ಉಡುಪಿಯಲ್ಲಿ ಇಂದೂ ಶತಕ ದಾಟಿತು ಕೊರೊನಾ ವೈರಸ್ ಕೇಸ್
ಉಡುಪಿ, ಜೂನ್ 06: ಉಡುಪಿ ಜಿಲ್ಲೆಯಲ್ಲಿ ಇಂದು ಕೂಡ ಒಂದೇ ದಿನ ಕೊರೊನಾ ವೈರಸ್ ಪ್ರಕರಣ ಶತಕ ದಾಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 889ಕ್ಕೆ ಏರಿಕೆ ಕಂಡಿದೆ.
ಇಂದು ಜಿಲ್ಲೆಯಲ್ಲಿ ದಾಖಲಾದ ಒಟ್ಟು ಪಾಸಿಟಿವ್ ಪ್ರಕರಣಗಳು 121 ಆಗಿದೆ. ಗಮನಾರ್ಹ ಸಂಗತಿ ಎಂದರೆ, ಈ ಎಲ್ಲಾ ಸೋಂಕಿತರೂ ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ನಲ್ಲಿದ್ದವರು.ನಿನ್ನೆ 204 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದವು. ಒಟ್ಟು 2000 ಕ್ಕಿಂತ ಹೆಚ್ಚು ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಕರ್ನಾಟಕಕ್ಕೆ ಆಘಾತ; ಒಂದೇ ದಿನ 378 ಮಂದಿಗೆ ಕೊರೊನಾ ವೈರಸ್!
ಜಿಲ್ಲೆಯಲ್ಲಿ ಇದೀಗ ಒಟ್ಟು ಸೋಂಕಿತರ ಸಂಖ್ಯೆ 889 ಆಗಿದೆ. ಈ ಪೈಕಿ ಮುಂಬೈನಿಂದ ಬಂದವರು 853 ಜನರಿದ್ದಾರೆ! ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲು ಜಿಲ್ಲಾಡಳಿತ ತಯಾರಿ ನಡೆಸುತ್ತಿದೆ. ಸದ್ಯ ಜಿಲ್ಲೆಯಲ್ಲಿ ಉಡುಪಿ, ಕುಂದಾಪುರ, ಕಾರ್ಕಳ ಮತ್ತು ಕೊಲ್ಲೂರಿನಲ್ಲಿ ತಲಾ ಒಂದೊಂದು ಕೋವಿಡ್ ಆಸ್ಪತ್ರೆಯನ್ನು ತೆರೆಯಲಾಗಿದೆ. ಇನ್ನಷ್ಟು ಬೆಡ್ ಗಳ ಆಸ್ಪತ್ರೆ ತೆರೆಯುವ ಅನಿವಾರ್ಯತೆ ಇದೀಗ ಜಿಲ್ಲಾಡಳಿತಕ್ಕೆ ಎದುರಾಗಿದೆ. ಈ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತವೂ ಸಿದ್ಧತೆ ನಡೆಸುತ್ತಿದೆ.