ಕೊಲ್ಲೂರು ದೇವಿ ದರ್ಶನ ಪಡೆದು ಬಸ್ ನಲ್ಲೇ ವಿಷ ಕುಡಿದ ದಂಪತಿ
ಉಡುಪಿ, ಜನವರಿ 10: ದೇವಸ್ಥಾನಕ್ಕೆ ಭೇಟಿ ನೀಡಿ, ಖಾಸಗಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಬಸ್ ಚಲಿಸುತ್ತಿದ್ದ ಸಂದರ್ಭ ದಂಪತಿ ವಿಷ ಕುಡಿದಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲ್ಲೂರಿನಿಂದ ಉಡುಪಿಗೆ ನಿನ್ನೆ ಈ ದಂಪತಿ ಪ್ರಯಾಣಿಸುತ್ತಿದ್ದರು. ತಮಿಳುನಾಡು ಮೂಲದವರಾದ ರಾಜ್ ಕುಮಾರ್ (35) ಹಾಗೂ ಸಂಗೀತಾ (28) ಉಡುಪಿಯ ಅಂಬಲಪಾಡಿ ಟೆಂಟ್ ನಿವಾಸಿಗಳು.
Recommended Video

ಒಂದೂವರೆ ವರ್ಷದ ಮಗನೊಂದಿಗೆ ನಿನ್ನೆ ಕೊಲ್ಲೂರಿನ ದೇವಸ್ಥಾನಕ್ಕೆ ಬಂದು ಪೂಜೆ ಮುಗಿಸಿ ಬಸ್ಸಿನಲ್ಲಿ ಬರುತ್ತಿದ್ದಾಗ ವಿಷ ಸೇವಿಸಿದ್ದಾರೆ. ಕೊಲ್ಲೂರು ಮಂಗಳೂರು ಬಸ್ ಹತ್ತಿದ್ದು, ಬಸ್ಸಿನಲ್ಲೇ ನರಳಾಡಲು ಆರಂಭಿಸಿದ ಆ ದಂಪತಿಯನ್ನು ಕಂಡು ನಿರ್ವಾಹಕ, ಚಾಲಕ ಆಸ್ಪತ್ರೆಗೆ ನೇರ ಬಸ್ ನಲ್ಲೇ ಕರದೊಯ್ದಿದ್ದಾರೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಒಂಟಿಯಾದ ಮಗುವಿನ ನೆರವಿಗೆ ಸಹ ಪ್ರಯಾಣಿಕರು ಧಾವಿಸಿದ್ದರು.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.












Click it and Unblock the Notifications