ಚಂದ್ರಗ್ರಹಣ: ಉಡುಪಿಯಲ್ಲಿ ದಿನಪೂರ್ತಿ ಕೃಷ್ಣನ ದರ್ಶನಕ್ಕೆ ಮುಕ್ತ ಅವಕಾಶ
ಉಡುಪಿ, ಜುಲೈ.26:ಶುಕ್ರವಾರ ದೇಶಾದ್ಯಂತ ಚಂದ್ರಗ್ರಹಣವಾಗಲಿದೆ. ನಾಳೆ ಗೋಚರಿಸೋ ಗ್ರಹಣಕ್ಕೆ ಬ್ಲೂ ಮೂನ್ ಎಂಬ ಸೈಡ್ ನೇಮ್ ಕೂಡ ಇದೆ. ಅದೆಷ್ಟೋ ಮಂದಿ ಚಂದ್ರಗ್ರಹಣದ ವೀಕ್ಷಣೆಗಾಗಿ ಕಾಯುತ್ತಿದ್ದಾರೆ.
ಎಲ್ಲಾ ಕಡೆಗಳಲ್ಲೂ ಗ್ರಹಣದ ಪ್ರಯುಕ್ತ ನಿತ್ಯ ಪೂಜೆಗಳಲ್ಲಿ ಬದಲಾವಣೆ ಆಗಲಿದೆ. ಆದರೆ ಉಡುಪಿಯಲ್ಲಿ ಮಾತ್ರ ಗ್ರಹಣದ ಪ್ರಯಕ್ತ ಭಕ್ತರಿಗೆ ವಿಶೇಷ ಸೇವೆಯಿದೆ. ಅಂದರೆ ಕೃಷ್ಣನ ಆರಾಧಕರಿಗೆ ಸಂತಸದ ಸುದ್ದಿಯೊಂದಿದೆ.
ನಾಳೆ ಪೂರ್ಣ ಚಂದ್ರಗ್ರಹಣವಾಗಲಿದ್ದು, ಎಲ್ಲಾ ದೇವಸ್ಥಾನಗಳಲ್ಲಿ ನಿತ್ಯ ಪೂಜೆಗಳಲ್ಲಿ ಬದಲಾವಣೆಯಾಗಲಿದೆ. ಬೆಳಗ್ಗಿನಿಂದ ಕೃಷ್ಣನ ದರ್ಶನ ಭಕ್ತರಿಗೆ ಮುಕ್ತವಾಗಿರುತ್ತದೆ. ಆದರೆ ಯಾವುದೇ ಪೂಜೆಗಳಿರುವುದಿಲ್ಲ.

ಸಂಜೆ ವೇಳೆಯಿಂದ ಪರ್ಯಾಯ ಶ್ರೀಗಳು ಹಾಗೂ ಅವರ ಕೆಲವು ಶಿಷ್ಯರು 24 ಗಂಟೆಗಳ ಕಾಲ ಉಪವಾಸದಲ್ಲಿರುತ್ತಾರೆ. ನಾಳೆ ಉಪವಾಸವಿದ್ದು, ದೇವರ ಸ್ಮರಣೆ ಮಾಡಿದರೆ ಪುಣ್ಯಫಲ ಸಿಗಲಿದೆ ಎಂದು ಪರ್ಯಾಯ ಶ್ರೀಗಳಾದ ವಿದ್ಯಾಧೀಶ ಶ್ರೀಗಳು ಹೇಳಿದ್ದಾರೆ.
ಸಂಜೆ ಗ್ರಹಣ ಮುಗಿಯುತ್ತಿದ್ದಂತೆ ಕೃಷ್ಣನ ಸ್ಪರ್ಶನವಾಗದೆ ಆರತಿ ಮಾಡಲಿದ್ದೇವೆ ಎಂದರು. ಗ್ರಹಣ ಕಾಲದಲ್ಲಿ ಜನರು ಯಾವುದಕ್ಕೂ ಭಯಪಡಬೇಕಾಗಿಲ್ಲ. ಗ್ರಹಣದಿಂದ ಒಳಿತು ಮಾತ್ರ ಸಂಭವಿಸಲಿದೆ ಎಂದರು. ಕೃಷ್ಣನ ದರ್ಶನಕ್ಕೆ ಮುಕ್ತ ಅವಕಾಶವಿದ್ದು, ಗ್ರಹಣದ ಅಂತ್ಯದಲ್ಲಿ ಎಲ್ಲಾ ಪೀಠಾಧಿಪತಿಗಳು ಕೃಷ್ಣ ಸರೋವರದಲ್ಲಿ ಮುಳುಗಿ ಪೂಜಾ ಕೈಂಕರ್ಯಗಳನ್ನು ನೆರೆವೇರಿಸುತ್ತಾರೆ.












Click it and Unblock the Notifications