Get Updates
Get notified of breaking news, exclusive insights, and must-see stories!

ಕೃಷ್ಣಮಠ ಯಾತ್ರಾರ್ಥಿ ಸಾವು; ಅಂತ್ಯಸಂಸ್ಕಾರ ನಡೆಸಲು ನೆರವಾದ ಸಮಾಜ ಸೇವಕರು

ಉಡುಪಿ, ಫೆಬ್ರವರಿ 9: ಕೃಷ್ಣಮಠಕ್ಕೆ ಬಂದಿದ್ದ ಯಾತ್ರಾರ್ಥಿಯೊಬ್ಬರು ಉಡುಪಿ ಶ್ರೀಕೃಷ್ಣಮಠದಲ್ಲಿ ದೇವರ ದರ್ಶನ ಪಡೆದುಕೊಂಡು, ಊರಿಗೆ ಹೊರಡಲೆಂದು ಸರಕಾರಿ ಬಸ್ಸು ನಿಲ್ದಾಣದಲ್ಲಿ ಸಿದ್ಧತೆಯಲ್ಲಿದ್ದಾಗ, ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು. ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಯಾತ್ರಾರ್ಥಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು.

ಆದರೆ ಅದಾಗಲೇ ಯಾತ್ರಾರ್ಥಿ ಮೃತಪಟ್ಟಿರುವುದು ಧೃಡಪಟ್ಟಿತು. ಶವವನ್ನು ಶವಾಗಾರದಲ್ಲಿ ರಕ್ಷಿಸಿಡಲಾಗಿತ್ತು. ಪೊಲೀಸರು ಮೃತನ ಬ್ಯಾಗಿನಲ್ಲಿ ದೊರೆತ ಚೀಟಿಗಳ ಆಧಾರಗಳ ಸಹಾಯದಿಂದ ಮೃತರ ಸಂಬಂಧಿಕರ ವಿಳಾಸ ಪತ್ತೆಗೊಳಿಸಿ ವಿಷಯ ಮುಟ್ಟಿಸಿದ್ದರು. ಮೃತ ಯಾತ್ರಾರ್ಥಿ, ರಮೇಶ್ ರಾವ್ ಟೈಲರ್ (63) ವಿನಾಯಕ ನಗರ, ನಾಯಂಡಹಳ್ಳಿ, ಬೆಂಗಳೂರಿನ ನಿವಾಸಿಯೆಂದು ತಿಳಿದುಬಂದಿತು.

ಉಡುಪಿಗೆ ಆಗಮಿಸಿರುವ ಮೃತನ ಕುಟುಂಬಿಕರಿಗೆ ಶವಸಂಸ್ಕಾರ ನಡೆಸಲು ಅಸಹಾಯಕ ಪರಿಸ್ಥಿತಿ ಎದುರಾಯಿತು. ನಗರ ಠಾಣೆಯ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಅವರು, ನೀಡಿರುವ ಸಲಹೆಯಂತೆ, ಕುಟುಂಬಿಕರು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರನ್ನು ಸಂಪರ್ಕಿಸಿ, ಅಸಹಾಯಕತೆಯನ್ನು ಹೇಳಿಕೊಂಡಿದ್ದರು.

Death Of A Krishna Math Pilgrim; The Social Workers Who Helped The Funeral

ತಕ್ಷಣ ನೆರವಿಗೆ ಬಂದ ಸಮಾಜಸೇವಕರು ಶವಪರೀಕ್ಷೆ, ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ ಉದ್ಯಾವರ ಹಿಂದು ರುದ್ರಭೂಮಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯಸಂಸ್ಕಾರವನ್ನು ನಡೆಸಿಕೊಟ್ಟರು. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಉಚಿತ ಅಂಬುಲೆನ್ಸ್ ಸೇವೆಯನ್ನು ಒದಗಿಸಿ ಮಾನವೀಯತೆ ಮೆರೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+