ಪಂಚಾಯಿತಿ ಚುನಾವಣೆ; ಆಯೋಗದಿಂದ ವಿಶೇಷ ಕೋವಿಡ್ ಕಿಟ್‌

ಉಡುಪಿ, ಡಿಸೆಂಬರ್ 17: ಉಡುಪಿ ಜಿಲ್ಲೆಯಲ್ಲಿ ಡಿಸೆಂಬರ್ 22 ಮತ್ತು 27ರಂದು ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದೆ. ಜಿಲ್ಲೆಯ ಒಟ್ಟು 153 ಗ್ರಾಮ ಪಂಚಾಯತಿಗಳಲ್ಲಿ ಮತದಾನ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

ಎಲ್ಲಾ ಮತಗಟ್ಟೆಗಳಲ್ಲಿ ಕರ್ತವ್ಯದಲ್ಲಿರುವ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕೋವಿಡ್ ಸುರಕ್ಷಾ ಕಿಟ್‌ ನೀಡಲಾಗುತ್ತದೆ. ರಾಜ್ಯ ಚುನಾವಣಾ ಆಯೋಗವೇ ಕೋವಿಡ್ ಸುರಕ್ಷಿತ ಕಿಟ್‌ಗಳನ್ನು ಸರಬರಾಜು ಮಾಡಿದೆ. ಸ್ಯಾನಿಟೈಸರ್, ಸರ್ಜಿಕಲ್ ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್‌ಗಳನ್ನು ಈ ಕಿಟ್ ಒಳಗೊಂಡಿದೆ.

ಜಿಲ್ಲೆಗೆ ಒಟ್ಟು 1,260 ಕಿಟ್‌ ಹಾಗೂ 620 ಥರ್ಮಲ್ ಸ್ಕ್ಯಾನರ್‌ಗಳನ್ನು ಸರಬರಾಜು ಮಾಡಲಾಗಿದೆ. ಒಟ್ಟು 5040 ಚುನಾವಣಾ ಸಿಬ್ಬಂದಿಗಳು ಈ ಕಿಟ್‌ ಪ್ರಯೋಜನ ಪಡೆಯಲಿದ್ದಾರೆ. ಪ್ರತಿ ಮತಗಟ್ಟೆಗೆ 4 ಚುನಾವಣಾ ಸಿಬ್ಬಂದಿ ಇರಲಿದ್ದಾರೆ.

ಪ್ರತಿ ಮತಗಟ್ಟೆಯಲ್ಲಿ ಜನರು ಸರತಿ ಸಾಲಿನಲ್ಲಿ ಬಂದು, ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾನ ಮಾಡಬೇಕು. ಥರ್ಮಲ್ ಸ್ಕ್ಯಾನರ್‌ಗಳ ಮೂಲಕ ಮತದಾರರ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಕ ಮಾಡಲಾಗಿದೆ.

ಕೋವಿಡ್ ಸುರಕ್ಷತೆ ಕಿಟ್

ಕೋವಿಡ್ ಸುರಕ್ಷತೆ ಕಿಟ್

ಕೋವಿಡ್ ಸುರಕ್ಷತೆ ಕಿಟ್‌ ಅನ್ನು ಎಂ. ಎಸ್. ಐ. ಲ್ ಸಿದ್ಧಪಡಿಸಿದೆ. ಈ ಕಿಟ್‌ಗಳಲ್ಲಿ 500 ಎಂಲ್‌ನ 4 ಸ್ಯಾನಿಟೈಸರ್ ಬಾಟೆಲ್, 100 ಎಂಎಲ್‌ನ 6 ಸ್ಯಾನಿಟೈಸ್ ಬಾಟೆಲ್, ಟ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್ 20, ಫೇಸ್ ಶೀಲ್ಡ್ 6 ಮತ್ತು 6 ಜೊತೆ ಹ್ಯಾಂಡ್ ಗ್ಲೌಸ್ ಗಳು ಹಾಗೂ 1 ಬಯೋ ಮೆಡಿಕಲ್ ಡಿಸ್ಪೋಸಲ್ ಬ್ಯಾಗ್‌ ಇದೆ.

ಎಷ್ಟು ಕಿಟ್‌ಗಳು ಬಂದಿವೆ

ಎಷ್ಟು ಕಿಟ್‌ಗಳು ಬಂದಿವೆ

ಡಿಸೆಂಬರ್ 22ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಇದಕ್ಕಾಗಿ ಉಡುಪಿಗೆ 171, ಬೈಂದೂರು 138, ಬ್ರಹ್ಮಾವರ 219 ಮತ್ತು ಹೆಬ್ರಿಗೆ 72 ಕಿಟ್‌ಗಳನ್ನು ಕಳುಹಿಸಲಾಗಿದೆ. ಡಿಸೆಂಬರ್ 27ರಂದು ನಡೆಯುವ ಎರಡನೇ ಹಂತದ ಚುನಾವಣೆಗಾಗಿ ಕುಂದಾಪುರ 287, ಕಾರ್ಕಳ 205 ಮತ್ತು ಕಾಪುಗೆ 151 ಕಿಟ್‌ಗಳನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಮತಗಟ್ಟೆಗೆ ಬರುವಾಗ ಮಾಸ್ಕ್‌

ಮತಗಟ್ಟೆಗೆ ಬರುವಾಗ ಮಾಸ್ಕ್‌

ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಮಾಡಲು ಜನರು ಮತಗಟ್ಟೆಗೆ ಬರುವಾಗ ಮಾಸ್ಕ್ ಧರಿಸಿರಬೇಕು, ಮತಗಟ್ಟೆ ಪ್ರವೇಶಿಸುವಾಗ ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಮತ ಚಲಾಯಿಸಬೇಕು. ಕೋವಿಡ್ ಸುರಕ್ಷಾ ನಿಯಮಗಳ ಉಲ್ಲಂಘನೆ ಆಗದಂತೆ ಮತದಾನ ಪ್ರಕ್ರಿಯೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗ ಸೂಚನೆ ಕೊಟ್ಟಿದೆ.

ಉಡುಪಿಯ ಕೋವಿಡ್ ವರದಿ

ಉಡುಪಿಯ ಕೋವಿಡ್ ವರದಿ

ಬುಧವಾರದ ವರದಿಯ ಪ್ರಕಾರ ಉಡುಪಿ ಜಿಲ್ಲೆಯಲ್ಲಿ 16 ಹೊಸ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 22,929. ಸಕ್ರಿಯ ಪ್ರಕರಣಗಳ ಸಂಖ್ಯೆ 125, ಇದುವರೆಗೂ ಮೃತಪಟ್ಟವರು 187.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+