ಪ್ರಯಾಣಿಕರೇ ಗಮನಿಸಿ; ಬೆಂಗಳೂರು-ತುಮಕೂರು ರೈಲು ವೇಳಾಪಟ್ಟಿ ಬದಲು
ತುಮಕೂರು, ನವೆಂಬರ್ 26; ನೈಋತ್ಯ ರೈಲ್ವೆ ಕೆಎಸ್ಆರ್ ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಸಿಹಿಸುದ್ದಿಯನ್ನು ನೀಡಿದೆ. ರೈಲು ನಂಬರ್ 06575/ 06572 ಮೆಮು ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.
ಉಭಯ ನಗರಗಳ ನಡುವಿನ ಸಂಚಾರದ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕೆಎಸ್ಆರ್ ಬೆಂಗಳೂರು-ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ರೈಲು ವೇಳಾಪಟ್ಟಿಯನ್ನು ಬದಲಾಣೆ ಮಾಡಿದೆ.

ವೇಳಾಪಟ್ಟಿಯ ವಿವರ
ರೈಲು ನಂಬರ್ 06575 ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ರೈಲು ಕೆಎಸ್ಆರ್ ಬೆಂಗಳೂರು (ಮಜೆಸ್ಟಿಕ್) ನಿಲ್ದಾಣದಿಂದ ಮಧ್ಯಾಹ್ನ 1.45ಕ್ಕೆ ಹೊರಡಲಿದೆ. ತುಮಕೂರು ನಗರಕ್ಕೆ 3.43ಕ್ಕೆ ತಲುಪಲಿದೆ.
ಈ ಮಾರ್ಗದಲ್ಲಿ ರೈಲು ಮಲ್ಲೇಶ್ವರ 1.51/ 1.52, ಯಶವಂತಪುರ 1.57/1.59, ಚಿಕ್ಕಬಣಾವರ 2.09/2.10, ಸೋಲದೇವನಹಳ್ಳಿ 2.13/ 2.14, ಗೊಲ್ಲಹಳ್ಳಿ 2.21/ 2.22, ಬೈರನಾಯಕನಹಳ್ಳಿ 2.27/ 2.28, ದೊಡ್ಡಬೆಲೆ 2.32/ 2.33, ಮುದ್ದಲಿಂಗನಹಳ್ಳಿ 2.39/ 2.40, ನಿದವಂದ 2.44/ 2.45, ದಾಬಾಸ್‌ಪೇಟೆ 2.49/ 2.50, ಹಿರೇಹಳ್ಳಿ 2.55/ 2.56, ಕ್ಯಾತಸಂದ್ರ 3.02/ 3.03 ಆಗಮನ/ ನಿರ್ಗಮನವಾಗಲಿದೆ.
ರೈಲು ನಂಬರ್ 06572 ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ರೈಲು ತುಮಕೂರಿನಿಂದ 3.50ಕ್ಕೆ ಹೊರಡಲಿದೆ. ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣವನ್ನು 5.30ಕ್ಕೆ ತಲುಪಲಿದೆ.
ಈ ಮಾರ್ಗದಲ್ಲಿ ರೈಲು ಕ್ಯಾತಸಂದ್ರ 3.56/ 3.57, ಹಿರೇಹಳ್ಳಿ 4.02/ 4.03, ದಾಬಸ್‌ಪೇಟೆ 4.08/ 4.09, ನಿದವಂದ 4.13/ 4.14, ಮುದ್ದಲಿಂಗನಹಳ್ಳಿ 4.18/ 4.19, ದೊಡ್ಡಬೆಲೆ 4.24/ 4.25, ಭೈರನಾಯಕನಹಳ್ಳಿ 4.31/ 4.32, ಗೊಲ್ಲಹಳ್ಳಿ 4.37/ 4.38, ಸೋಲದೇವನಹಳ್ಳಿ 4.45/ 4.46, ಚಿಕ್ಕಬಣಾವರ 4.49/ 4.50, ಯಶವಂತಪುರ 5.01/ 5.03 ಮತ್ತು ಮಲ್ಲೇಶ್ವರ 5.08/ 5.09 ಆಗಮನ/ ನಿರ್ಗಮನವಾಗಲಿದೆ.
ರೈಲು ಸಂಚಾರ ರದ್ದು; ವಿಜಯವಾಡ -ಗುಂಟೂರು ನಡುವಿನ ಕಾರಿಡಾರ್ ಕಾಮಗಾರಿಯ ಹಿನ್ನಲೆಯಲ್ಲಿ ದಕ್ಷಿಣ ಮಧ್ಯ ರೈಲ್ವೆ ಈ ಕೆಲವು ರೈಲುಗಳನ್ನು ರದ್ದುಗೊಳಿಸಿದೆ. ಕೆಲವು ರೈಲುಗಳ ಸಂಚಾರದ ಮಾರ್ಗ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.
ರೈಲು ನಂಬರ್ 17329 ಎಸ್ಎಸ್ಎಸ್ ಹುಬ್ಬಳ್ಳಿ-ವಿಜಯವಾಡ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಎಸ್ಎಸ್‌ಎಸ್ ಹುಬ್ಬಳ್ಳಿಯಿಂದ 27/11/2023 ರಿಂದ 3/12/2023ರ ತನಕ ರದ್ದುಗೊಳಿಸಲಾಗಿದೆ.
ರೈಲು ನಂಬರ್ 17330 ವಿಜಯವಾಡ-ಎಸ್ಎಸ್ಎಸ್ ಹುಬ್ಬಳ್ಳಿ ಪ್ರತಿದಿನದ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ವಿಜಯವಾಡದಿಂದ 28/11/2023 ರಿಂದ 4/12/2023ರ ತನಕ ರದ್ದುಗೊಳಿಸಲಾಗಿದೆ.
ಮಾರ್ಗ ಬದಲಾವಣೆ; ರೈಲು ನಂಬರ್ 12509 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಗೌಹಾತಿ ವಾರಕ್ಕೆ ಮೂರು ಬಾರಿ ಸಂಚಾರ ನಡೆಸುವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಎಸ್‌ಎಂವಿಟಿ, ಬೆಂಗಳೂರಿನಿಂದ 29/11/2023 & 1/12/2023ರಂದು ವಿಜಯವಾಡ, ಗುಡಿವಾಡ, ಭೀಮಾವರಂ ಟೌನ್ ಮೂಲಕ ಸಂಚಾರ ನಡೆಸಲಿದೆ.
ರೈಲು ನಂಬರ್ 18111 ಟಾಟಾ ನಗರ-ಯಶವಂತಪುರ ವಾರದ ಎಕ್ಸ್‌ಪ್ರೆಸ್ ರೈಲು ಟಾಟಾ ನಗರದಿಂದ 30/112023ರಂದು ಹೊರಡುವ ಮಾರ್ಗ ಬದಲಾಯಿಸಲಾಗಿದೆ. ರೈಲು ಭೀಮಾವರಂ ಟೌನ್, ಗುಡಿವಾಡ, ವಿಜಯವಾಡ ಮೂಲಕ ಸಂಚಾರ ನಡೆಸಲಿದೆ.












Click it and Unblock the Notifications