ಲಕ್ಷ್ಮಣ ನಿಂಬರ್ಗಿ ವರ್ಗಾವಣೆ, ಉಡುಪಿಯ ನೂತನ ಎಸ್ಪಿಯಾಗಿ ನಿಶಾ ಜೇಮ್ಸ್

ಮಂಗಳೂರು, ಫೆಬ್ರವರಿ 21:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದೆ.

ಮಂಗಳೂರು ನಗರ ಪೂಲೀಸ್ ಆಯುಕ್ತರಾಗಿ ಸಂದೀಪ್ ಪಾಟೀಲ್ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತರಾಗಿದ್ದ ಟಿ ಆರ್.ಸುರೇಶ್ ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶಿಸಿದ್ದು, ಅವರ ಸ್ಥಾನಕ್ಕೆ ಸಂದೀಪ್ ಪಾಟೀಲ್ ಅವರನ್ನು ನೇಮಕ ಮಾಡಿದೆ.

ತತ್ಕ್ಷಣದಿಂದ ಅನ್ವಯವಾಗುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಟಿ.ಆರ್.ಸುರೇಶ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಸದ್ಯದಲ್ಲೇ ನೂತನ ಪೊಲೀಸ್ ಆಯುಕ್ತರಾಗಿ ನಿಯುಕ್ತಿಗೊಳಿಸಲಾಗಿರುವ ಸಂದೀಪ್ ಪಾಟೀಲ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಸಂದೀಪ್ ಪಾಟೀಲ್ ಸದ್ಯ ಡಿಐಜಿ ಮತ್ತು ಬೆಂಗಳೂರು ಸಿಎಆರ್ ಯುನಿಟ್ಸ್ ನ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

 Udupi SP Laxman Nimbargi transferred

ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಲಕ್ಷ್ಮಣ ನಿಂಬರ್ಗಿ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಹಾಗೆಯೇ, ಉಡುಪಿ ಜಿಲ್ಲೆಯ ನೂತನ ಎಸ್ಪಿಯಾಗಿ ನಿಶಾ ಜೇಮ್ಸ್ ಅವರನ್ನು ರಾಜ್ಯ ಸರಕಾರ ನಿಯುಕ್ತಿಗೊಳಿಸಿದೆ.

 Udupi SP Laxman Nimbargi transferred

ಲಕ್ಷ್ಮಣ ನಿಂಬರ್ಗಿ ಅವರನ್ನು ಬೆಂಗಳೂರಿನ ಪೊಲೀಸ್ ವಯರ್ ಲೆಸ್ ಎಸ್.ಪಿ.ಯಾಗಿ ವರ್ಗಾವಣೆಗೊಳಿಸಲಾಗಿದೆ. ಉಡುಪಿ ಜಿಲ್ಲೆಯ ನೂತನ ಎಸ್.ಪಿ.ಯಾಗಿ ನೇಮಕಗೊಂಡಿರುವ ನಿಶಾ ಜೇಮ್ಸ್ ಅವರು 2013ನೇ ಸಾಲಿನ ಐ.ಪಿ.ಎಸ್. ಅಧಿಕಾರಿಯಾಗಿದ್ದು, ಬೆಂಗಳೂರಿನಲ್ಲಿ ಕೆ.ಎಸ್.ಆರ್.ಪಿ.ಯ ನಾಲ್ಕನೇ ಬೆಟಾಲಿಯನ್ ನ ಕಮಾಂಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+