ಶಬರಿಮಲೆ ತೀರ್ಪು: ಅ.1 ರಂದು ಶಿವಸೇನೆಯಿಂದ ಕೇರಳ ಬಂದ್

Recommended Video

      Sabarimala Verdict : ಅಕ್ಟೋಬರ್ 1 ರಂದು ಶಿವಸೇನೆಯಿಂದ ಕೇರಳ ಬಂದ್ | Oneindia Kannada

      ತಿರುವನಂತಪುರಂ, ಸೆಪ್ಟೆಂಬರ್ 29: ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ವಿರೋಧಿಸಿ ಶಿವಸೇನೆಯು ಕೇರಳ ಬಂದ್ ಗೆ ಕರೆನೀಡಿದೆ.

      ಅಕ್ಟೋಬರ್ 1 ರಂದು 12 ಗಂಟೆಗಳ ಕಾಲ ಕೇರಳ ರಾಜ್ಯದಾದ್ಯಂತ ಬಂದ್ ಗೆ ಕರೆನೀಡಲಾಗಿದ್ದು, ತೀರ್ಪನ್ನು ವಿರೋಧಿಸುವ ಸಂಘಟನೆಗಳು ಬಂದ್ ಗೆ ಬೆಂಬಲ ನೀಡುವ ಸಾಧ್ಯತೆ ಇದೆ.

      800 ವರ್ಷಗಳ ಅಯ್ಯಪ್ಪ ದೇವಾಲಯದ ಇತಿಹಾಸದಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶವಿರಲಿಲ್ಲ. 10 ವರ್ಷ ವಯಸ್ಸಿನಿಂದ 50 ವರ್ಷ ವಯಸ್ಸಿನವರೆಗಿನ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡದಿರುವುದಕ್ಕೆ ಕಾರಣ, ಆ ವಯಸ್ಸಿನ ಹೆಣ್ಣುಮಕ್ಕಳು ಋತುಮತಿಯರಾಗುತ್ತಾರೆ ಎಂಬುದು.

      Sabarimala Verdict: Shiv Sena calls Kerala bandh on Oct 1

      ಋತುಮತಿಯಾಗುವ ಹೆಣ್ಣು ಮಕ್ಕಳು ದೇವಾಲಯಕ್ಕೆ ಪ್ರವೇಶಿಸುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಈ ದೇವಾಲಯದ ಆಡಳಿತ ಮಂಡಳಿಯೇ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ಆದರೆ ಶುಕ್ರವಾರ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಈ ನಿರ್ಬಂಧವನ್ನು ತೆರವುಗೊಳಿಸಲಾಗಿದ್ದು, ಸುಪ್ರೀಂ ತೀರ್ಪನ್ನು ಹಲವರು ಖಂಡಿಸಿದ್ದಾರೆ.

      ತೀರ್ಪಿಗೆ ಸಂಬಂಧಿಸಿದಂತೆ ಮರುಪರಿಶೀಲನಾ ಅರ್ಜಿಯನ್ನು ದೇವಾಲಯದ ಆಡಳಿತ ಮಂಡಳಿ ಸಲ್ಲಿಸುವ ಸಾಧ್ಯತೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+