ಪತ್ನಿಯನ್ನು ಕೊಂದು ಆಸ್ಪತ್ರೆ ಆವರಣದಲ್ಲಿ ಶವ ಬಿಸಾಡಿದ ಪತಿ

Posted By:
Subscribe to Oneindia Kannada

ಯಾದಗಿರಿ, ಡಿಸೆಂಬರ್ 05 : ಈಗಾಗಲೇ ಮದುವೆಯಾಗಿದ್ದರೂ ಮತ್ತೊಬ್ಬಳನ್ನು ಮದುವೆಯಾಗಿ ಆಕೆಯನ್ನು ಕೊಲೆ ಮಾಡಿ ಜಿಲ್ಲಾಆಸ್ಪತ್ರೆ ಆವರಣದಲ್ಲಿ ಬಿಸಾಡಿ ಹೋಗಿದ್ದಾನೆ ಇಲ್ಲೊಬ್ಬ ಪಾಪಿ ಪತಿ.

ಯಾದಗಿರಿ: ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಯನ್ನೇ ಕೊಂದ ಪತಿ

ಶಹಾಪುರ ತಾಲ್ಲೂಕಿನ ಖಾನಾಪುರ ಗ್ರಾಮದ ವೆಂಕಟೇಶ ಎಂಬುವನಿಗೆ ಈ ಮೊದಲೆ ಮದುವೆಯಾಗಿ 3 ಮಕ್ಕಳಿದ್ದರು ಆದರೂ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ರುಕ್ಮಾಪುರ ಗ್ರಾಮದ ಶಾಂತಮ್ಮ ಅವರನ್ನು ಪ್ರೇಮಿಸಿ ವಿವಾಹವಾಗಿದ್ದ ಆದರೆ ಈಗ ಆಕೆಯನ್ನೇ ಕೊಂದು ವಿಕೃತಿ ಮೆರೆದಿದ್ದಾನೆ.

Husband kills his wife and throws her body in front of dsitrict hospital

ಶಾಂತಮ್ಮನ ಕೊಲೆ ಮಾಡಿದ ಪತಿ ವೆಂಕಟೇಶ ಆಕೆಯ ಶವವನ್ನು ಬೈಕ್‌ನಲ್ಲಿ ಜಿಲ್ಲಾ ಆಸ್ಪತ್ರೆಗೆ ತಂದು ಆಸ್ಪತ್ರೆಯ ಆವರಣದಲ್ಲಿ ಶವವನ್ನು ಬಿಸಾಡಿ ಹೋಗಿದ್ದಾನೆ. ಬೈಕ್‌ನಲ್ಲಿ ಶವ ತಂದ ದೃಶ್ಯ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಯಾದಗಿರಿಯಲ್ಲಿ ನಿಧಿಯಾಸೆಗೆ ಹೆಣ್ಣುಮಗುವನ್ನು ಕೊಂದರೆ?

ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎನ್ನಲಾಗಿದೆ, ಕಳೆದ ಮೇ ತಿಂಗಳಲ್ಲಿ ವೆಂಕಟೇಶ ಮತ್ತು ಶಾಂತಾರಿಗೆ ವಿವಾಹವಾಗಿತ್ತು. ಬೆಂಗಳೂರಿನಲ್ಲಿ ಗಾರ್ಮೇಂಟ್ಸ್ ನಲ್ಲಿ ಕೆಲಸ ಮಾಡುವಾಗ ಇಬ್ಬರ ಮದ್ಯೆ ಪ್ರೇಮಾಂಕುರವಾಗಿ ಮದುವೆಯಾಗಿದ್ದರು.

ಹಣದಾಸೆಗಾಗಿ ಮಗಳನ್ನು ವೆಂಕಟೇಶ ಕೊಲೆ ಮಾಡಿದ್ದಾನೆಂದು ಶಾಂತಮ್ಮ‌ ಪೋಷಕರ ಆರೋಪ ಮಾಡಿದ್ದು, ಸ್ಥಳಕ್ಕೆ ವಡಗೇರಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Venkatesh kills his wife Shanthamma and throws her body in front of District hospital. Venkatesh and Shanthamma of Yadagiri district had a fight and Venkatesh allegedly killed her.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ