ಉಡುಪಿ ಯುವಕರ ಸಾಧನೆ; ಲಸಿಕೆ ಲಭ್ಯತೆ ತಿಳಿಸಲಿದೆ ಅಪ್ಲಿಕೇಶನ್!
ಉಡುಪಿ, ಜೂನ್ 28; ಕೋವಿಡ್ ಲಸಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ದೇಶದಲ್ಲಿ ಪ್ರತಿ ದಿನ ಲಕ್ಷಾಂತರ ಜನ ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆಯ ಲಭ್ಯತೆ ಮತ್ತು ಕಾಯ್ದಿರಿಸಿಕೊಳ್ಳಲು ಜನ ಪರದಾಡುತ್ತಿದ್ದಾರೆ. ಹೀಗೆ ತನ್ನ ಪೋಷಕರಿಗೆ ವಾಕ್ಸಿನ್ ಕಾಯ್ದಿರಿಸಿಕೊಳ್ಳಲು ಪರದಾಡಿದ ಯುವಕರಿಬ್ಬರು ತನಗಾದ ಕಿರಿಕಿರಿ ಇನ್ಯಾರಿಗೂ ಆಗದಿರಲಿ ಎಂದು ಹೊಸ ತಂತ್ರಜ್ಞಾನ ಆವಿಷ್ಕರಿಸಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರದ ಸಾಲಿಗ್ರಾಮ ನಿವಾಸಿ ರಾಮ್‌ದಾಸ್ ಹೊಸ ಅಪ್ಲಿಕೇಶನ್ ತಯಾರು ಮಾಡಿದ್ದಾರೆ. ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗಿರುವ ಇವರು ಬೆಂಗಳೂರಿನ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಲಾಕ್‌ಡೌನ್‌ನಲ್ಲಿ ಊರಿಗೆ ಮರಳಿದ ರಾಮ್‌ದಾಸ್ ಕಳೆದ ತಿಂಗಳ ಮೇ 3ರಂದು ತನ್ನ ತಂದೆಗೆ ವ್ಯಾಕ್ಸಿನ್ ಕೊಡಿಸಲು ವ್ಯಾಕ್ಸಿನ್ ಲಭ್ಯವಿರುವ ಕೇಂದ್ರ ಹುಡುಕಾಡಿದ್ದರು. ಬಹಳಷ್ಟು ಹುಡುಕಾಟದ ಬಳಿಕ ಲಸಿಕಾ ಕೇಂದ್ರದಲ್ಲಿ ಕ್ಯೂ ನಿಂತು ಲಸಿಕೆ ಪಡೆದಿದ್ದರು. ಲಸಿಕೆ ಪಡೆಯಲು ಭಾರೀ ಕಷ್ಟಪಟ್ಟ ರಾಮ್‌ದಾಸ್ ತನ್ನ ಹಾಗೆಯೇ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಸಂಬಂಧಿಕ ಕಾರ್ತಿಕ್ ನೆರವು ಪಡೆದು ಜನರಿಗೆ ಉಪಯೋಗುವಂತಹ ಅಪ್ಲಿಕೇಶನ್ ತಯಾರು ಮಾಡಿದ್ದಾರೆ.

15 ದಿನಗಳಲ್ಲಿ ರಾಮ್‌ದಾಸ್ ಹಾಗೂ ಕಾರ್ತಿಕ್ ಅಪ್ಲಿಕೇಶನ್ ಸಿದ್ಧಪಡಿಸಿದ್ದಾರೆ. ಈ ಆ್ಯಪ್ ಮೂಲಕವೇ ವ್ಯಾಕ್ಸಿನ್ ಲಭ್ಯತೆ ಪತ್ತೆ ಹಚ್ಚಿ ಸುಲಭವಾಗಿ ವ್ಯಾಕ್ಸಿನ್ ಪಡೆಯಬಹುದಾಗಿದೆ. ಈ ಆ್ಯಪ್ ಹೆಸರು 'ವಿ ಟ್ರ್ಯಾಕ್' ಎಂಬುದಾಗಿದ್ದು, ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಅಪ್ಲಿಕೇಶನ್‌ನಲ್ಲಿ ವಾಸವಿರುವ ತಾಲೂಕಿನ ಪಿನ್‌ಕೋಡ್ ಹಾಕಿ ವ್ಯಾಕ್ಸಿನ್ ಪಡೆದುಕೊಳ್ಳಲಿರುವ ಕೇಂದ್ರವನ್ನು ಆಯ್ಕೆ ಮಾಡಿದರೆ ಆ ಕೇಂದ್ರದಲ್ಲಿ ವ್ಯಾಕ್ಸಿನ್ ಲಭ್ಯವಿದ್ದಾಗ ಮೊಬೈಲ್‌ಗೆ ನೋಟಿಫಿಕೇಶನ್ ಬರುವುದರ ಜೊತೆಗೆ ಅದನ್ನ ಓದುವವರೆಗೆ ಅಲ್ರಾಮ್ ಸದ್ದು ಕೂಡಾ ಬರುತ್ತದೆ.
ಹೀಗಾಗಿ ಆ್ಯಪ್ ಮೂಲಕ ಬುಕ್ ಆಯ್ಕೆ ಮಾಡಿದರೆ ನೇರವಾಗಿ ಕೋವಿನ್ ಆ್ಯಪ್‌ನಲ್ಲಿ ರಿಜಿಸ್ಟರ್ ಆಗುತ್ತೆ ಈ ಮೂಲಕ ಸುಲಭವಾಗಿ ವ್ಯಾಕ್ಸಿನ್ ಪಡೆದುಕೊಳ್ಳಬಹುದಾಗಿದೆ. ಸದ್ಯ 1 ಸಾವಿರಕ್ಕೂ ಅಧಿಕ ಮಂದಿ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಈ ಅಪ್ಲಿಕೇಶನ್ ಮತ್ತಷ್ಟು ಅಭಿವೃದ್ಧಿಪಡಿಸುವ ಆಲೋಚನೆ ಯುವಕರಲ್ಲಿದೆ. ಆ್ಯಪ್ ಮೂಲಕ ವಯಸ್ಸು, ವ್ಯಾಕ್ಸಿನ್ ಆಯ್ಕೆ ಮಾಡುವ ತಂತ್ರಜ್ಞಾನ ರೂಪಿಸಲಿದ್ದಾರೆ. ಆ್ಯಪ್ ಸರಿಯಾದ ಕ್ರಮದಲ್ಲಿ ಉಪಯೋಗವಾದರೆ ಅದೆಷ್ಟೋ ಮಂದಿಗೆ ವ್ಯಾಕ್ಸಿನ್ ಹುಡುಕಾಟದ ಕಿರಿಕಿರಿ ತಪ್ಪಲಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications