• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿ ಹೆಲಿಪ್ಯಾಡ್ ನಲ್ಲಿ ಆರ್ಮಿ ಮತ್ತು ಪೊಲೀಸರ ಜಟಾಪಟಿ

By ಉಡುಪಿ ಪ್ರತಿನಿಧಿ
|

ಉಡುಪಿ, ಎಪ್ರಿಲ್ 29: ಬೆಳಗಾವಿ ಬಳಿಕ ಉಡುಪಿಯಲ್ಲೂ ಪೊಲೀಸ್ ಮತ್ತು ಸೇನೆಯ ಗಲಾಟೆ ಮತ್ತೆ ಸದ್ದು ಮಾಡುತ್ತಿದೆ. ದೇಶಾದ್ಯಂತ ಕೊರೊನಾ ಎರ್ಮಜೆನ್ಸಿ ಸಂದರ್ಭದಲ್ಲಿ ಲಾಕ್ ಡೌನ್ ಇದೆ. ವಾಯುವಿಹಾರ, ಆಟಗಳಿಗೂ ಕೂಡ ನಿರ್ಬಂಧ ವಿಧಿಸಿದೆ.

ಹೀಗಿದ್ದರೂ, ಆದಿ ಉಡುಪಿ ಹೆಲಿಪ್ಯಾಡ್ ನಲ್ಲಿ ಆರ್ಮಿ ಸಿಬ್ಬಂದಿ ಆಟ ಆಡುತ್ತಿದ್ದು, ಇದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿ ಆರ್ಮಿಯವರ ಜೊತೆ ಮಾತಿನ‌ ಚಕಮಕಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆದಿ ಉಡುಪಿ‌ ಹೆಲಿಪ್ಯಾಡ್ ಬಳಿ ಪೊಲೀಸ್ ಮತ್ತು ಮಿಲಿಟರಿ ಜಟಾಪಟಿ ನಡೆದಿದ್ದು, ಆರ್ಮಿಯವರು ಆಡವಾಡುತ್ತಿದ್ದಲ್ಲಿಗೆ ಉಡುಪಿ ಪೊಲೀಸರು ತೆರಳಿ, "ಸರಕಾರ ಎಲ್ಲರಿಗೂ ಒಳಗಡೆ ಇರುವಂತೆ ಕಾನೂನು ವಿಧಿಸಿದೆ. ನೀವು ಇಲ್ಲಿ ಹೊರಗಡೆ ಆಟವಾಡುವುದು ಸರಿಯಲ್ಲ' ಎಂದು ಪೊಲೀಸರು ಕಿವಿಮಾತು ಹೇಳಿದ್ದಾರೆ.

ಈ ವೇಳೆ ನಮಗೂ ಕಾನೂನು ಗೊತ್ತಿದೆ ನಮ್ಮ ಮಿಲಿಟರಿ ಗ್ರೌಂಡ್ ಒಳಗೆ ಆಡುತ್ತಿದ್ದೇವೆ. ನಮ್ಮ ಫಿಸಿಕಲ್ ಫಿಟ್ನೆಸ್ ಗಾಗಿ ಹೆಲಿಪ್ಯಾಡ್ ನಲ್ಲಿ ಆಡುತ್ತಿದ್ದೇವೆ ಎಂದು ಮಿಲಿಟರಿ ಪರ್ಸನ್ ಉತ್ತರ ಕೊಟ್ಟಿದ್ದಾರೆ. ನೀವು ಒಳಗಡೆ ಆಟ ಆಡಿ, ಸಾರ್ವಜನಿಕವಾಗಿ ಬೇಡ ಎಂದು ಪೊಲೀಸ್ ಸಿಬ್ಬಂದಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಜನರಿಗೆ ಅನ್ವಯವಾಗುವ ಕಾನೂನು ಈ ಸೈನಿಕರಿಗೆ ಇಲ್ಲವೇ, ಅವರು ಆಡಬಹುದಾದರೆ ನಾವ್ಯಾಕೆ ಆಡಬಾರದು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಮಿಲಿಟರಿಯವರು ಆದಿ ಉಡುಪಿಯ ಎನ್ ಸಿಸಿ ಮೈದಾನದಲ್ಲಿ ಆಡುತ್ತಿದ್ದರು ಎನ್ನಲಾಗಿದೆ.

English summary
Army personnel were playing a game at the Adi Udupi helipad, and the police had objected to the play Game.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X