AB de Villiers: ಸರಣಿ ಸೋಲುಗಳ ನೋವಿನಲ್ಲಿ ಆರ್‌ಸಿಬಿ; ತಂಡಕ್ಕೆ ಮರಳಲಿದ್ದಾರಾ ಎಬಿಡಿ?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಆವೃತ್ತಿಯ ಆರಂಭಕ್ಕೆ ಮುನ್ನ ಇದು ಆರ್‌ಸಿಬಿ ಹೊಸ ಅಧ್ಯಾಯ ಎಂದು ವಿರಾಟ್ ಕೊಹ್ಲಿ ಹೇಳಿದ್ದರು. ಹೊಸ ಅಧ್ಯಾಯ ನೋಡಿದ ಫ್ಯಾನ್ಸ್ ನಮಗೆ ಹಳೇ ಅಧ್ಯಾಯವೇ ಚನ್ನಾಗಿತ್ತು ಎನ್ನುತ್ತಿದ್ದಾರೆ.
ಸ್ಟಾರ್ ಬ್ಯಾಟಿಂಗ್ ಪಡೆಯೇ ಇದ್ದರೂ, ರನ್ ಗಳಿಸಲು ಪರದಾಡುತ್ತಿದ್ದಾರೆ. ಆರ್‌ಸಿಬಿ ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದರೆ, ಮೂರು ಪಂದ್ಯಗಳಲ್ಲಿ ಮಕಾಡೆ ಮಲಗಿದೆ. ಇದೆಲ್ಲಾ ನೋಡಿದ ಫ್ಯಾನ್ಸ್ ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಅವರಿಗೆ ವಿಶೇಷ ಮನವಿ ಮಾಡಿದ್ದಾರೆ.

ಆರ್‌ಸಿಬಿ ಏನಾದರೂ ಮುಂದಿನ ಪಂದ್ಯಗಳಲ್ಲಿ ಗೆಲ್ಲಬೇಕು ಅಂದರೆ ನೀವು ವಾಪಸ್ ಬರಬೇಕು ಎಂದು ಎಬಿ ಡಿ ವಿಲಿಯರ್ಸ್ ಅವರಿಗೆ ಅಭಿಮಾನಿಗಳು ಮನವಿ ಮಾಡಿದ್ದಾರೆ. ಎಬಿ ಡಿ ವಿಲಿಯರ್ಸ್ ಆರ್‌ಸಿಬಿ ತಂಡಕ್ಕಾಗಿ ಆಡುವಾಗ ಅಭಿಮಾನಿಗಳು ಅವರನ್ನು ಆಪದ್ಭಾಂಧವ ಎಂದೇ ಕರೆಯುತ್ತಿದ್ದರು, ತಂಡ ಸಂಕಷ್ಟದಲ್ಲಿದಾಗ ಬಂದು ಸೋಲುವ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದನ್ನು ಅಭಿಮಾನಿಗಳು ಎಂದೂ ಮರೆಯಲ್ಲ.
ಒಂದು ಕ್ಷಣ ಮೈ ಜುಮ್ ಅಂತು 🥹💥
— ಪರಮಾತ್ಮ..!! (@Paramathma_ABD) April 3, 2024
Please Come back Boss @ABdeVilliers17 😭🙏 #ABdeVilliers #RCBvLSG #DCvKKR
pic.twitter.com/aewFlj28kV
ಕೊಹ್ಲಿ ಬಿಟ್ಟು ಬೇರೆ ಯಾರೂ ದೊಡ್ಡ ಸ್ಕೋರ್ ಗಳಿಸುತ್ತಿಲ್ಲ, ನೀವಾದ್ರು ತಂಡಕ್ಕೆ ವಾಪಸ್ ಬಂದರೆ ಬ್ಯಾಟಿಂಗ್ ಬಲ ಹೆಚ್ಚುತ್ತದೆ. ನಿವೃತ್ತಿ ಹಿಂಪಡೆದು ವಾಪಸ್ ಬನ್ನಿ ಎಂದು ಹತಾಶ ಅಭಿಮಾನಿಗಳು ಮನವಿ ಮಾಡಿದ್ದಾರೆ.
ಮೆಂಟರ್ ಆಗಿಯಾದರೂ ಬನ್ನಿ
ನಿವೃತ್ತಿ ಪಡೆದು ಇಷ್ಟು ವರ್ಷಗಳಾದರೂ, ಅಭಿಮಾನಿಗಳು ಎಬಿಡಿಯನ್ನು ಮರೆತಿಲ್ಲ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವಾಗ ಎಬಿಡಿ ಅವರ ಫೋಟೊ ಹಿಡಿದ ಅಭಿಮಾನಿಗಳನ್ನು ನೋಡಬಹುದು. ಅಭಿಮಾನಿಗಳ ಅಭಿಮಾನ ಕಂಡು ಎಬಿಡಿ ಕೂಡ ಭಾವುಕರಾಗಿದ್ದಾರೆ.
ಆದರೆ, ಎಬಿಡಿ ನಿವೃತ್ತಿ ವಾಪಸ್ ಪಡೆದು ಮತ್ತೆ ಆರ್ ಸಿಬಿ ತಂಡಕ್ಕಾಗಿ ಆಡುವುದು ಅಸಾಧ್ಯ. ಆಟಗಾರನಾಗಿ ಅಲ್ಲದೇ ಇದ್ದರೂ ಮಾರ್ಗದರ್ಶಕರಾಗಿ ಆದರೂ ತಂಡದ ಜೊತೆ ಇದ್ದರೆ ಉತ್ತಮ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.
ಆರ್‌ಸಿಬಿ ಆಟಗಾರರಿಗೆ ಎಬಿಡಿ ಸಲಹೆ
ಸತತ ಸೋಲಿನಿಂದ ಕಂಗಾಲಾಗಿರುವ ಆರ್‌ಸಿಬಿ ತಂಡಕ್ಕೆ ಎಬಿ ಡಿ ವಿಲಿಯರ್ಸ್ ಸಲಹೆ ನೀಡಿದ್ದಾರೆ. ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಮಾತನಾಡಿದ ಅವರು, ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದು ಕೊನೆಯವರೆಗೂ ಆಡಬೇಕು ಅವರ ಜೊತೆ ಉಳಿದ ಬ್ಯಾಟರ್ ಗಳು ಸ್ಫೋಟಕ ಇನ್ನಿಂಗ್ಸ್ ಆಡಬೇಕು ಎಂದು ಹೇಳಿದ್ದಾರೆ.
ಕೊಹ್ಲಿ ಕನಿಷ್ಠ 15 ಓವರ್ ಗಳವರೆಗೆ ಬ್ಯಾಟಿಂಗ್ ಆಡಬೇಕು. ಅವರು ವಿಕೆಟ್ ಉಳಿಸಿಕೊಂಡು ಆಡುವಾಗ ಉಳಿದ ಬ್ಯಾಟರ್ ಗಳು ವೇಗವಾಗಿ ರನ್ ಗಳಿಸಿ ದೊಡ್ಡ ಮೊತ್ತ ಕಲೆಹಾಕಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಎಬಿಡಿ ಹೇಳಿರುವ ಮಾತುಗಳನ್ನು ಆರ್‌ಸಿಬಿ ಆಟಗಾರರು ಕೇಳಿಸಿಕೊಳ್ತಾರಾ? ಶನಿವಾರ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡ್ತಾರ ಎಂದು ಕಾದು ನೋಡಬೇಕಿದೆ.












Click it and Unblock the Notifications