ಮಿನಿಬಸ್ ಮಗುಚಿ 22ರ ಯುವಕ ಸಾವು, ಹಲವರಿಗೆ ಗಾಯ

ಉಡುಪಿಯ ಶಿರ್ವಾ-ಬೆಳ್ಮಣ್ ರಸ್ತೆಯ ಪಿಲರುಕಣದಲ್ಲಿ ಭಾನುವಾರ ಮಿನಿ ಬಸ್ ವೊಂದು ಮಗುಚಿ ಇಪ್ಪತ್ತೆರಡು ವರ್ಷದ ಯುವಕ ಮೃತಪಟ್ಟು, ಹಲವರಿಗೆ ಗಾಯಗಳಾಗಿವೆ

ಉಡುಪಿ, ಮೇ 8: ಮಿನಿ ಬಸ್ ಮಗುಚಿ, 22 ವರ್ಷದ ಯುವಕನೊಬ್ಬ ಮೃತಪಟ್ಟು ಹಲವರು ಗಾಯಗೊಂಡ ಘಟನೆ ಶಿರ್ವಾ-ಬೆಳ್ಮಣ್ ರಸ್ತೆಯ ಪಿಲರುಕಣದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಬಡಗು ಪಣಿಮಾರುವಿನ ಸುನೀಲ್ ಮೂಲ್ಯ ಮೃತ ಯುವಕ. ಬೆಳ್ಮಣ್ ನಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿ, ಶಂಕರಪುರಕ್ಕೆ ವಾಪಸ್ ಬರುವಾಗ ಘಟನೆ ಸಂಭವಿಸಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಬಸ್ ವಿಪರೀತ ವೇಗವಾಗಿ ಚಲಿಸುತ್ತಿತ್ತು. ಮತ್ತು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಹಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಆ ಪೈಕಿ ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅಪಘಾತ ಗಾಯಾಳುಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.[ತ್ಯಾವರೆಕೊಪ್ಪದಲ್ಲಿ ಅಪಘಾತ, ಮದುವೆಗೆ ಹೊರಟಿದ್ದ ಏಳು ಮಂದಿ ಸ್ಥಳದಲ್ಲೇ ಸಾವು]

One dead, several injured after mini bus topples

ಚಾಲಕನ ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಒಟ್ಟಾರೆ ಘಟನಾ ಸ್ಥಳದಲ್ಲಿನ ಸನ್ನಿವೇಶ ಮನ ಕಲಕುವಂತಿತ್ತು. ಗಾಯಾಳುಗಳ ಸಂಖ್ಯೆ ಜಾಸ್ತಿಯಾಗಿತ್ತು. ಆ ಪೈಕಿ ಸುನೀಲ್ ಮೂಲ್ಯ ಸಾವನ್ನಪ್ಪಿದ್ದು, ಮದುವೆಯಿಂದ ಹಿಂತಿರುಗುತ್ತಿದ್ದವರಲ್ಲಿ ಶೋಕದ ವಾತಾವರಣ ಸೃಷ್ಟಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+