ಎಚ್‌ಡಿಕೆ ಕೂಡ ನೆಮ್ಮದಿಯಾಗಿರಲು ದೇವೇಗೌಡ ಬಿಡಲ್ಲ: ಸೋಮಣ್ಣ ವಾಗ್ದಾಳಿ

Recommended Video

      ಎಚ್ ಡಿ ದೇವೇಗೌಡ ಮೇಲೆ ಆರೋಪ ಹೊರಿಸಿದ ಬಿಜೆಪಿ ನಾಯಕ ವಿ ಸೋಮಣ್ಣ | Oneindia Kannada

      ತುಮಕೂರು, ಮೇ 29: ದೇವೇಗೌಡರು ಕುಮಾರಸ್ವಾಮಿಯವರನ್ನೂ ನೆಮ್ಮದಿಯಾಗಿರಲು ಬಿಡುವುದಿಲ್ಲ, ದೇವೇಗೌಡರ ರಾಜಕೀಯ ಆಟವೇ ಅಂಥದ್ದು ಎಂದು ಬಿಜೆಪಿ ಶಾಸಕ ವಿ. ಸೋಮಣ್ಣ ದೂರಿದ್ದಾರೆ.

      ತುಮಕೂರಿನಲ್ಲಿ ಮಂಗಳವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೇವೇಗೌಡರ ಗರಡಿಯಲ್ಲೇ ಪಳಗಿದವನು, ಅವರ ರಾಜಕೀಯ ಆಟಗಳು ನನಗೆ ತಿಳಿದಿದೆ. ಅವರು ಯಾರನ್ನೂ ನೆಮ್ಮದಿಯಾಗಿ ಅವರ ಕೆಲಸಗಳನ್ನು ಮುನ್ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಡುವುದಿಲ್ಲ ಬದಲಾಗಿ ದೇವೇಗೌಡರು ತಮ್ಮ ಮನಸ್ಸಿನಲ್ಲಿರುವ ರಾಜಕೀಯ ಆಟಗಳನ್ನು ಆಡಲು ಜನರನ್ನು ಬಳಸಿಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ.

      ಬಿಜೆಪಿ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಅವರನ್ನು ಮುಖ್ಯಮಂತ್ರಿಯಾಗಲು ಬಿಡಬಾರದು ಎನ್ನುವ ಒಂದೇ ಒಂದು ಕಾರಣಕ್ಕೆ ಕಾಂಗ್ರೆಸ್‌ ಪಕ್ಷದ ಜತೆಗೆ ಜೆಡಿಎಸ್ ಕೈ ಜೋಡಿಸಿದೆ. ಕಾಂಗ್ರೆಸ್‌ ನ್ನು ನಿರಾಯುಧರನ್ನಾಗಿ ಮಾಡಿದೆ.

      Somanna accuses Devegowda not allow HDK to be peaceful

      ಜತೆಗೆ ಕುಮಾರಸ್ವಾಮಿಯವರನ್ನೂ ಕೂಡ ನಿರಾಯುಧರನ್ನಾಗಿ ಮಾಡಿದೆ. ಇದು ದೇವೇಗೌಡರ ರಾಜಕೀಯ ಆಟ ಅವರು ಯಾರ ಮಾತನ್ನೂ ಕೇಳುವುದಿಲ್ಲ, ಅವರ ಮನಸ್ಸಿನಲ್ಲಿರುವುದನ್ನು ಬೇರೆಯವರ ಮೇಲೆ ಹೇರಲು ಪ್ರಯತ್ನಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+