ತುಮಕೂರು: ಈ ಕಾರಣದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವ ನಿರ್ಧಾರದಿಂದ ಹಿಂದೆ ಸರಿದ ಅರ್ಚಕ?

ತುಮಕೂರು, ಆಗಸ್ಟ್ 22: ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದೇನೆಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಅರ್ಚಕರೊಬ್ಬರು ಮರಳಿ ಹಿಂದೂ ಧರ್ಮಕ್ಕೆ ಮರಳಿರುವ ಘಟನೆ ತುಮಕೂರಲ್ಲಿ ನಡೆದಿದೆ.

ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿಯ ಹೀರೆಹಳ್ಳಿ ಗ್ರಾಮದ ಹೆಚ್ ಆರ್ ಚಂದ್ರಶೇಖರಯ್ಯ(61) ಉರುಫ್ ಮಂಜಣ್ಣ ಎಂಬುವವರು ಕೆಲವು ವೈಯಕ್ತಿಕ ಸಮಸ್ಯೆಗಳ ಕಾರಣ ತಮ್ಮ ಸ್ವಇಚ್ಛೆಯಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಗೊಂಡಿದ್ದೇನೆ ಎಂದು ಆಗಸ್ಟ್ 18ರಂದು ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಿದ್ದರು. ಇನ್ನಮುಂದೆ ತಮ್ಮ ಹೆಸರು ಮುಬಾರಕ್ ಪಾಷ ಎಂದು ಬದಾಯಿಸಿಕೊಂಡಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರು.

ಆದರೆ ಎರಡು ದಿನಗಳಲ್ಲಿ ಈ ಪೋಸ್ಟರ್ ಸಾಮಾಜಿಕ ಜಾಲಾತಾಣದಲ್ಲಿ ಬಾರಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಚಂದ್ರಶೇಖರಯ್ಯರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದರು. ಚಂದ್ರಶೇಖರಯ್ಯರಿಗೆ ಮನವರಿಕೆ ಮಾಡಿದ್ದರು.

Urdigere: The Hindu Priest Turns back his Decision to conversion to the Islam religion

ಮತಾಂತರಗೊಳ್ಳಲು ಕಾರಣವೇನು?

ಅಣ್ಣ ತಮ್ಮಂದಿರ ನಡುವೆ ಮನಸ್ತಾಪವಿದ್ದ ಕಾರಣ ಚಂದ್ರಶೇಖರಯ್ಯ ಮಾನಸಿಕವಾಗಿ ನೊಂದಿದ್ದರಂತೆ. ಈ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿಕೊಳ್ಳಬೇಕೆಂದೂ ಕೂಡ ಆಲೋಚಿಸಿದ್ದರಂತೆ. ಆದರೆ ಮುಸ್ಲಿಂ ಧರ್ಮಕ್ಕೆ ಹೋದರೆ ಅಲ್ಲಿ ಮಣ್ಣು ಮಾಡುತ್ತಾರೆ ಎಂದು ನಿರ್ಧರಿಸಿದ್ದೆ . ಕಾನೂನು ಬದ್ದವಾಗಿ ಮತಾಂತರಗೊಳ್ಳಲು ನಿರ್ಧರಿಸಿದ್ದಾಗಿ ಹೇಳಿಕೆ ಬಿಡುಗಡೆ ಮಾಡಿದ್ದಾಗಿ ಎಂದು ಚಂದ್ರಶೇಖರಯ್ಯ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಈಗ ಚಂದ್ರಶೇಖರಯ್ಯ ಹೇಳುತ್ತಿರುವುದೇನು?

ಮುಸ್ಲಿಂ ಜಾತಿಯಲ್ಲಿ ಸತ್ತರೆ ಅವರೇ ಮಣ್ಣು ಮಾಡುತ್ತಾರೆ ಎಂದು ನಿರ್ಧರಿಸಿದ್ದೆ, ಇದು ಸತ್ಯವಾದ ಮಾತು. ಆದರೆ ಮತಾಂತರವಾಗಿಲ್ಲ, ಹಾಗುತ್ತೇನೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದೆ, ಆದರೆ ಆಗಿಲ್ಲ. ನಾನೇ ಕಾನೂನು ಬದ್ದವಾಗಿ ಹೋಗೋಣ ಅಂದುಕೊಂಡಿದ್ದೆ. ದಾಖಲಾತಿಗಳನ್ನು ಕೊಡಬೇಕಿತ್ತು, ಸಾಯೋತನಕ ಅನ್ನ ಹಾಕುತ್ತಾರೆ, ಮುಂಜಿ ಮಾಡಿಸಿಕೊಂಡು ಸತ್ತರೆ ಅಂತ್ಯಕ್ರಿಯೆಯನ್ನು ಚೆನ್ನಾಗಿ ಮಾಡುತ್ತಾರೆ ಎಂದು ಭಾವಿಸಿ ಈ ನಿರ್ಧಾರ ಮಾಡಿದ್ದೆ, ಆದರೆ ಮತಾಂತರಗೊಂಡಿಲ್ಲ ಎಂದು ತಿಳಿಸಿದ್ದಾರೆ.

ನಿರ್ಧಾರ ವಾಪಸ್‌ ತೆಗೆದುಕೊಂಡಿದ್ದೇಕೆ?

ಮತಾಂತರವಾಗುತ್ತಿರುವ ವಿಷಯ ತಿಳಿದು ಬಿಜೆಪಿ ಸೊಗಡು ಶಿವಣ್ಣ, ಅಂಗಾರಪ್ಪ ನನಗೆ ಕರೆ ಮಾಡಿ ಮಾತನಾಡಿದರು, ನನ್ನ ಅಳಿಯ ಮತ್ತು ಮಕ್ಕಳು ಕರೆ ಮಾಡಿ ಮನವಿ ಮಾಡಿದರು. ಹಾಗಾಗಿ ಊರಿನ ಜನತೆಗೋಸ್ಕರ ಮತ್ತೆ ವಾಪಸ್‌ ಬಂದಿದ್ದೇನೆ. ಅಲ್ಲದೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕಾದರೆ ಮುಂಜಿ ಮಾಡಿಸಿಕೊಳ್ಳಬೇಕು. ಆದರೆ ನನಗೆ ಶುಗರ್ ಇದೆ, ಹಾಗಾಗಿ ನಾನು ಮತಾಂತರವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನಗೆ ಕಳೆದ ಹತ್ತಾರು ವರ್ಷಗಳಿಂದ ನಾನು ಮುಸ್ಲಿಂ ಬಾಂಧವರೊಂದಿಗೆ ಉತ್ತಮ ಬಾಂಧವ್ಯವಿದೆ. ಆ ಕಾರಣದಿಂದ ನಾನು ಒಂದೆರಡು ಬಾರಿ ಮಸೀದಿಗೆ ಹೋಗಿದ್ದೇನೆ, ಅಲ್ಲಿ ನನಗೆ ಸನ್ಮಾನ ಮಾಡಿದ್ದರು. ಹಬ್ಬ ಹರಿದಿನಗಳಲ್ಲಿ ಮುಸ್ಲಿಂ ಸಮುದಾಯದಂತೆ ವೇಷಭೂಷಣ ತೊಡುತ್ತಿದ್ದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+