WPL 2025: ಬೆಂಗಳೂರಿನಲ್ಲಿ ಮಹಿಳಾ ಪ್ರೀಮಿಯರ್ ಲೀಗ್‌ ಹರಾಜು; ದಿನಾಂಕ, ಸಮಯ, ತಂಡಗಳ ಪರ್ಸ್

ಐಪಿಎಲ್ ಮೆಗಾ ಹರಾಜು ಮುಕ್ತಾಯವಾಗಿದ್ದು ಎಲ್ಲಾ ಫ್ರಾಂಚೈಸಿಗಳು ಪಂದ್ಯಾವಳಿಗೆ ಸಜ್ಜಾಗುವತ್ತ ಗಮನ ಹರಿಸಿವೆ. ಐಪಿಎಲ್‌ಗೆ ಮುನ್ನ ಮಹಿಳಾ ಪ್ರೀಮಿಯರ್ ಲೀಗ್ (WPL) ನಡೆಯಲಿದ್ದು, ಹರಾಜು ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ 15ರಂದು ಬೆಂಗಳೂರಿನಲ್ಲಿ ಹರಾಜು ನಡೆಯಲಿದೆ. ಐದು ಫ್ರಾಂಚೈಸಿಗಳು ತಂಡವನ್ನು ಮತ್ತಷ್ಟು ಬಲಿಷ್ಠವಾಗಿಲು ಈಗಾಗಲೇ ಲೆಕ್ಕಾಚಾರ ಮಾಡಿಕೊಂಡಿವೆ.

120 ಕ್ರಿಕೆಟಿಗರು 2025ರ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 91 ಭಾರತೀಯ ಕ್ರಿಕೆಟಿಗರಿದ್ದರೆ, 29 ವಿದೇಶಿ ಆಟಗಾರರಿದ್ದಾರೆ. ಮೊದಲ ಎರಡು ವರ್ಷಗಳಲ್ಲೇ ಮಹಿಳಾ ಪ್ರೀಮಿಯರ್ ಲೀಗ್‌ ಮಹಿಳಾ ಕ್ರಿಕೆಟ್‌ನ ಪ್ರಮುಖ ಲೀಗ್ ಆಗಿ ಬೆಳೆದಿದ್ದು, ಎಲ್ಲಾ ದೇಶಗಳ ಕ್ರಿಕೆಟಿಗರು ಆಡಲು ಆಸಕ್ತಿ ತೋರುತ್ತಿದ್ದಾರೆ.

Wpl 2025 player auction date time players list live streaming

ಹರಾಜಿನಲ್ಲಿ 82 ಅನ್‌ಕ್ಯಾಪ್ಟ್‌ ಭಾರತೀಯ ಆಟಗಾರರ ಜೊತೆ 8 ವಿದೇಶಿ ಅನ್‌ಕ್ಯಾಪ್ಟ್ ಆಟಗಾರರು ಹರಾಜು ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಹರಾಜಿನಲ್ಲಿ 19 ಆಟಗಾರರಿಗೆ ಮಾತ್ರ ಸ್ಲಾಟ್‌ಗಳು ಖಾಲಿ ಇದ್ದು ಯಾರಿಗೆ ಅದೃಷ್ಟ ಸಿಗಲಿದೆ ಎನ್ನುವ ಕುತೂಹಲವಿದೆ.

ಹರಾಜು ದಿನಾಂಕ, ಸಮಯ

ಡಿಸೆಂಬರ್ 15ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಯುಪಿ ವಾರಿಯರ್ಸ್ ಫ್ರಾಂಚೈಸಿಗಳು ಹರಾಜಿನಲ್ಲಿ ಭಾಗವಹಿಸಲಿವೆ.

ತಂಡಗಳ ಬಳಿ ಉಳಿದಿರುವ ಪರ್ಸ್

ಗುಜರಾತ್ ಜೈಂಟ್ಸ್ ಬಳಿ ₹4.4 ಕೋಟಿ ಪರ್ಸ್ ಉಳಿದಿದ್ದು ಹೆಚ್ಚು ಪರ್ಸ್‌ನೊಂದಿಗೆ ಹರಾಜಿಗೆ ಬರಲಿದೆ. ಯುಪಿ ವಾರಿಯರ್ಸ್ 3.9 ಕೋಟಿ ರೂಪಾಯಿ ಪರ್ಸ್ ಹೊಂದಿದ್ದರೆ, ಆರ್ ಸಿಬಿ ಬಳಿ 3.25 ಕೋಟಿ ರೂಪಾಯಿ ಪರ್ಸ್ ಇದೆ. ಮುಂಬೈ ಇಂಡಿಯನ್ಸ್ 2.65 ಕೋಟಿ ರೂಪಾಯಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ 2.5 ಕೋಟಿ ರೂಪಾಯಿ ಪರ್ಸ್ ಹೊಂದಿವೆ.

ಎಲ್ಲಾ ತಂಡಗಳು ಬಹುತೇಕ ಅದೇ ತಂಡವನ್ನು ಉಳಿಸಿಕೊಂಡಿದ್ದು, ಬೆಂಚ್ ಬಲವನ್ನು ಹೆಚ್ಚಿಸಲು ಬಯಸುತ್ತವೆ. ಮೊದಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿದ್ದರೆ, 2024ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಶಸ್ತಿ ಗೆದ್ದಿತ್ತು, ಎರಡೂ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಗುಜರಾತ್ ಜೈಂಟ್ಸ್ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯನ್ನು ವೀಕ್ಷಕರು ನೇರ ಪ್ರಸಾರದಲ್ಲಿ ವೀಕ್ಷಿಸಬಹುದು. ಟಿವಿಯಲ್ಲಿ ವೀಕ್ಷಿಸುವವರು ಸ್ಪೋರ್ಟ್ಸ್ 18 ವಾಹಿನಿಯಲ್ಲಿ ನೇರಪ್ರಸಾರವನ್ನು ನೋಡಲು ಅವಕಾಶವಿದ್ದು, ಜಿಯೋ ಸಿನಿಮಾ ಮೊಬೈಲ್ ಅಪ್ಲಿಕೇಷನ್‌ ಕೂಡ ಹರಾಜು ಪ್ರಕ್ರಿಯೆಯನ್ನು ನೇರ ಪ್ರಸಾರ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+