Get Updates
Get notified of breaking news, exclusive insights, and must-see stories!

ಉಡುಪಿಯಲ್ಲಿ ಪರ್ಯಾಯ ಮಹೋತ್ಸವ-ಸಿಂಗಾರಗೊಂಡ ಕೃಷ್ಣ ನಗರಿ

ಉಡುಪಿ, ಜ.17: ಉಡುಪಿಯ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಪರ್ಯಾಯ ಮಹೋತ್ಸವಕ್ಕೆ ಉಡುಪಿ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಕಾರ್ಯಕ್ರಮಗಳು ಆರಂಭಗೊಂಡಿವೆ. ಜ.18ರ ಮಂಗಳವಾರ ಮುಂಜಾನೆ ಕೃಷ್ಣ ಮಠದ ಅಧಿಕಾರ, ಅದಮಾರು ಮಠದಿಂದ ಕೃಷ್ಣಾಪುರ ಮಠಕ್ಕೆ ಹಸ್ತಾಂತರವಾಗಲಿದೆ.

ಉಡುಪಿ ಕೃಷ್ಣ ಮಠದ ಅತೀ ದೊಡ್ಡ ಹಬ್ಬ ಅಂದರೆ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವ. ಈ ಪರ್ಯಾಯ ಅಂದ ಚಂದ ನೋಡುವುದಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಆಗಮಿಸುತ್ತಿದ್ದರು. ಆದರೆ ಈ ಬಾರಿ ಕೋವಿಡ್ ಕಾರಣದಿಂದ ಸರಳ ಮಹೋತ್ಸವ ನಡೆಸಲು ಪರ್ಯಾಯ ಸಮಿತಿ ತಿರ್ಮಾನ ಮಾಡಿದೆ.

ಮಧ್ಯರಾತ್ರಿ ಪರ್ಯಾಯ ಪೀಠಾರೋಹಣ

ಈಗಾಗಲೇ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು, ಸೋಮವಾರ ಮಧ್ಯರಾತ್ರಿ ಪರ್ಯಾಯ ಪೀಠಾರೋಹಣ ಮಾಡಲಿರುವ ವಿದ್ಯಾಸಾಗರ ಶ್ರೀಗಳು ದಂಡ ತೀರ್ಥದಲ್ಲಿ ಪವಿತ್ರ ಸ್ಥಾನ ಪೂರೈಸಿ, ನಂತರ ಉಡುಪಿಯ ಜೋಡುಕಟ್ಟೆಯಲ್ಲಿ ಪಟ್ಟದ ದೇವರ ಪೂಜೆ ನಡೆಸಲಿದ್ದಾರೆ. ಬಳಿಕ ವೈಭವದ ಮೆರವಣಿಗೆ ಮೂಲಕ ಕೃಷ್ಣ ಮಠಕ್ಕೆ ಬಂದು, ಅಕ್ಷಯ ಪಾತ್ರೆ, ಸಟ್ಟುಗ, ಕೀಲಿಕೈ ಹಸ್ತಾಂತರ ನಡೆಯಲಿದೆ. ಬಳಿಕ ಮಠದ ರಾಜಾಂಗಣದಲ್ಲಿ ವೈಭವದ ದರ್ಬಾರ್ ನಡೆಯಲಿದೆ.

Udupi set to celebrate paryaya mahotsava 2022 in a simple manner

ಸರಳ ಕಾರ್ಯಕ್ರಮಕ್ಕೆ ನಿರ್ಧಾರ

ಅಂದಹಾಗೆ, ಈ ಬಾರಿ ಪರ್ಯಾಯ ಮಹೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲು ತೀರ್ಮಾನ ಮಾಡಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಪರ್ಯಾಯ ಮಹೋತ್ಸವಕ್ಕೆ ಭಕ್ತರ ಹೊರೆ ಕಾಣಿಕೆಗಳು ಬಂದಿದ್ದು, ಉಗ್ರಾಣದಲ್ಲಿ ಆಕರ್ಷಕವಾಗಿ ಜೋಡಿಸಿಡಲಾಗಿದೆ. ಅಲ್ಲದೇ ನಗರದಲ್ಲಿ ವಿದ್ಯುತ್‌ ದೀಪಾಲಂಕಾರಗಳು ಜಗಮಗಿಸುತ್ತಿದೆ. ಆದರೆ ಭಕ್ತರು ಕೋವಿಡ್ ಇರೋ ಕಾರಣದಿಂದ, ಮಠಕ್ಕೆ ಆಗಮಿಸುವ ಬದಲಾಗಿ, ನೇರ ಪ್ರಸಾರವನ್ನು ವೀಕ್ಷಿಸಿ ಅಂತ ಕೃಷ್ಣಾಪುರ ಶ್ರೀಗಳು ಮನವಿ ಮಾಡಿದ್ದಾರೆ.

ಅದ್ದೂರಿ ಪರ್ಯಾಯಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು, ಮೆರವಣಿಗೆಯಲ್ಲಿ ಟ್ಯಾಬ್ಲೋಗಳಿಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಜಿಲ್ಲಾಡಳಿತ ಅನುಮತಿ ನೀಡದ ಹಿನ್ನಲೆ, ಈ ಬಾರಿ ಸರಳ ಪರ್ಯಾಯೋತ್ಸವ ನಡೆಸಲು ಪರ್ಯಾಯ ಸಮಿತಿ ತೀರ್ಮಾನ ಮಾಡಿದೆ. ಕೃಷ್ಣಾಪುರ ಮಠದ ಪರ್ಯಾಯೋತ್ಸವ ಸರಳವಾಗಿ ನಡೆಯಲಿದ್ದು, ದರ್ಬಾರು ಸಭೆಯು ಸರಳವಾಗಿ ನಡೆಯಲಿದೆ.

ಕೇವಲ ಸಾಂಪ್ರದಾಯಿಕ ಪರ್ಯಾಯೋತ್ಸವ ಮೆರವಣಿಗೆ ನಡೆಯಲಿದ್ದು, ಸಹಕರಿಸುವಂತೆ ಭಕ್ತರನ್ನು ಸ್ವಾಗತ ಸಮಿತಿ ಕೋರಿದೆ. ಮೆರವಣಿಗೆಯಲ್ಲಿ ಉತ್ಸವ ಸಮಿತಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಜಾನಪದ ತಂಡಗಳು ಮತ್ತು ಟ್ಯಾಬ್ಲೋಗಳನ್ನು ರದ್ದು ಮಾಡಲಾಗಿದ್ದು, ಅಷ್ಟ ಮಠಾಧೀಶರು ಕುಳಿತುಕೊಳ್ಳುವ ಮೇನೆ ಹೊತ್ತ ವಾಹನಗಳು, ವಾದ್ಯ ಚಂಡೆ , ಡೋಲು , ಬಿರುದಾವಳಿ ಸೇರಿದಂತೆ ಕೇವಲ ಪೌರಾಣಿಕ ದೃಶ್ಯಾವಳಿಗಳನ್ನು ಒಳಗೊಂಡ ಟ್ಯಾಬ್ಲೋ ಭಾಗಿಯಾಗಲಿದೆ. ಪರ್ಯಾಯ ದರ್ಬಾರ್ ಸಭೆಯಲ್ಲೂ ಸೀಮಿತ ಸಂಖ್ಯೆಯ ಆಸನ ವ್ಯವಸ್ಥೆ ಮಾಡಲಾಗಿದ್ದು, ಎರಡು ಕೋವಿಡ್ ಲಸಿಕೆಗಳನ್ನು ಪಡೆದವರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ ಅಂತಾ ಪರ್ಯಾಯೋತ್ಸವದ ಕಾರ್ಯಾಧ್ಯಕ್ಷ ಕೆ ರಘುಪತಿ ಭಟ್ ಪ್ರತಿಕ್ರಿಯೆ ನೀಡಿದ್ದಾರೆ.

Udupi set to celebrate paryaya mahotsava 2022 in a simple manner

ಕಾರ್ಯಕ್ರಮದ ವೇಳಾಪಟ್ಟಿ ಹೀಗಿದೆ:

ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ನಾಲ್ಕನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿದ್ದು, ಕಾರ್ಯಕ್ರಮಗಳ ವೇಳಾಪಟ್ಟಿಯೂ ಸಿದ್ಧವಾಗಿದೆ.

ಜನವರಿ 18 ರ ಮುಂಜಾನೆ 2:15ಕ್ಕೆ ಕಾಪು ದಂಡತೀರ್ಥದಲ್ಲಿ ವಿದ್ಯಾಸಾಗರ ತೀರ್ಥ ಯತಿಗಳಿಂದ ಪವಿತ್ರ ಸ್ನಾನ ನಡೆದು, ಮುಂಜಾನೆ 2:30ಕ್ಕೆ ನಗರದ ಜೋಡುಕಟ್ಟೆಗೆ ಆಗಮಿಸಿದ ವಿದ್ಯಾಸಾಗರ ಯತಿಗಳಿಂದ ಪಟ್ಟದ ದೇವರಿಗೆ ಪೂಜೆ ನಡೆಯಲಿದೆ. ಮುಂಜಾನೆ 3 ಗಂಟೆಯಿಂದ ಜೋಡುಕಟ್ಟೆಯಿಂದ ಪರ್ಯಾಯ ಮೆರವಣಿಗೆ ಆರಂಭವಾಗಲಿದ್ದು, ಪರ್ಯಾಯ ಶ್ರೀಗಳ ಸಹಿತ ಅಷ್ಟಮಠಗಳ ಯತಿಗಳು ಮೇನೆ(ಪಲ್ಲಕ್ಕಿ) ಹೊತ್ತ ವಾಹನದಲ್ಲಿ ಮೆರವಣಿಗೆ ನಡೆಯಲಿದೆ.

ಬೆಳಗ್ಗೆ 4:30ಕ್ಕೆ ರಥಬೀದಿಯಲ್ಲಿ ಕನಕನ ಕಿಂಡಿಯಿಂದ ಕೃಷ್ಣನ ದರ್ಶನ ಮಾಡಲಿರುವ ಪರ್ಯಾಯ ಪೀಠ ಏರಲಿರುವ ಯತಿ ವಿದ್ಯಾಸಾಗರ ಶ್ರೀಗಳು, ಬೆಳಗ್ಗೆ 5:25 ಕ್ಕೆ ಕೃಷ್ಣಮಠ ಪ್ರವೇಶವಾಗಲಿದ್ದು, ಕೃಷ್ಣ ದರ್ಶನದ ಬಳಿಕ ಪೂಜೆ ನಡೆಯಲಿದೆ. 5:45 ಕ್ಕೆ ಮಧ್ವಾಚಾರ್ಯರು‌ ನೀಡಿರುವ ಅಕ್ಷಯಪಾತ್ರೆ ಹಾಗೂ ಬೆಳ್ಳಿ ಸಟ್ಟುಗವನ್ನು ಕೃಷ್ಣಾಪುರ ಶ್ರೀ ಸ್ವೀಕಾರ ಮಾಡಲಿದ್ದಾರೆ. ಪ್ರಾತ ಕಾಲ 5:55 ಕ್ಕೆ ಸರ್ವಜ್ಞ ಪೀಠಾರೋಹಣವಾಗಲಿದ್ದು, 6:45ಕ್ಕೆ ಪರ್ಯಾಯ ದರ್ಬಾರ್ ಆರಂಭವಾಗಲಿದೆ.

Udupi set to celebrate paryaya mahotsava 2022 in a simple manner

ಇನ್ನು ಪರ್ಯಾಯ ಏರಲಿರುವ ಕೃಷ್ಣಾಪುರ ಶ್ರೀಗಳು ಮರಳಿನಲ್ಲಿ ಮೂಡಿಬರಲಿದೆ. ಮಲ್ಪೆ‌ ಕಡಲ ತೀರದಲ್ಲಿ ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯ ಮರಳು ಶಿಲ್ಪ ಗಮನ ಸೆಳೆದಿದೆ.

ಕಲಾವಿದ ಹರೀಶ್ ಸಾಗ ಅವರಿಂದ ಮರಳು ಶಿಲ್ಪ‌ ರಚನೆಯಾಗಿದ್ದು, ಸ್ಯಾಂಡ್ ಥೀಂ‌ನ ಹರೀಶ್ ಸಾಗ ಹಾಗೂ ಅವರ ತಂಡದಿಂದ‌ ಮರಳು ಕಲಾಕೃತಿ ‌ಸಮರ್ಪಣೆ ಮಾಡಿದ್ದಾರೆ.

ಉತ್ಸವ ಮೂರ್ತಿಯ ರೀತಿಯಲ್ಲಿ ಕೃಷ್ಣಾಪುರ ‌ಶ್ರೀಗಳನ್ನ ಬಿಂಬಿಸಿದ ಕಲಾವಿದರು, ಮರಳು ಕಲಾಕೃತಿ ಮೂಲಕ ಕೃಷ್ಣಾಪುರ ಶ್ರೀಗಳಿಗೆ ಶುಭಾಶಯ ಸಲ್ಲಿಸಿದ್ದಾರೆ.

ಒಟ್ಟಿನ್ನಲ್ಲಿ ಎರಡು ವರ್ಷಗಳ ಕಾಲ ಆಡಳಿತ ನಡೆಸಿದ ಅದಮಾರು ಮಠ ಮಾದರಿ ರೀತಿಯಲ್ಲಿ ಕೃಷ್ಣ ಮಠ ದಲ್ಲಿ ಅಭಿವೃದ್ಧಿ ಕಾರ್ಯಕ್ರಮ ನಡೆಸಿದೆ. ಮುಂದೆ ಕೃಷ್ಣಮಠದ ಅಧಿಕಾರ ಸ್ವೀಕರಿಸಲಿರುವ ಕೃಷ್ಣಾಪುರ ಮಠವೂ ಸಮಾಜಮುಖಿ ಕಾರ್ಯಗಳನ್ನು ನಡೆಸುವಂತಾಗಲಿ ಅನ್ನೋದೆ ಭಕ್ತರ ಶುಭ ಹಾರೈಕೆ.

ಮರಳಿನಲ್ಲಿ ಮೂಡಿಬಂದ ಕಲಾಕೃತಿ:

ಮಲ್ಪೆ‌ ಕಡಲ ತೀರದಲ್ಲಿ ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯ ಮರಳು ಶಿಲ್ಪ ಗಮನ ಸೆಳೆಯುತ್ತಿದೆ.

ಕಲಾವಿದ ಹರೀಶ್ ಸಾಗ ಅವರಿಂದ ಮರಳು ಶಿಲ್ಪ‌ ರಚನೆ ಮಾಡಲಾಗಿದೆ. ಸ್ಯಾಂಡ್ ಥೀಂ‌ನ ಹರೀಶ್ ಸಾಗ ಹಾಗೂ ಅವರ ತಂಡದಿಂದ‌ ಮರಳು ಕಲಾಕೃತಿ ‌ಸಮರ್ಪಣೆ ಮಾಡಲಾಗಿದೆ. ಪರ್ಯಾಯ ಪೀಠ ಏರಲಿರುವ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಂಗಳವಾರ ಪರ್ಯಾಯ ಪೀಠ ಏರಲಿದ್ದು, ಉತ್ಸವ ಮೂರ್ತಿಯ ರೀತಿಯಲ್ಲಿ ಕೃಷ್ಣಾಪುರ ‌ಶ್ರೀಗಳನ್ನ ಬಿಂಬಿಸಿದ ಕಲಾವಿದರು

ಮರಳು ಕಲಾಕೃತಿ ಮೂಲಕ ಕೃಷ್ಣಾಪುರ ಶ್ರೀಗಳಿಗೆ ಶುಭಾಶಯ ಸಲ್ಲಿಸಿದ್ದಾರೆ.

Recommended Video

      IPL 2022 Exclusive: ಎಲ್ಲಾ ಒತ್ತಡದಿಂದ ಮುಕ್ತರಾದ Virat Kohli ಈಗ RCB ಗೆ ಮತ್ತೆ ಕ್ಯಾಪ್ಟನ್!! | Oneindia

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+