Tumakuru Railway Station: ಹೈಟೆಕ್ ಆಗಲಿದೆ ತುಮಕೂರು ರೈಲ್ವೆ ನಿಲ್ದಾಣ: ವಿಡಿಯೋ ನೋಡಿ
ಅಮೃತ ಭಾರತ ನಿಲ್ದಾಣ ಯೋಜನೆಯಡಿ ತುಮಕೂರು ರೈಲ್ವೆ ನಿಲ್ದಾಣ ಅಭಿವೃದ್ಧಿಯಾಗಲಿದೆ. ಕಲ್ಪತರು ನಾಡಿನ ಹೊಸ ರೈಲ್ವೆ ನಿಲ್ದಾಣ ಸಾಕಷ್ಟು ಹೈಟೆಕ್ ಆಗಿರಲಿದ್ದು, ಇದರ ವಿಡಿಯೋವನ್ನು ನೈಋತ್ಯ ರೈಲ್ವೆ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ.
"ತುಮಕೂರು ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಪರಿವರ್ತನೆಗೆ ಸಾಕ್ಷಿಯಾಗಿ, ಅಮೃತ್ ಭಾರತ್ ನಿಲ್ದಾಣಗಳ ಯೋಜನೆಯಡಿ ಅಭಿವೃದ್ಧಿಯನ್ನು ಬಿಂಬಿಸುವ ದರ್ಶನ." ಎನ್ನುವ ಶೀರ್ಷಿಕೆಯಡಿ ಹೊಸ ರೈಲ್ವೆ ನಿಲ್ದಾಣ ಹೇಗಿರಲಿದೆ ಎನ್ನುವ ವಿಡಿಯೋವನ್ನು ಹಂಚಿಕೊಂಡಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ ನಗರದಲ್ಲಿ ರೈಲ್ವೆ ನಿಲ್ದಾಣದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈಗ ರೈಲ್ವೆ ನಿಲ್ದಾಣ ಕೂಡ ಹೈಟೆಕ್ ಆಗಲಿದ್ದು ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಹೆಚ್ಚಿನ ರೈಲುಗಳಿಗೆ ಬೇಡಿಕೆ
ತುಮಕೂರು ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಈ ಭಾಗದ ರೈಲು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದು, ಹೆಚ್ಚಿನ ರೈಲುಗಳಿಗೆ ಬೇಡಿಕೆ ಇಟ್ಟಿದ್ದಾರೆ. ಟ್ವೀಟ್ ಮಾಡಿರುವ ಪ್ರಯಾಣಿಕರೊಬ್ಬರು, "ಕೇವಲ 70 ಕಿಮೀ ಪ್ರಯಾಣಿಸಲು ನಾವು 1 ಗಂಟೆ ಕಾಯಬೇಕು ಮತ್ತು 3 ಗಂಟೆಗಳ ಪ್ರಯಾಣ ಮಾಡಬೇಕು,! ದಯವಿಟ್ಟು ತುಮಕೂರಿಗೆ ಮೀಸಲಾದ ರೈಲನ್ನು ಪರಿಚಯಿಸಿ" ಎಂದು ಮನವಿ ಮಾಡಿದ್ದಾರೆ.
Witness the transformation underway at Tumakuru Railway Station, a walkthrough depicting development under Amrit Bharat Stations Scheme.#AmritStations#RailInfra4Karnataka@RailMinIndia @drmsbc @PIBBengaluru pic.twitter.com/thxh1d5Bzh
— South Western Railway (@SWRRLY) November 29, 2023
"ಹೊಸ ತುಮಕೂರು-ದಾವಣಗೆರೆ ಮತ್ತು ಪಾವಗಡ-ರಾಯದುರ್ಗ ರೈಲು ಮಾರ್ಗಕ್ಕಾಗಿ ತುಮಕೂರು ನಿಲ್ದಾಣದಲ್ಲಿ ಹೆಚ್ಚಿನ ಪ್ಲಾಟ್‌ಫಾರ್ಮ್‌ಗಳನ್ನು ಒದಗಿಸಬೇಕು." ಎಂದು ಮತ್ತೊಬ್ಬರು ಮನವಿ ಮಾಡಿಕೊಂಡಿದ್ದಾರೆ.
"ಆಕರ್ಷಕ ನಿರ್ಮಾಣಗಳು ಮತ್ತು ಬಣ್ಣಗಳೊಂದಿಗೆ ಕೇವಲ ಫೇಸ್ ಲಿಫ್ಟ್, ಹುಲ್ಲುಹಾಸುಗಳು ನಿಜವಾದ ಉದ್ದೇಶವನ್ನು ಪೂರೈಸುವುದಿಲ್ಲ ಸರ್, ದಯವಿಟ್ಟು ಸಾಮಾನ್ಯ ಅಗತ್ಯಗಳನ್ನು ಪೂರೈಸಲು ಪ್ಯಾಸೆಂಜರ್ ರೈಲುಗಳನ್ನು ಓಡಿಸಲು ಯೋಚಿಸಿ. ಗಣ್ಯ ವರ್ಗವನ್ನು ಮಾತ್ರ ನೋಡಬೇಡಿ. ರೈಲ್ವೆಗೆ ಲಾಭ ಮಾಡುವ ಉದ್ದೇಶ ಇರಬಾರದು. ಸೇವಾ ಮನೋಭಾವನೆ ಇರಬೇಕು." ಎಂದು ಮತ್ತೊಬ್ಬರು ಮನವಿ ಮಾಡಿದ್ದಾರೆ.
ರಾಜ್ಯದ ಈ ನಿಲ್ದಾಣಗಳು ಮೇಲ್ದರ್ಜೆಗೆ
ಅಮೃತ ಭಾರತ ನಿಲ್ದಾಣ ಯೋಜನೆಯಡಿ ಕರ್ನಾಟಕದ ಹಲವು ರೈಲ್ವೇ ನಿಲ್ದಾಣಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಬೆಂಗಳೂರು ಕೇಂದ್ರ, ಬಿಜಾಪುರ, ಹೊಸಪೇಟೆ, ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ ಟೌನ್, ತೋರಣಗಲ್ಲು, ಬೆಳಗಾವಿ, ಬಳ್ಳಾರಿ, ಯಶವಂತಪುರ, ಅಳ್ನಾವರ, ಬೆಂಗಳೂರು ನಗರ, ಬಂಗಾರಪೇಟೆ, ದಾವಣಗೆರೆ, ಧಾರವಾಡ, ಗದಗ, ಹಾಸನ, ಕೃಷ್ಣರಾಜಪುರ ಮತ್ತು ತುಮಕೂರು ರೈಲ್ವೆ ನಿಲ್ದಾಣಗಳು ಹೊಸದಾಗಿ ನಿರ್ಮಾಣವಾಗಲಿದೆ.












Click it and Unblock the Notifications