ಉಡುಪಿ: ಅಪಾಯದಂಚಿನಲ್ಲಿ ಅಂಗನವಾಡಿ !

Posted By:
Subscribe to Oneindia Kannada

ಉಡುಪಿ, ಮಾರ್ಚ್ 18 : ಈ ಅಂಗನವಾಡಿಯಲ್ಲಿ ಇಪ್ಪತ್ತೈದು ಮಕ್ಕಳಿದ್ದಾರೆ. ಆದರೆ, ನಗರದ ಅಂಗನವಾಡಿಗೆ ಬಂದು, ಪಾಠ ಕೇಳಿ, ಆಟವಾಡಿದ ನಂತರ ಮಕ್ಕಳು ಮನೆಗೆ ಹೋಗುವುದೇ ಸಾಹಸಮಯ. ಯಾಕೆಂದರೆ ಈ ಅಂಗನವಾಡಿ ಹತ್ತಿರ ಬೃಹದಾಕಾರದ ಕ್ರಷರ್ ಮಿಕ್ಸರ್ ಇದೆ.

ನಾಲ್ಕೈದು ತಿಂಗಳಿನಿಂದ ಇಲ್ಲಿ ಕ್ರಷರ್ ಮಿಕ್ಸರ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಅಂಗನವಾಡಿ ಮಕ್ಕಳಿಗೆ ಕ್ರಷರ್ ಧೂಳು ತಿಂದು ಬದುಕುವ ಪರಿಸ್ಥಿತಿ.[ಉಡುಪಿ: ಚಿನ್ನದ ವ್ಯಾಪಾರಿಯ ದರೋಡೆ]

Jelly crushed creates illness among anganawadi in Udupi

ಇನ್ನು ಇಲ್ಲೇ ಸಮೀಪ ಇರುವ ನೂರಾರು ಮನೆಗಳು ಕ್ರಷರ್ ಧೂಳಿನಿಂದ ಮುಚ್ಚಿ ಹೋಗಿವೆ. ಈ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ. ದಿನವಿಡೀ ಅಂಗನವಾಡಿಯ ಹಿಂದುಗಡೆಯೇ‌ ಈ ಕ್ರಷರ್ ಮಿಕ್ಸರ್ ಕಾಮಗಾರಿ ನಡೆಯುತ್ತಿದೆ. ಮಕ್ಕಳ ಆಹಾರಕ್ಕೆ ಮತ್ತು ಕುಡಿಯಲು ಬಳಸುವ ಬಾವಿಯೂ ಕ್ರಷರ್ ಧೂಳಿಗೆ ಬಲಿಯಾಗಿದೆ. ಇದಕ್ಕೆ ರಕ್ಷಣೆ ನೀಡಿ ಎಂದು ನೂರಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಗುತ್ತಿಗೆದಾರರು ಮಾತ್ರ ಕೇವಲ ನೆಟ್ ಹಾಕಿ ಸುಮ್ಮನಾಗಿದ್ದಾರೆ.

ಈ ಎಲ್ಲದರ ಪರಿಣಾಮವಾಗಿ ಅಂಗನವಾಡಿಯಲ್ಲಿ ಈ ಹಿಂದೆ ಬರುತ್ತಿದ್ದ 25 ಮಕ್ಕಳಲ್ಲಿ ಸುಮಾರು ಆರೇಳು ಮಕ್ಕಳಿಗೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡಿದೆ. ಈ ಕಾರಣದಿಂದ ಇವರು ಅಂಗನವಾಡಿಗೆ ಬರುತ್ತಿಲ್ಲ.

ಕುಂದಾಪುರ ತಾಲೂಕಿನ ಮರವಂತೆಯ ಹೊರಬಂದರು ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿರುವ ಈ ಅಂಗನವಾಡಿಯಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳ ಆರೋಗ್ಯವನ್ನು ಕೆಡಿಸುವ ಇಂತಹ ಕಾಮಗಾರಿ ನಿಲ್ಲಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A jelly crusher has been implanted near a government anganawadi (playhome) in Upupi has created dust related illness among the children who come to anganawadi.
Please Wait while comments are loading...