ಉಡುಪಿ ಕಾನೂನು ವಿದ್ಯಾರ್ಥಿ ಅಪಹರಣ ಪ್ರಕರಣದಲ್ಲಿ ಇಬ್ಬರ ಬಂಧನ

Posted By:
Subscribe to Oneindia Kannada

ಉಡುಪಿ, ಸೆಪ್ಟೆಂಬರ್ 5: ಉಡುಪಿ ಕಾನೂನು ವಿದ್ಯಾರ್ಥಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಉಡುಪಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತರನ್ನು ಕವನ್ ಶೆಟ್ಟಿ ಹಾಗೂ ವಿವೇಕ್ ಜಿ ಸುವರ್ಣ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ 28 ಲಕ್ಷ ರೂಪಾಯಿ ಅವ್ಯವಹಾರದ ವಿಚಾರದಲ್ಲಿ ಉಡುಪಿಯ ಕಾನೂನು ವಿದ್ಯಾರ್ಥಿ ವಿಜಯ ಕುಮಾರ್ ಎಂಬವರನ್ನು ಅಪಹರಣ ಮಾಡಲಾಗಿತ್ತು.

Two acused held in law student kidnap case in Udupi

ಕಾನೂನು ವಿದ್ಯಾರ್ಥಿ ವಿಜಯ ಕುಮಾರ್ ಅವರನ್ನು ಅಪಹರಿಸಿ ತೀವ್ರ ಹಲ್ಲೆ ನಡೆಸಿದ ಬಳಿಕ ಉಡುಪಿಗೆ ವಾಪಸ್ ತಂದು ಬಿಡಲಾಗಿತ್ತು. ಈ ಕುರಿತು ಆಗಸ್ಟ 31 ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಅಪಹರಣ ಪ್ರಕರಣದ ಕುರಿತು ತನಿಖೆ ನಡೆಸಿದ ಉಡುಪಿ ಪೊಲೀಸರು, ಪ್ರಕರಣದ ಪ್ರಮುಖ ಆರೋಪಿಗಳಾದ ಕವನ್ ಶಟ್ಟಿ ಹಾಗೂ ವಿವೇಕ್ ಜಿ ಸುವರ್ಣ ಅವರನ್ನು ಬಂಧಿಸಿದ್ದಾರೆ.

ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ಪ್ರಕಾಶ್ ಮಲ್ಪೆ ಸೇರಿದಂತೆ ಈ ಪ್ರಕರಣದಲ್ಲಿ ಭಾಗಿ ಯಾಗಿದ್ದಾರೆ ಎಂದು ಹೇಳಲಾಗಿರುವ 4ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇವರ ಬಂಧನಕ್ಕೂ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The udupi police have arrested 2 persons in conbection with kidnap and assult of a law college student in the city. Vivek G Suvarna and Kavan sheety are the arrested persons.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ