• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತ-ಪಾಕ್ ಮಧ್ಯೆ ಅತೀ ಕೆಟ್ಟ ಸನ್ನಿವೇಶ: ಡೊನಾಲ್ಡ್ ಟ್ರಂಪ್ ಕಳವಳ

|

ವಾಷಿಂಗ್ಟನ್, ಫೆಬ್ರವರಿ 23: ಪುಲ್ವಾಮಾ ದಾಳಿಯ ಬಳಿಕೆ ಭಾರತ ಮತ್ತು ಪಾಕಿಸ್ತಾನದ ನಡುವೆ ಅತ್ಯಂತ ಕೆಟ್ಟ ಸನ್ನಿವೇಶ ಏರ್ಪಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಎದ್ದಿರುವ ಯುದ್ಧದಂಥ ಸನ್ನಿವೇಶ ಶೀಘ್ರವೇ ನಿಯಂತ್ರಣಕ್ಕೆ ಬರಲಿದೆ ಎಂದು ನಾನು ನಂಬುತ್ತೇನೆ. ಸದ್ಯಕ್ಕೆ ಉಭಯ ದೇಶಗಳ ನಡುವೆ ಅಪಾಯಕಾರಿ ಸನ್ನಿವೇಶ ಏರ್ಪಟ್ಟಿದೆ. ನಾವು ಶಾಂತಿಯನ್ನು ಕಾಪಾಡಲು ಎರಡೂ ದೇಶದೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಟ್ರಂಪ್ ಹೇಳಿದರು.

ಪಾಕಿಸ್ತಾನದ ಕಪಟ ನಾಟಕಕ್ಕೆ ಭಾರತದ ಖಡಕ್ ಉತ್ತರ

ಭಾರತ ಸುಮಾರು 50 ರಷ್ಟು ಯೋಧರನ್ನು ಕಳೆದುಕೊಂಡಿದೆ. ಅದನ್ನು ಗಂಭೀರವಾಗಿ ಪರಿಗಣಿಸಿದೆ. ಆದರೆ ಎರಡು ದೇಶಗಳ ನಡುವಿನ ಅತೀ ಸೂಕ್ಷ್ಮ ವಿಷಯ. ಕಾಶ್ಮೀರದಲ್ಲಿ ಅಂದು ನಡೆದ ಘಟನೆಯಿಂದಾಗಿ ಎರಡು ದೇಶಗಳ ನಡುವೆ ಯುದ್ಧ ಏಳಬಹುದಾದ ಸಾಧ್ಯತೆ ಇದೆ. ಇದು ತುಂಬಾ ಅಪಾಯಕಾರಿ ಎಂದು ಟ್ರಂಪ್ ಹೇಳಿದರು.

ಪಾಕ್ ವಿರುದ್ಧ ಕ್ರಿಕೆಟ್ ಆಡದಿರುವುದು ನಾವು ಶರಣಾಗುವುದಕ್ಕಿಂತಲೂ ಕೀಳು: ತರೂರ್

"ನಾವು ಪಾಕಿಸ್ತಾನಕ್ಕೆ ನೀಡುತ್ತಿದ್ದ 1.3 ಬಿಲಿಯನ್ ಡಾಲರ್ ನೆರವನ್ನು ಈಗಾಗಲೇ ಕಡಿತಗೊಳಿಸಿದ್ದೇವೆ. ಪಾಕಿಸ್ತಾನದೊಂದಿಗೆ ಮೊದಲಿನಿಂದಲೂ ನಮ್ಮ ಸಂಬಂಧ ಸೌಹಾರ್ದವಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಅದು ನಮ್ಮ ಬೆಂಬಲಕ್ಕೆ ನಿಲ್ಲದ ಕಾರಣ ನಾವು ಈ ಹೆಜ್ಜೆ ಇಟ್ಟಿದ್ದೇವೆ" ಎಂದರು.

English summary
Pulwama terror attack: US President Donald Trump decribes the current situation between India and Pakistan as "very, very bad." His administration was in contact with both sides, he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X