ಬಿಸಿಲಿಗೆ ಬೇಯುತ್ತಿದ್ದ ಉಡುಪಿಯಲ್ಲಿ ತಂಪೆರೆದ ಮಳೆ
ಉಡುಪಿ, ಏಪ್ರಿಲ್ 07: ಲಾಕ್ ಡೌನ್ ನಿಂದ ಬೇಯುತ್ತಿದ್ದ ಉಡುಪಿ ಜನರಿಗೆ ಇಂದು ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ತಂಪಿನ ವಾತಾವರಣ ನಿರ್ಮಾಣವಾದಂತಾಗಿದೆ.
ಉಡುಪಿ ಜಿಲ್ಲೆಯ ಅಜೆಕಾರು, ಹೆಬ್ರಿ, ಮಾಳ, ಬಜಗೋಳಿ ಮೊದಲಾದೆಡೆ ಮಧ್ಯಾಹ್ನದಿಂದಲೇ ಮಳೆ ಸುರಿದಿದೆ. ಉಡುಪಿ ನಗರದಲ್ಲೂ ಗುಡುಗು ಸಹಿತ ಗಾಳಿ-ಮಳೆಯಾಗಿದೆ.
ಅಕಾಲಿಕ ಸುರಿದ ಮಳೆಯಿಂದ ಗೇರು, ಮಾವು, ಹಲಸಿನ ಬೆಳೆಗಳಿಗೆ ಹಾನಿಯುಂಟಾಗಿದ್ದು, ಮಳೆಯ ಆರ್ಭಟಕ್ಕೆ ರೈತರು ಕಂಗಾಲಾಗಿದ್ದಾರೆ.

ಕರಾವಳಿಯಲ್ಲಿ ಮಿಶ್ರಬೆಳೆಯಾಗಿ ಈ ಸಮಯದಲ್ಲಿ ಉದ್ದು, ಹರುಳಿ ಮತ್ತು ಹೆಸರು ಬೆಳೆಯುತ್ತಾರೆ. ಮಳೆಯಿಂದ ಬೆಳೆ ನಾಶವಾಗುವ ಭೀತಿಯನ್ನು ರೈತರು ಎದುರಿಸುತ್ತಿದ್ದಾರೆ.












Click it and Unblock the Notifications