ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಶ್ಚಿಮ ಘಟ್ಟದ ತಪ್ಪಲಿನಿಂದ ಕಡ್ತಲ ಗ್ರಾಮಕ್ಕೆ ಬಂದ ಕಾಳಿಂಗ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ.13: ಪಶ್ಚಿಮ ಘಟ್ಟದ ತಪ್ಪಲಲ್ಲಿ ಕಾಣಸಿಗುವ ಅಪರೂಪದ ಕಾಳಿಂಗ ಸರ್ಪ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದಲ್ಲಿ ಕಂಡು ಬಂದಿದೆ. ಆಹಾರ ಅರಸಿಕೊಂಡು ಜನವಸತಿ ಪ್ರದೇಶಕ್ಕೆ ಬಂದ ಭಾರೀ ಗಾತ್ರದ ಈ ಕಾಳಿಂಗ ಸರ್ಪವನ್ನು ಇದೀಗ ಸಂರಕ್ಷಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಪದೇ ಪದೇ ಸರ್ಪ ಕಾಣಿಸಿಕೊಳ್ಳುತ್ತಿದ್ದು, ಆತಂಕಗೊಂಡ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಉರಗ ತಜ್ಞ ಅನಿಲ್ ಪ್ರಭು ಅವರ ಸಹಾಯ ಪಡೆದು ಈ ಕಾಳಿಂಗವನ್ನು ಸೆರೆ ಹಿಡಿಯಲಾಯ್ತು.

A King Serpent came to Kadthal village in Karkala Taluk in search of food

ಕವಣಾಪುರ ಶಾಲಾ ಕೊಠಡಿಯ ಕಬೋರ್ಡ್ ನಲ್ಲಿ ನಾಗರ ಹಾವು ಪ್ರತ್ಯಕ್ಷಕವಣಾಪುರ ಶಾಲಾ ಕೊಠಡಿಯ ಕಬೋರ್ಡ್ ನಲ್ಲಿ ನಾಗರ ಹಾವು ಪ್ರತ್ಯಕ್ಷ

ಸುಮಾರು 12 ಅಡಿ ಉದ್ದ, ಹದಿನೈದು ಕೆ.ಜಿ ತೂಗುವ ಈ ಹಾವನ್ನು ಕುದುರೆಮುಖ ಅಭಯಾರಣ್ಯಕ್ಕೆ ಮತ್ತೆ ಬಿಡಲಾಗಿದೆ. "ವಿಷಕಾರಿಯಾದ ಈ ಹಾವು ಮಳೆಗಾಲದಲ್ಲಿ ಹೆಚ್ಚಾಗಿ ಆಹಾರ ಅರಸಿಕೊಂಡು ಹೊರಬರುತ್ತೆ. ಈ ಕಾಳಿಂಗ ಸರ್ಪ ಕೂಡಾ ಆಹಾರವಿಲ್ಲದೆ ಸೊರಗಿದಂತೆ ಕಾಣುತ್ತದೆ.

A King Serpent came to Kadthal village in Karkala Taluk in search of food

ಈ ಗಾತ್ರದ ಕಾಳಿಂಗ ಸರ್ಪವು ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾತ್ರ ಕಾಣಸಿಗುವ ಅಪರೂಪದ ಸರೀಸೃಪ. ಆಹಾರ ಹುಡುಕಿಕೊಂಡು ಬರುವ ಸರ್ಪಗಳು ಯಾವುದೇ ತೊಂದರೆ ಉಂಟುಮಾಡುವುದಿಲ್ಲ. ಅವುಗಳನ್ನು ಸಂರಕ್ಷಿಸುವ ಕರ್ತವ್ಯ ನಮ್ಮದು ಎಂದು ಉರಗ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

English summary
A King Serpent came to Kadthal village in Karkala Taluk in search of food. Snake expert Anil Prabhu has preserved Kalinga and left the Kudremukh Wildlife Sanctuary
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X