ಉಡುಪಿ ಜಿಲ್ಲೆಯಾದ್ಯಂತ ಡಬಲ್ ಲಾಕ್ ಡೌನ್ ಹೇರಿಕೆ
ಉಡುಪಿ, ಏಪ್ರಿಲ್ 16: ದೇಶಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಹಾಗಾಗಿ ಉಡುಪಿ ನಗರದಾದ್ಯಂತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ ಮುಂದಾಗಿದೆ.
ಸಾಮಾಜಿಕ ಅಂತರ ಕಾಯುವ ಉದ್ದೇಶದಿಂದ ಉಡುಪಿಯ ತರಕಾರಿ ಮಾರ್ಕೆಟ್ ಸ್ಥಳಾಂತರ ಮಾಡಲಾಗಿದೆ. ನಗರದ ಹೊರ ವಲಯಕ್ಕೆ ತರಕಾರಿ ಮಾರ್ಕೆಟ್ ನ್ನು ಸ್ಥಳಾಂತರ ಮಾಡಿದ್ದಾರೆ.
ಹೊರ ಜಿಲ್ಲೆಯಿಂದ ಬರುವ ತರಕಾರಿ ವಿಲೇವಾರಿ ಹೊಸ ಸ್ಥಳ ನಿಗದಿಪಡಿಸಲಾಗಿದೆ. ಬೀಡಿನಗುಡ್ಡೆ ಮಹಾತ್ಮ ಗಾಂಧಿ ಮೈದಾನದಲ್ಲಿ ತರಕಾರಿ ವಿಲೇವಾರಿ ಮಡುತ್ತಿರುವುದು ಕಂಡುಬಂದಿದೆ.

ವಲಸೆ ಕಾರ್ಮಿಕ ಮಹಿಳೆಯರಿಗೆ ಉಚಿತ ತರಕಾರಿ ಹಂಚಿಕೆ ಮಾಡುತ್ತಿದ್ದು, ಉಚಿತ ತರಕಾರಿ ತೆಗೆದುಕೊಳ್ಳಲು ಮಹಿಳೆಯರು ಮುಗಿಬಿದ್ದಿದ್ದಾರೆ.
ಕೊರೊನಾ ವೈರಸ್ ವಿಶ್ವದ ಜನರನ್ನು ಭಯಭೀತರನ್ನಾಗಿ ಮಾಡಿದ್ದರೂ, ಸಾಮಾಜಿಕ ಅಂತರವನ್ನು ಕಾರ್ಮಿಕ ಮಹಿಳೆಯರು ಗಾಳಿಗೆ ತೂರಿದ್ದಾರೆ. ಪರಿಸ್ಥಿತಿ ನಿಯಂತ್ರಣಗೊಳಿಸಲು ಪೊಲೀಸರು ಪರದಾಡುತ್ತಿದ್ದಾರೆ.












Click it and Unblock the Notifications