Vaibhav Suryavanshi: 13 ವರ್ಷದ ಕ್ರಿಕೆಟಿಗನಿಗೆ ₹1.1 ಕೋಟಿ; ಯಾರು ಈ ವೈಭವ್ ಸೂರ್ಯವಂಶಿ?

ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಬಿಹಾರದ 13 ವರ್ಷದ ಹುಡುಗ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾನೆ. ಬಿಹಾರದ ಬ್ಯಾಟರ್ ವೈಭವ್ ಸೂರ್ಯವಂಶಿ ಐಪಿಎಲ್ ಹರಾಜಿನ ಇತಿಹಾಸದಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. ಸೂರ್ಯವಂಶಿ ಖರೀದಿ ಮಾಡಲು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ತೀವ್ರ ಪೈಪೋಟಿ ನಡೆಯಿತು, ಅಂತಿಮವಾಗಿ ರಾಜಸ್ಥಾನ ರಾಯಲ್ಸ್‌ 1.10 ಕೋಟಿ ರೂಪಾಯಿಗೆ ಬಿಡ್ ಮಾಡುವ ಮೂಲಕ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು.

ಐಪಿಎಲ್ ಇತಿಹಾಸದಲ್ಲೇ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎನ್ನುವ ಸಾಧನೆ ಮಾಡಿದ್ದಾರೆ. ರಾಜಸ್ಥಾನ ರಾಯಲ್ಸ್‌ಗೆ ಮುಖ್ಯ ತರಬೇತುದಾರರಾಗಿ ಹಿಂದಿರುಗಿದ ರಾಹುಲ್ ದ್ರಾವಿಡ್ ವೈಭವ್ ಸೂರ್ಯವಂಶಿ ಖರೀದಿಸಲು ಆಸಕ್ತಿ ತೋರಿದ್ದರಿಂದ ಅವರನ್ನು ರಾಜಸ್ಥಾನ ರಾಯಲ್ಸ್ ದುಬಾರಿ ಹಣ ನೀಡಿ ಖರೀದಿ ಮಾಡಿದೆ.

who is vaibhav suryavanshi 13 year old cricketer ipl auction

ಯಾರು ಈ ಸೂರ್ಯವಂಶಿ

ಬಿಹಾರದ ಸಮಸ್ತಿಪುರದಲ್ಲಿ ಜನಿಸಿದ ವೈಭವ್ ಸೂರ್ಯವಂಶಿ ಈಗಾಗಲೇ ಭಾರತ ಅಂಡರ್ - 19 ಟೆಸ್ಟ್ ತಂಡದಲ್ಲಿ ಆಡಿದ್ದಾರೆ. ಇತ್ತೀಚೆಗೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಗಮನ ಸೆಳೆದರು. 2005ರಲ್ಲಿ ಇಂಗ್ಲೆಂಡ್ ಅಂಡರ್-19 ಪರ 56 ಎಸೆತಗಳಲ್ಲಿ ಶತಕ ಬಾರಿಸಿದ ಮಾಜಿ ಇಂಗ್ಲೆಂಡ್ ಆಲ್‌ರೌಂಡರ್ ಮೊಯಿನ್ ಅಲಿ ಅವರ ಬಳಿಕ ಎರಡನೇ ವೇಗದ ಶತಕ ಗಳಿಸಿದ ದಾಖಲೆ ವೈಭವ್ ಸೂರ್ಯವಂಶಿ ಹೆಸರಿನಲ್ಲಿದೆ.

ಸ್ಫೋಟಕ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಜನವರಿ 2024ರಲ್ಲಿ 12 ವರ್ಷ ಮತ್ತು 284 ದಿನಗಳ ವಯಸ್ಸಿನಲ್ಲಿ ಪ್ರಥಮ ದರ್ಜೆ ಪಂದ್ಯಕ್ಕೆ ಪದಾರ್ಪಣೆ ಮಾಡಿದ ನಾಲ್ಕನೇ ಕಿರಿಯ ಭಾರತೀಯ ಕ್ರಿಕೆಟಿಗನಾಗಿದ್ದಾರೆ.

2023ರ ಕೂಚ್ ಬೆಹಾರ್ ಟ್ರೋಫಿ ಪಂದ್ಯಾವಳಿಯಲ್ಲಿ ಬಿಹಾರ ತಂಡದ ಪರವಾಗಿ ಆಡಿದ್ದರು. ಜಾರ್ಖಂಡ್ ವಿರುದ್ದದ ಪಂದ್ಯದಲ್ಲಿ 128 ಎಸೆತಗಳಲ್ಲಿ 22 ಬೌಂಡರಿ ಮತ್ತು ಮೂರು ಸಿಕ್ಸರ್‌ ಸಹಿತ 151 ರನ್ ಗಳಿಸಿದರೆ, ಅದೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 76 ರನ್ ಗಳಿಸಿ ಗಮನ ಸೆಳೆದರು. ಬಳಿಕ ಭಾರತ ಅಂಡರ್ 19 ಎ, ಭಾರತ ಅಂಡರ್ 19 ಬಿ, ಇಂಗ್ಲೆಂಡ್ ಅಂಡರ್19 ಮತ್ತು ಬಾಂಗ್ಲಾದೇಶ ಅಂಡರ್19 ತಂಡಗಳನ್ನು ಒಳಗೊಂಡ ನಾಲ್ಕು ತಂಡಗಳ ಸರಣಿಯಲ್ಲಿ ಆಡಿದರು.

ಮಗನ ಸಾಧನೆ ಬಗ್ಗೆ ತಂದೆ ಸಂಜೀವ್ ಸಂತೋಷ ವ್ಯಕ್ತಪಡಿಸಿದ್ದು, ದೊಡ್ಡ ಪಂದ್ಯಾವಳಿಯಲ್ಲಿ ತಮ್ಮ ಮಗ ಆಡುವುದು ಸಂತೋಷದ ವಿಷಯ ಎಂದು ಹೇಳಿದರು. ಈ ಪಂದ್ಯಾವಳಿಯಲ್ಲಿ ತಮ್ಮ ಮಗ ಉತ್ತಮವಾಗಿ ರನ್ ಗಳಿಸಿ ಭಾರತ ತಂಡಕ್ಕೆ ಆಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+