• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಡಿದು ಕಾರು ಚಲಾವಣೆ: ಉಡುಪಿಯಲ್ಲಿ ಅಪಘಾತ

By ಉಡುಪಿ ಪ್ರತಿನಿಧಿ
|

ಉಡುಪಿ, ಮೇ 5: ಲಾಕ್ ಡೌನ್ ಸಡಿಲಿಕೆ ನಂತರ ಮೇ ೫ ರಂದು ಮೊದಲ ಬಾರಿ ಮದ್ಯದಂಗಡಿಗಳು ತೆರೆದಿವೆ. ಮದ್ಯ ವ್ಯಸನಿಗಳು ಸುಮಾರು 40 ದಿನಗಳ ನಂತರ ಮದ್ಯದ ರುಚಿ ಕಂಡಿದ್ದಾರೆ.

ಮದ್ಯದಂಗಡಿ ಓಪನ್ ಆದ ಮೊದಲ ದಿನವೇ ಕುಡಿದು ಕಾರು ಚಲಾಯಿಸಿದ್ದರ ಪರಿಣಾಮವಾಗಿ ಉಡುಪಿಯ ವೃತ್ತ ಗೋಪುರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಂಠಪೂರ್ತಿ ಕುಡಿದು ತೋಟಕ್ಕೆ ಆ್ಯಂಬುಲೆನ್ಸ್ ನುಗ್ಗಿಸಿದ

ಉಡುಪಿಯಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಕುಡಿದು ಕಾರು ಚಲಾಯಿಸಿ ನಗರದ ಚಿತ್ತರಂಜನ್ ಸರ್ಕಲ್ ಬಳಿಯ ವೃತ್ತ ಗೋಪುರಕ್ಕೆ ಕಾರು ಚಾಲಕ ಡಿಕ್ಕಿ ಹೊಡೆದಿದ್ದಾನೆ.

ಕಾರಿನಲ್ಲಿ ಐವರು ಪಾನಮತ್ತರಾಗಿ ಸಂಚರಿಸುತ್ತಿದ್ದರು. ಇಬ್ಬರು ಗಾಯಾಳುಗಳನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಆಸ್ಪತ್ರೆಗೆ ಸೇರಿಸಿದ್ದಾರೆ. ಕಾರು ಡಿಕ್ಕಿ ಸಂಭವಿಸಿದ ತಕ್ಷಣ ಕಾರಿನಲ್ಲಿದ್ದ ಮೂವರು ಪರಾರಿಯಾಗಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Two people were seriously injured as a result of a drunk car colliding with a circle tower of Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X