ಕ್ರಿಕೆಟಿಗ ಜಾನಿ ಬೈರ್‌ಸ್ಟೋವ್ ತರ ಮಾಡಬೇಡಿ: ವಿಂಬಲ್ಡನ್ ಆಟಗಾರರಿಗೆ ಆಯೋಜಕರ ಮನವಿ
ಜುಲೈ 3 ರಿಂದ ವಿಂಬಲ್ಡನ್ ಪ್ರಾರಂಭವಾಗಲಿದ್ದು, ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಮತ್ತು ಕ್ರೋಕೆಟ್ ಕ್ಲಬ್‌ನಲ್ಲಿ ಕೆಲವು ಆಕ್ಷನ್-ಪ್ಯಾಕ್ಡ್ ಟೆನಿಸ್‌ಗಾಗಿ ಇಂಗ್ಲೆಂಡ್‌ನ ಕ್ರೀಡಾಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ನೊವಾಕ್ ಜೊಕೊವಿಕ್ ಅವರು ರೋಜರ್ ಫೆಡರರ್ ಅವರ ದಾಖಲೆಯ ಎಂಟು ವಿಂಬಲ್ಡನ್ ಪ್ರಶಸ್ತಿಗಳನ್ನು ಸರಿಗಟ್ಟಲು ಕಾಯುತ್ತಿದ್ದು ಎಲ್ಲರ ಚಿತ್ತ ಅವರ ಮೇಲೆ ನೆಟ್ಟಿದೆ.
ಫ್ರೆಂಚ್ ಓಪನ್ ಫೈನಲ್‌ನಲ್ಲಿ ಕ್ಯಾಸ್ಪರ್ ರೂಡ್ ಅವರನ್ನು ಸೋಲಿಸುವ ಮೂಲಕ ಜೊಕೊವಿಕ್ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಐತಿಹಾಸಿಕ 23 ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದರು. ಈ ಮೂಲಕ ರಾಫೆಲ್ ನಡಾಲ್ ಅವರನ್ನು ಹಿಂದಿಕ್ಕಿ ಹೊಸ ಪುರುಷರ ಸಿಂಗಲ್ಸ್ ದಾಖಲೆಯನ್ನು ನಿರ್ಮಿಸಿದರು. ಜೊಕೊವಿಕ್ ಎಟಿಪಿ ಶ್ರೇಯಾಂಕದಲ್ಲಿ ವಿಶ್ವ ನಂ. 1 ಗೆ ಮರಳಲು ಕಾರ್ಲೋಸ್ ಅಲ್ಕರಾಜ್ ಅವರನ್ನು ಸೋಲಿಸಿದರು. ಆದರೆ ಅಲ್ಲಿಂದೀಚೆಗೆ, ಅಲ್ಕಾರಾಜ್ ಕ್ವೀನ್ಸ್ ಫೈನಲ್ ಗೆದ್ದ ನಂತರ ನಂಬರ್ 1 ಸ್ಥಾನಕ್ಕೆ ಮರಳಿದರು.

ಇನ್ನು ಇಂಗ್ಲೆಂಡ್‌ನಲ್ಲಿ ಜಸ್ಟ್ ಸ್ಟಾಪ್ ಆಯಿಲ್ ಪ್ರತಿಭಟನೆ ನಡೆಯುತ್ತಿದೆ. ವಿಂಬಲ್ಡನ್ ಪಂದ್ಯದ ವೇಳೆ ಪ್ರತಿಭಟನಾಕಾರರು ಮೈದಾನಕ್ಕೆ ನುಗ್ಗುವ ಸಾಧ್ಯತೆ ಕೂಡ ಇದೆ. ಎಲ್ಲಾ ರೀತಿ ಭದ್ರತೆಗಳನ್ನು ತೆಗೆದುಕೊಂಡರೂ ಕೆಲವೊಮ್ಮೆ ಪ್ರತಿಭಟನಾಕಾರರು ಪ್ರೇಕ್ಷಕರ ಸೋಗಿನಲ್ಲಿ ಬಂದು ಮೈದಾನಕ್ಕೆ ನುಗ್ಗುತ್ತಾರೆ.
ಕ್ರಿಕೆಟ್ ಮೈದಾನಕ್ಕೆ ನುಗ್ಗಿದ್ದ ಪ್ರತಿಭಟನಾಕಾರರು
ಜಸ್ಟ್ ಸ್ಟಾಪ್ ಆಯಿಲ್ ಪ್ರತಿಭಟನಾಕಾರರು ಸೆಂಟರ್ ಕೋರ್ಟ್ ಮೇಲೆ ಕಿತ್ತಳೆ ಬಣ್ಣವನ್ನು ಎರಚಲು ಪ್ರಯತ್ನಿಸಿದರೆ 'ಜಾನಿ ಬೈರ್‌ಸ್ಟೋವ್ ರೀತಿ ಮಾಡಬೇಡಿ' ಎಂದು ವಿಂಬಲ್ಡನ್ ಸಂಘಟಕರು ಆಟಗಾರರಿಗೆ ಮನವಿ ಮಾಡಿದ್ದಾರೆ.
ಇಂಗ್ಲೆಂಡ್‌ನಲ್ಲಿ 2 ನೇ ಆಶಸ್ ಟೆಸ್ಟ್‌ನಲ್ಲಿ ಇಂತಹ ಘಟನೆ ಸಂಭವಿಸಿದೆ, ಪ್ರತಿಭಟನಾಕಾರರು ಮೈದಾನಕ್ಕೆ ನುಗ್ಗಿದ್ದ ಸಂದರ್ಭದಲ್ಲಿ ಇಂಗ್ಲೆಂಡ್ ಆಟಗಾರ ಜಾನಿ ಬೈರ್‌ಸ್ಟೋವ್ ಅವರು ಪ್ರತಿಭಟನಾಕಾರನ್ನು ಹೊತ್ತುಕೊಂಡು ಬಂದು ಮೈದಾನದಿಂದ ಹೊರಗೆ ಬಿಟ್ದಿದ್ದರು.
ವಿಂಬಲ್ಡನ್ ನೋಡಲು ಬರುವ ಪ್ರೇಕ್ಷಕರು ವಿಧ್ವಂಸಕ ಕೃತ್ಯಕ್ಕೆ ಬಳಸಬಹುದಾದ ಸ್ಪ್ರೇ ಪೇಂಟ್, ಪರ್ಸನಲ್ ಪ್ರೊಟೆಕ್ಷನ್ ಸ್ಪ್ರೇಗಳು ಮತ್ತು ಅಂಟುಗಳಂತಹ ವಸ್ತುಗಳನ್ನು ತರದಂತೆ ಎಚ್ಚರಿಕೆ ಸಂಘಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಇಂತಹ ವಸ್ತುಗಳಿಗೆ ಪ್ರವೇಶ ನಿಷೇಧಿಸಲಾಗಿದೆ.
ಹಲವು ಆಟಗಳಿಗೆ ಪ್ರತಿಭಟನಾಕಾರರ ಅಡ್ಡಿ
ನಡೆಯುತ್ತಿರುವ ಆಶಸ್ ಸರಣಿಯ ಹೊರತಾಗಿ, ಗ್ರ್ಯಾಂಡ್ ನ್ಯಾಷನಲ್ ಮತ್ತು ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್‌ಗಳಿಗೂ ಪ್ರತಿಭಟನಾಕಾರರು ಅಡ್ಡಿಪಡಿಸಿದ್ದಾರೆ. ಜಸ್ಟ್ ಸ್ಟಾಪ್ ಆಯಿಲ್ ಕಾರ್ಯಕರ್ತರು ವಿಂಬಲ್ಡನ್ ವೇಳೆ ಕೂಡ ಮೈದಾನಕ್ಕೆ ನುಗ್ಗಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿದೆ.
ಆಲ್ ಇಂಗ್ಲೆಂಡ್ ಕ್ಲಬ್‌ನ ಕಾರ್ಯಾಚರಣೆಯ ನಿರ್ದೇಶಕ ಮಿಚೆಲ್ ಡೈಟ್ ಆಟಗಾರರು ಮತ್ತು ಸಂದರ್ಶಕರ ಸುರಕ್ಷತೆಯ ಬಗ್ಗೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ತಿಳಿಸಿದರು. "ಆಟಗಾರರು, ಸಹೋದ್ಯೋಗಿಗಳು ಮತ್ತು ಸಂದರ್ಶಕರ ಸುರಕ್ಷತೆ ಮತ್ತು ಭದ್ರತೆಯು ಅತಿಮುಖ್ಯವಾಗಿದೆ. ಇತರ ಕ್ರೀಡಾಕೂಟಗಳಲ್ಲಿ ಏನಾಯಿತು ಎಂಬುದರ ಆಧಾರದ ಮೇಲೆ ಮತ್ತು ನಮ್ಮ ಪ್ರಮುಖ ಪಾಲುದಾರರ ಸಲಹೆಯ ಮೇರೆಗೆ, ನಾವು ನಮ್ಮ ಭದ್ರತಾ ಯೋಜನೆಗಳನ್ನು ಪರಿಶೀಲಿಸಿದ್ದೇವೆ, ಈಗ ಚಾಂಪಿಯನ್‌ಶಿಪ್‌ಗಳಿಗಾಗಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ" ಎಂದು ಅವರು ಹೇಳಿದಳು.
"ಏಪ್ರಿಲ್ 2023 ರಲ್ಲಿ ನಮ್ಮ ಪ್ರವೇಶದ ಷರತ್ತುಗಳನ್ನು ನವೀಕರಿಸಲಾಗಿದೆ, ನಿಷೇಧಿತ ವಸ್ತುಗಳು ಮತ್ತು ವಿಚ್ಛಿದ್ರಕಾರಕ ನಡವಳಿಕೆಯ ಕುರಿತು ಮಾರ್ಗದರ್ಶನ ನೀಡಲಾಗಿದೆ. ಮೆಟ್ರೋಪಾಲಿಟನ್ ಪೋಲಿಸ್ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ಘಟನೆ ಸಂಭವಿಸಿದರೆ ಸೂಕ್ತ ತಜ್ಞ ತಂಡಗಳು ಪ್ರತಿಕ್ರಿಯಿಸುತ್ತವೆ" ಎಂದು ಹೇಳಿದರು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications