಿಲ್ಲ.

ಸಿಂಚನ ಸಾಹಿತ್ಯ ಸ್ಪರ್ಧೆ ಸಮಿತಿ
ಕನ್ನಡ ಸಂಘ ಸಿಂಗಪುರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+