ಮಾಧ್ಯಮಗಳು ನಿಮ್ಮ ಆಸ್ತಿಯಲ್ಲ; ಕೋಟ ಶ್ರೀನಿವಾಸ ಪೂಜಾರಿ ಕಿಡಿ
ಉಡುಪಿ, ಜೂನ್ 08: ರಾಜ್ಯದ ಮಾಧ್ಯಮಗಳು ನಿಮ್ಮ ಆಸ್ತಿಯಲ್ಲ ಎಂದು ಮುಖ್ಯಮಂತ್ರಿ ವಿರುದ್ಧ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಕಿಡಿಕಾರಿದ್ದಾರೆ. ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಿಗೆ ಹೇಳಿಕೆ, ಸ್ಪಷ್ಟನೆ ಕೊಡಲು ಸಾಧ್ಯವಾದರೆ ಮಾತ್ರ ಕೊಡಿ. ನೀವು ಹೇಳಿದ್ದನ್ನೆಲ್ಲಾ ಕೇಳಬೇಕು, ಹಾಕಬೇಕು ಎಂದರೆ ಆಗಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮಗಳು ಸಮಾಜದ ಲೋಪದೋಷಗಳನ್ನು ತಿದ್ದುವ ಕೆಲಸ ಮಾಡುತ್ತವೆ.ಮಾಧ್ಯಮ ಪ್ರಜಾಪ್ರಭುತ್ವದ ಮತ್ತೊಂದು ಅಂಗ ಮಾಧ್ಯಮ. ಹೀಗಾಗಿ ಮಾಧ್ಯಮಗಳು ಸ್ವತಂತ್ರ ಶಕ್ತಿಯಿಂದ ಕೆಲಸ ಮಾಡುತ್ತಿವೆ. ಮಾಧ್ಯಮಗಳು ಸರ್ಕಾರದ ಬಗ್ಗೆ ಟೀಕೆ ಮಾಡಬಾರದು ಎಂಬುದು ಸರಿಯಲ್ಲ. ಟೀಕೆಗಳು ಬಂದರೆ ಸಮರ್ಪಕವಾದ ಉತ್ತರ ಕೊಡಿ ಎಂದು ಕಿಡಿಕಾರಿದರು.

ಮಾಧ್ಯಮಗಳ ಬಾಯಿ ಬಂದ್ ಮಾಡಲು ಯತ್ನಿಸುವುದು ಬೇಡ. ಮಾಧ್ಯಮಗಳಿಗೆ ಅವರದ್ದೇ ಆದ ಜವಾಬ್ದಾರಿ ಇದೆ. ಸರ್ಕಾರದ ಲೋಪದೋಷ ಹೇಳುವುದು ಮಾಧ್ಯಮದ ಜವಾಬ್ದಾರಿ. ಮಾಧ್ಯಮಗಳ ದನಿ ಧಮನ ಮಾಡಿದರೆ ಬಿಜೆಪಿ ಸುಮ್ಮನಿರಲ್ಲ ಎಂದು ಅವರು ಎಚ್ಚರಿಸಿದರು.












Click it and Unblock the Notifications