ಮೋದಿಯನ್ನು ಜೀವಂತ ಸುಡುವ ಕಾಲ ಬಂದಿದೆ ಎಂದ ಕರ್ನಾಟಕ ಕಾಂಗ್ರೆಸ್ ಮುಖಂಡ

ತುಮಕೂರು, ನವೆಂಬರ್ 9: ಅಪನಗದೀಕರಣದ ಘೋಷಣೆ ಮಾಡಿದ ವೇಳೆ, 50 ದಿನ ಕಾಲಾವಕಾಶ ಕೊಡಿ, ಅಷ್ಟರಲ್ಲಿ ಎಲ್ಲವೂ ಸರಿಹೋಗುತ್ತದೆ. ಇಲ್ಲದಿದ್ದರೆ ನನ್ನನ್ನು ಜೀವಂತವಾಗಿ ಸುಡಿ ಎಂದಿದ್ದರು ಪ್ರಧಾನಿ ಮೋದಿ. ಅವರನ್ನು ಜೀವಂತವಾಗಿ ಸುಡುವ ಕಾಲ ಈಗ ಬಂದಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದ ಅವರು, ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರಕಾರದ ನಡಿಗೆಯನ್ನು ಕತ್ತೆಗೆ ಕೂಡ ಹೋಲಿಕೆ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಅದು ಶ್ರಮ ಜೀವಿ. ಅದರಂತೆ ಕೆಲಸ ಕೂಡ ಮಾಡಿಲ್ಲ ಎಂದಿದ್ದಾರೆ.

This is the time to burn PM Modi alive, says TBJ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಗುಳ್ಳೆನರಿಗೆ ಹೋಲಿಸಿದರೆ ಸೂಕ್ತ ಆಗುತ್ತದೆ. ಇಂದಿನ ಪ್ರತಿಭಟನೆಗೆ ಕತ್ತೆಯನ್ನು ಕರೆತರುವ ಬದಲು ಗುಳ್ಳೆನರಿ ತಂದಿದ್ದರೆ ಸೂಕ್ತವಾಗಿರುತ್ತಿತ್ತು ಎಂದು ಅವರು ವ್ಯಂಗ್ಯವಾಡಿದ್ದಾರೆ. ನೋಟು ನಿಷೇಧದ ವಿರುದ್ಧ ತುಮಕೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜಯಚಂದ್ರ, ಈ ರೀತಿ ಆಕ್ರೋಶ ವ್ಯಕ್ತಪಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+