ಹುಬ್ಬಳ್ಳಿ ಬಸ್ ದುರಂತದಲ್ಲಿ ಕುಂದಾಪುರದ ಸುರೇಶ್ ಸಾವು

Posted By:
Subscribe to Oneindia Kannada

ಉಡುಪಿ, ಜುಲೈ 28 : ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಬಸ್‌ ಬೆಂಕಿಗೆ ಆಹುತಿಯಾದ ದುರಂತದಲ್ಲಿ ಕುಂದಾಪುರದ ಸುರೇಶ್ ಹೆಗಡೆ ಅವರು ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಮೂವರು ಪ್ರಯಾಣಿಕರು ಸಜೀವವಾಗಿ ದಹನವಾಗಿದ್ದರು ಮತ್ತು 9 ಜನರು ಗಾಯಗೊಂಡಿದ್ದರು.

ಕುಂದಾಪುರ ತಾಲೂಕಿನ ಬಸ್ರೂರು ಸಮೀಪದ ಮೇರ್ಡಿ ನಿವಾಸಿ ಸುರೇಶ್ ಹೆಗಡೆ (52) ಮೃತಪಟ್ಟವರು. ಮೆಡಿಸೆರ್ ಎಂಬ ಕಂಪನಿಯಲ್ಲಿದ್ದ ಕೆಲಸ ಮಾಡುತ್ತಿದ್ದ ಸುರೇಶ್ ಅವರು, ತಮ್ಮ ಮಾರ್ಕೆಟಿಂಗ್ ಕೆಲಸದ ನಿಮಿತ್ತ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದರು.[ಚಿತ್ರಗಳು : ಹುಬ್ಬಳ್ಳಿಯಲ್ಲಿ ಖಾಸಗಿ ಬಸ್ ಬೆಂಕಿಗಾಹುತಿ]

Kundapura based man died in Bengaluru-Hubballi bus fire accident

ಮೊದಲು ತರೀಕೆರೆಯಲ್ಲಿ ಸಹೋದರ ಜೊತೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ನಂತರ ಮೆಡಿಸೆರ್ ಕಂಪನಿ ಸೇರಿದ್ದರು. ಪತ್ನಿ ಕೃಷ್ಣಲೀಲಾ ಮತ್ತು ಪುತ್ರನೊಂದಿಗೆ ಶಿವಮೊಗ್ಗದಲ್ಲಿ ವಾಸವಾಗಿದ್ದರು. ಸುರೇಶ್ ಗೋವಿಂದ ಹೆಗಡೆ ಮತ್ತು ಶಾರದಾ ಹೆಗಡೆ ದಂಪತಿಗಳ ದ್ವಿತೀಯ ಪುತ್ರರು.[ಹುಬ್ಬಳ್ಳಿ : ಖಾಸಗಿ ಬಸ್ಸಿಗೆ ಬೆಂಕಿ, ಮೂವರ ಸಜೀವ ದಹನ]

ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ದುರ್ಗಾಂಬ ಟ್ರಾವೆಲ್ಸ್‌ಗೆ ಸೇರಿದ ಬಸ್ಸಿಗೆ ಬುಧವಾರ ಮುಂಜಾನೆ ಹುಬ್ಬಳ್ಳಿಯ ವರೂರು ಸಮೀಪ ಬೆಂಕಿ ಹೊತ್ತಿಕೊಂಡಿತ್ತು. ಮೂವರು ಈ ದುರಂತದಲ್ಲಿ ಸಜೀವವಾಗಿ ದಹನವಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru-Hubballi private bus catches fire. 3 passengers burnt alive near Hubballi on July 27, 2016. Suresh Hegde (52) who hails from Kundapura taluk was among those who were roasted alive by flames.
Please Wait while comments are loading...