ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮಾರಿಹಬ್ಬ' ಎನ್ನುವುದು ಬಲಿ ಪಡೆಯುವುದಾ? ಪ್ರಮೋದ್ ಮಧ್ವರಾಜ್ ಟಾಂಗ್

|
Google Oneindia Kannada News

ಉಡುಪಿ, ಡಿಸೆಂಬರ್ 15 : ಮುಂದಿದೆ ಮಾರಿಹಬ್ಬ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸ್ಟೇಟಸ್ ಗೆ ಮೀನುಗಾರಿಕೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿರುಗೇಟು ನೀಡಿದ್ದಾರೆ.

ಶಿರಸಿ ಗಲಭೆ ಪ್ರಕರಣ: 62 ಮಂದಿಗೆ ಮಧ್ಯಂತರ ಜಾಮೀನುಶಿರಸಿ ಗಲಭೆ ಪ್ರಕರಣ: 62 ಮಂದಿಗೆ ಮಧ್ಯಂತರ ಜಾಮೀನು

"ನಿಂಬಾಳ್ಕರ್, ರಾಮಲಿಂಗ ರೆಡ್ಡಿ ಹಾಗು ಕೆಂಪಯ್ಯನಂಥ ಜನರಿದ್ದರೆ ಮುಂದಿದೆ ನೋಡಿ ಇನ್ನು ಶಿರಸಿಯ ದೊಡ್ಡ ಮಾರಿಕಾಂಬ ಹಬ್ಬ" ಎನ್ನುವ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಫೇಸ್ ಬುಕ್ ಸ್ಟೇಟಸ್ ಗೆ ಉಡುಪಿಯಲ್ಲಿ ಪ್ರತಿಕ್ರಿಯಿಸಿರುವ ಪ್ರಮೋದ್ ಮಧ್ವರಾಜ್, "ಮಾರಿಹಬ್ಬ ಎನ್ನುವ ಮೂಲಕ ಬಲಿ ಪಡೆಯುವ ಸೂಚನೆಯಾ ಎಂದು ಪ್ರಶ್ನಿಸಿದ್ದಾರೆ. ಮುಂದಿನ ಚುನಾವಣೆ ಗೆಲುವಿಗಾಗಿ ಗಲಭೆ ಹಬ್ಬಿಸುವ ಯತ್ನ ನಡೆಯುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

Minister Pramodh Madhvaraj reacts about Ananth Kumar Hegde's FB status

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ಎಲ್ಲರೂ ಹಿಂಸಾಚಾರ ನಡೆಸಲು ಮುಂದಾಗಿದ್ದಾರೆ. ಅಮಿತ್ ಶಾ ಅವರು ಪ್ರತಾಪ್ ಸಿಂಹನಿಗೆ ಗಲಾಟೆ ಮಾಡಲು ಹೇಳಿದ್ದರು. ಆ ವೀಡಿಯೋ ವೈರಲ್ ಆಗಿತ್ತು. ಶಾ ಸೂಚನೆಯಂತೆ ರಾಜ್ಯದಲ್ಲಿ ನಡೆಯುತ್ತಿದೆ, ಕೇಂದ್ರ ಸಚಿವನಾಗಿ ಹೆಗಡೆ ಈ ರೀತಿಯ ಹೇಳಿಕೆ ಸರಿಯಲ್ಲ ಎಂದು ಅನಂತ್ ಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿದರು.

ಪರೇಶ್ ಮೇಸ್ತಾ ಸಾವು: 106 ಕ್ರಿಮಿನಲ್ ಕೇಸ್ ಜಡಿದ ಪೊಲೀಸರುಪರೇಶ್ ಮೇಸ್ತಾ ಸಾವು: 106 ಕ್ರಿಮಿನಲ್ ಕೇಸ್ ಜಡಿದ ಪೊಲೀಸರು

2018ರ ರಾಜ್ಯ ಚುನಾವಣೆಗೆ ಪ್ರಧಾನಿ ಮೋದಿ-ಅಮಿತ್ ಷಾ ಕರ್ನಾಟಕ ಕ್ಕೆ ಪ್ರಚಾರಕ್ಕೆ ಬರಲಿ. ಆದರೆ, ರಾಜ್ಯದಲ್ಲಿ ಗಲಭೆ ಎಬ್ಬಿಸುವುದು ಬೇಡ ಎಂದು ಪ್ರಮೋದ್ ಮಧ್ವರಾಜ್ ಅವರು ಬಿಜೆಪಿಗೆ ಟಾಂಗ್ ಕೊಟ್ಟರು.

ಶಿರಸಿ ಗಲಭೆಗೆ ಸಂಬಂಧಿಸಿದಂತೆ 62 ಮಂದಿಗೆ ಇಲ್ಲಿನ ಒಂದನೇ ಹೆಚ್ಚುವರಿ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ನೀಡಿದ ಬಳಿಕ "ಸಾಕ ಬೇಕಾ ತಪರಾಕಿ ಸಿದ್ಧರಾಮಯ್ಯನವರೇ!! ನಿಂಬಾಳ್ಕರ್, ರಾಮಲಿಂಗ ರೆಡ್ಡಿ ಹಾಗು ಕೆಂಪಯ್ಯನಂಥ ಜನರಿದ್ದರೆ ಮುಂದಿದೆ ನೋಡಿ ಇನ್ನು ಶಿರಸಿಯ ದೊಡ್ಡ ಮಾರಿಕಾಂಬ ಹಬ್ಬ!" ಎಂದು ಅನಂತ್ ಕುಮಾರ್ ಹೆಗಡೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಳ್ಳುವ ಮೂಲಕ ತಮ್ಮ ತಾಕತ್ತು ಪ್ರದರ್ಶಿಸಿದ್ದರು.

English summary
Minister of fisheries, youth empowerment and sports, Pramod Madhwaraj reacts about Union Minister for skill development Anant Kumar Hegde's Facebook status.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X