ಬಾಬಾ ರಾಮದೇವ್ ಅಂಗಾಂಗ ಕಸಿ ಮಾಡಿಸಿದ್ದಾರಾ?
ಉಡುಪಿ, ನವೆಂಬರ್ 18: ಬಾಬಾ ರಾಮದೇವ್ ಜರ್ಮನಿಗೆ ತೆರಳಿ ಮಂಡಿ ಚಿಪ್ಪು ಬದಲಾಯಿಸಿಕೊಂಡು ಬಂದಿದ್ದಾರೆ, ಎದೆಯಲ್ಲಿ ಬೈಪಾಸ್/ಆಂಜಿಯೋಪ್ಲಾಸ್ಟಿ ಸರ್ಜರಿ ಗುರುತಿದೆ, ಹೊಟ್ಟೆಯೊಳಗಿನ ಅಂಗಾಂಗ ಕಸಿ ಮಾಡಿಸಿದ್ದಾರೆ...
ಹೀಗೆ ತಮ್ಮ ವಿರುದ್ಧ ಇರುವ ಹಲವು ವದಂತಿಗಳಿಗೆ ಅಂತರರಾಷ್ಟ್ರೀಯ ಯೋಗ ಗುರು ಬಾಬಾ ರಾಮ್ ದೇವ್ ಒಂದು ನಿಮಿಷದಲ್ಲಿ 100 ದಂಡ ಸಹಿತ ವಿವಿಧ ಕಠಿಣ ಆಸನಗಳ ಮೂಲಕ ಯೋಗ ಸಾಧನಾ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಉತ್ತರ ಕೊಟ್ಟರು.
ಉಡುಪಿಯಲ್ಲಿ ನಡೆಯುತ್ತಿರುವ ಮೂರನೇ ದಿನದ ಶಿಬಿರದಲ್ಲಿ ರಾಮ್ ದೇವ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. "ಜನ್ಮಕ್ಕಿಂತ ಕರ್ಮ ಮುಖ್ಯ. ವೇದ ಓದಿದ್ದೇನೆ, ದಲಿತ/ಆದಿವಾಸಿಗಳಿಗೂ ಸನ್ಯಾಸ ಕೊಡಿಸಿದ್ದೇನೆ. ಸಮಾನತೆ, ನ್ಯಾಯ ಪರ ನಿಲುವು ಕೆಲಸ ನನ್ನದು. ಅಸಾವುದ್ದೀನ್ ಒವೈಸಿಯಂತಹ ವ್ಯಕ್ತಿಗಲ್ಲ, ಅವರ ವಿಚಾರಕ್ಕಷ್ಟೇ ನನ್ನ ವಿರೋಧ. ನನ್ನ ವಿಚಾರ ತಿಳಿಯಬೇಕಿದ್ದರೆ ಟ್ಯೂಶನ್ ಪಡೆಯಬೇಕೆಂದ ಒವೈಸಿ ಚರ್ಚೆಗೆ ಬಂದಿಲ್ಲ, ನಾನು ಅವರ ಜೊತೆ ಮುಕ್ತ ಮಾತುಕತೆಗೆ ಸಿದ್ಧ" ಎಂದರು.

"ಮೀನು, ಮಾಂಸಾಹಾರ ತಿಂದರೂ ಆಲಸಿಗಳಾಗದೆ ಯೋಗ, ಕೆಲಸ ಮಾಡಬೇಕು. ಬೀಡಿ, ಸಿಗರೇಟು, ಮದ್ಯಪಾನ ತೊರೆದು ಸಾತ್ವಿಕ ವಿಚಾರ, ಆಚಾರ, ವ್ಯವಹಾರದಲ್ಲಿ ತೊಡಗಬೇಕು. ರೋಗ ಗುಣಪಡಿಸುವುದೇ ಯೋಗದ ಪವರ್" ಎಂದು ಬಾಬಾ ರಾಮದೇವ್ ಹೇಳಿದರು.












Click it and Unblock the Notifications