ಶಿರಾ: ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಬಲಿ
ತುಮಕೂರು, ಮೇ 21: ತುಮಕೂರು ಜಿಲ್ಲೆಯ ಶಿರಾ ಪಟ್ಟಣದ ಹೊರವಲಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಬಲಿಯಾಗಿದ್ದಾರೆ.
ಸಿಗಂದೂರಿನಿಂದ ಶಿರಾಗೆ ತೆರಳುತ್ತಿದ್ದ ಹನುಮಾನ್ ಟ್ರಾವೆಲ್ಸ್ ಬಸ್, ಲಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದು, ಅದರಲ್ಲಿ 10 ಮಂದಿ ಸ್ಥಿತಿ ಗಂಭೀರವಾಗಿದೆ.

ಮೃತರೆಲ್ಲರೂ ಶಿರಾ ಪಟ್ಟಣದ ಪಟ್ಟನಾಯಕನಹಳ್ಳಿ ನಿವಾಸಿಗಳು. ಬಸ್‌ನಲ್ಲಿ 60 ಮಂದಿ ಪ್ರಯಾಣಿಕರಿದ್ದರು.
ಸಿಗಂದೂರಿಗೆ ತೆರಳಿದ್ದ ಇವರು ಚೌಡೇಶ್ವರಿಯ ದರ್ಶನ ಪಡೆದು ಊರಿಗೆ ವಾಪಸಾಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಜೈಹಿಂದ್ ಎಂಬ ಹೋಟೆಲ್ ಬಳಿ ಲಾರಿಗೆ ಬಸ್ ಡಿಕ್ಕಿ ಹೊಡೆದಿದೆ.
ಅನುಷಾ (7), ಸವಿತಾ (21), ರತ್ನಮ್ಮ (35), ಶಂಕರ್ (35), ಅಶ್ವತ್ಥನಾರಾಯಣ (50), ಸುಮಲತಾ (21), ಗಿರಿಜಮ್ಮ (50) ಮೃತ ದುರ್ದೈವಿಗಳು.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಶಿರಾ ಮತ್ತು ತುಮಕೂರಿನ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.












Click it and Unblock the Notifications