'ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ'
ವಿಜಯಪುರ, ನವೆಂಬರ್ 1 : ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಮುಖ್ಯಮಂತ್ರಿಯಾಗುವ ಆಸೆ ಇದೆ ಎಂದು ಹೇಳಿದರು. 'ಸಿದ್ದರಾಮಯ್ಯ ಅವರ ಬಳಿಕ ಮುಖ್ಯಮಂತ್ರಿಯಾಗುವ ಸರತಿ ನನ್ನದು' ಎಂದು ಅವರು ಬುಧವಾರ ಹೇಳಿದರು.
ಬುಧವಾರ ವಿಜಯಪುರದಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್, 'ಮುಖ್ಯಮಂತ್ರಿಯಾಗಬೇಕು ಎಂಬುದು ದುರಾಸೆ ಅಲ್ಲ. ಯಾರು ಬೇಕಾದರೂ ಸಿಎಂ ಆಗಬಹುದು. ಹಾಗೇ ನಾನಗೂ ಸಿಎಂ ಆಗಬೇಕು ಎನ್ನುವ ಬಯಕೆ ಇದೆ' ಎಂದರು.

'ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಅವರ ನೇತೃತ್ವದಲ್ಲಿಯೆ ಚುನಾವಣೆಗೆ ಹೋಗುತ್ತೇವೆ. ಪಕ್ಷ ಬಹುಮತ ಪಡೆಯಲಿದೆ. ಮುಂದಿನ ಅವಧಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುತ್ತಾರೆ' ಎಂದು ತಿಳಿಸಿದರು.
'ಸಿದ್ದರಾಮಯ್ಯ ಅವರ ನಂತರ ಮುಖ್ಯಮಂತ್ರಿಯಾಗುವ ಸರತಿ ನನ್ನದು. ಇದರಲ್ಲಿ ತಪ್ಪೇನಿಲ್ಲ, ಯಾರು ಬೇಕಾದರೂ ಸಿಎಂ ಆಗಬಹುದು' ಎಂದು ಎಂ.ಬಿ.ಪಾಟೀಲ್ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದರು.












Click it and Unblock the Notifications