ಕಿತ್ತಲೆ ವಲಯದಿಂದ ಹಸಿಲು ವಲಯದತ್ತ ಉಡುಪಿ ಜಿಲ್ಲೆ ಹೆಜ್ಜೆ

ಉಡುಪಿ, ಏಪ್ರಿಲ್ 20: ರಾಜ್ಯದಲ್ಲಿ ಕೊರೊನಾ ಕೇಸ್‌ಗಳನ್ನು ಗಮನಿಸಿ ಪ್ರದೇಶಗಳನ್ನು ಹಸಿರು, ಕಿತ್ತಲೆ ಹಾಗೂ ಕೆಂಪು ವಲಯ ಎಂದು ವಿಂಗಡನೆ ಮಾಡಲಾಗಿತ್ತು. ಈ ಪೈಕಿ ಉಡುಪಿ ಕಿತ್ತಲೆ ವಲಯಕ್ಕೆ ಸೇರಿಕೊಂಡಿತ್ತು. ಆದರೆ, ಈಗ ಇದು ಹಸಿರು ವಲಯದತ್ತ ಹೆಜ್ಜೆ ಹಾಕುತ್ತಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಜಿ ಜಗದೀಶ್ ಸಂತಸ ವ್ಯಕ್ತಪಡಿಸಿದ್ದಾರೆ. ಉಡುಪಿಯ ಶಾರದಾ ಕಲ್ಯಾಣ ಮಂಟಪ ಉಡುಪಿ ಜಿಲ್ಲಾಧಿಕಾರಿ ಕೊರೊನಾ ಪ್ರಕರಣಗಳ ಬಗ್ಗೆ ಮಾತನಾಡಿದ್ದು, ಇನ್ನು ಆರು ದಿನ ಜಿಲ್ಲೆಯಲ್ಲಿ ಹೊಸ ಕೊರೊನಾ ಪ್ರಕರಣಗಳು ಕಂಡು ಬಾರದೆ ಇದ್ದರೆ, ಹಸಿರು ವಲಯಕ್ಕೆ ಉಡುಪಿ ಬರಲಿದೆ ಎಂದು ತಿಳಿಸಿದ್ದಾರೆ.

22 ದಿನಗಳಿಂದ ಉಡುಪಿಯಲ್ಲಿ ಒಂದೂ ಕೊರೊನಾ ಕೇಸ್ ದೃಢವಾಗಿಲ್ಲ. ಇದು ಹೀಗೆ ಮುಂದುವರೆದು, 28 ದಿನಗಳಲ್ಲಿ ಯಾವುದೇ ಹೊಸ ಕೊರೊನಾ ಪ್ರಕರಣಗಳು ದಾಖಲಾಗದೆ ಇದ್ದರೆ ಉಡುಪಿ ಹಸಿರು ವಲಯಕ್ಕೆ ಸೇರಿಕೊಳ್ಳಲಿದೆ. ಈ ತಿಂಗಳು ಉಡುಪಿಯಲ್ಲಿ ಯಾವುದೇ ಕೇಸ್ ಕಂಡು ಬಂದಿಲ್ಲ.

No New Cases In Udupi From 22 Days

ಉಡುಪಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸಹಾಯ ಮಾಡುತ್ತಿರುವ ಜನಪ್ರತಿನಿಧಿಗಳಿಗೆ, ವೈದ್ಯರಿಗೆ, ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ 169 ಆಶಾ ಕಾರ್ಯಕರ್ತರಿಗೆ ತಲಾ ಎರಡು ಸಾವಿರ ರೂಪಾಯಿ ಪ್ರೋತ್ಸಾಹ ಧನವಾಗಿ ನೀಡಿದೆ.

ಉಡುಪಿಯಲ್ಲಿ ಮೂರು ಕೊರೊನಾ ವೈರಸ್‌ ಪಾಸಿಟಿವ್ ಪ್ರಕರಣಗಳು ಈವರೆಗೆ ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+