ಉಡುಪಿಯಲ್ಲಿ ನವೆಂಬರ್ 24ರಿಂದ ಧರ್ಮ ಸಂಸತ್ತು

Posted By:
Subscribe to Oneindia Kannada

ಉಡುಪಿ, ಆ.12 : ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನವೆಂಬರ್ 24 ರಿಂದ 26ರ ತನಕ 'ಧರ್ಮ ಸಂಸತ್ತು' ಧರ್ಮಸಭೆ ನಡೆಯಲಿದೆ. ಎರಡು ಸಾವಿರಕ್ಕೂ ಅಧಿಕ ಸ್ವಾಮೀಜಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಹಿಂದೂ ಧರ್ಮ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಶನಿವಾರ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಧರ್ಮ ಸಂಸತ್ತು ಪೂರ್ವಭಾವಿ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರು, 'ನವೆಂಬರ್ ನಲ್ಲಿ ನೆಡೆಯುವ ಈ ಕಾರ್ಯಕ್ರಮದಲ್ಲಿ ವಿಶ್ವದ ಅನೇಕ ಸಂತರು ಪಾಲ್ಗೊಳ್ಳಲಿದ್ದಾರೆ, ಹಿಂದೂ ಸಮಾಜದ ಸಮಸ್ಯೆಗಳ ಚರ್ಚೆ ವಿವರವಾದ ಚರ್ಚೆ ನಡೆಯಲಿದೆ' ಎಂದರು.

udupi

'ಎರಡನೇ ಪರ್ಯಾಯದ ಸಂದರ್ಭ ಧರ್ಮ ಸಂತಸ್ತು ನಡೆದಾಗ ರಾಮಮಂದಿರದ ಬಾಗಿಲು ತೆರೆದಿತ್ತು. ಈ ಬಾರಿಯ ಧರ್ಮಸಂಸತ್ತು ಸಂದರ್ಭ ರಾಮ ಮಂದಿರ ನಿರ್ಮಾಣದ ನಿರ್ಣಯವಾಗಲಿ ಎಂಬುದು ನಮ್ಮ ಹಾರೈಕೆ' ಎಂದು ಹೇಳಿದರು.

ತಾಜ್ ಮಹಲ್ ಮೂಲದಲ್ಲಿ ಶಿವ ದೇವಾಲಯವೇ?: ಮತ್ತೆ ಎದ್ದಿತು ಪ್ರಶ್ನೆ

ಸಭೆಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, 'ರಾಮಮಂದಿರ ಧೋರಣೆಯಲ್ಲಿ ಬದಲಾವಣೆಯಿಲ್ಲ. ಅಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕು' ಎಂದರು.

ಡಾ. ವೀರೇಂದ್ರ ಹೆಗ್ಡೆ, ಉದ್ಯಮಿ ವಿಜಯ ಸಂಕೇಶ್ವರ, ವಿಶ್ವ ಹಿಂದೂ ಪರಿಷತ್ ಪ್ರಮುಖರು, ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

'ಗೋರಕ್ಷಣೆಯ ಮನಸ್ಸಿದ್ದರೆ ಅಭಯಾಕ್ಷರ ಆಂದೋಲನದಲ್ಲಿ ಕೈಜೋಡಿಸಿ'

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Over 2,500 Swamijis seers will participate in the Dharma Samsath in Udupi, Karnataka. Gathering aims at providing remedies to the issues faced by Hindus across the nation. Dharma Samsath will be held from November 24 to 26, 2017.
Please Wait while comments are loading...