ಸ್ಮೃತಿ ಮಂದಾನ ಬಾಯ್ ಫ್ರೆಂಡ್ ಯಾರು ಗೊತ್ತೆ?
ನಿಸಿರುವ ಸ್ಮೃತಿ ಮಂದಾನ ಅವರಿಗೆ ಇದೀಗ 27 ವರ್ಷ ವಯಸ್ಸು. ಹೀಗೆ ಚಿಕ್ಕ ವಯಸ್ಸಿಗೆ ಅದ್ಭುತ ಸಾಧನೆ ಮಾಡಿರುವ ಸ್ಮೃತಿ ಮಂದಾನಾ ಅವರು ಭಾರತದ ರಾಷ್ಟ್ರೀಯ ತಂಡವನ್ನ ಕೂಡ ಅದ್ಭುತವಾಗಿ ಮುನ್ನಡೆಸಿ, ದೊಡ್ಡ ಹೆಸರನ್ನು ಸಂಪಾದನೆ ಮಾಡಿದ್ದಾರೆ. ಹಾಗೇ ಸುಮಾರು 16 ವರ್ಷಗಳಿಂದ ಕನ್ನಡಿಗರು ಕಾಯುತ್ತಿದ್ದ ಕಪ್ ಅನ್ನೂ ನಮ್ಮ ಬೆಂಗಳೂರಿಗೆ ತಂದಿದ್ದಾರೆ. ಹೀಗಿದ್ದಾಗಲೇ ಸ್ಮೃತಿ ಮಂದಾನಾ ಅವರ ಬಾಯ್‌ಫ್ರೆಂಡ್ ಯಾರಪ್ಪಾ? ಅಂತಾ ಹುಡುಗರು ಫುಲ್ ತಲೆ ಕೆಡಿಸಿಕೊಂಡಿದ್ದಾರೆ. ಆ ಪ್ರಶ್ನೆಗೆ ಉತ್ತರವನ್ನು ಇಲ್ಲಿ ಹುಡುಕೋಣ ಬನ್ನಿ.
ಸ್ಮೃತಿ ಮಂದಾನಾ ಬಾಯ್‌ಫ್ರೆಂಡ್ ಇವರೇನಾ?
ಅದು 7 ಕೋಟಿ ಕನ್ನಡಿಗರ ಕನಸಾಗಿತ್ತು ನಮ್ಮ ಆರ್‌ಸಿಬಿ ತಂಡ ಕಪ್ ಗೆದ್ದಿಲ್ಲ ಎನ್ನುವ ಬೇಸರ, ಕನ್ನಡ ನಾಡಿನ ಜನರನ್ನು ಕಾಡುತ್ತಿತ್ತು. ಹೀಗಾಗಿಯೇ ಆರ್‌ಸಿಬಿ ಕಪ್ ಗೆಲ್ಲುತ್ತೆ, ಆರ್‌ಸಿಬಿ ಕಪ್ ಗೆಲ್ಲುತ್ತೆ ಅಂತಾ ಕಾಯುತ್ತ ಇದ್ದರು ಜಗತ್ತಿನ ಅತ್ಯಂತ ನಿಷ್ಠಾವಂತ ಫ್ಯಾನ್ಸ್. ಆದರೂ ಹುಡುಗರ ತಂಡ ಮಾತ್ರ ಈ ಸಾಧನೆ ಮಾಡಲಿಲ್ಲ. ಬೆಂಗಳೂರು ಹುಡುಗರ ತಂಡ ಅಂದ್ರೆ ಆರ್‌ಸಿಬಿ (RCB) ಮೆನ್ಸ್ ಟೀಂ ಇದುವರೆಗೆ IPL ಅಖಾಡದಲ್ಲಿ ಕಪ್ ಗೆಲ್ಲಲು ಆಗಿಲ್ಲ. ಹೀಗಿದ್ದಾಗ IPL ರೀತಿಯಲ್ಲೇ ನಡೆದಿರುವ WPL ಫೈನಲ್ಸ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ ನಮ್ಮ ಆರ್‌ಸಿಬಿ ಹುಡುಗಿಯರು. ಈ ಕಪ್ ಗೆದ್ದ ತಂಡದ ಅಂದ್ರೆ ಆರ್‌ಸಿಬಿ ಟೀಂ ಕ್ಯಾಪ್ಟನ್ ಆಗಿರುವ, ಸ್ಮೃತಿ ಮಂದಾನ ಅವರ ಬಾಯ್‌ಫ್ರೆಂಡ್ ಯಾರು ಗೊತ್ತಾ? ಮುಂದೆ ಓದಿ.

ಇದೀಗ ಕಪ್ ಗೆದ್ದ ಖುಷಿಯಲ್ಲೇ ಸ್ಮೃತಿ ಮಂದಾನಾ ಅವರು ಒಬ್ಬ ಹುಡುಗನ ಜೊತೆಯಲ್ಲಿ WPL ಟ್ರೋಫಿ ಹಿಡಿದು ಫೋಟೋ ತೆಗೆಸಿಕೊಂಡಿದ್ದಾರೆ. ಹೀಗೆ ಸ್ಮೃತಿ ಮಂದಾನಾ ಜೊತೆಗಿದ್ದ ಹುಡಗನ ಹೆಸರು ಪಲಾಶ್ ಮುಚ್ಚಲ್ ಅಂತಾ. ಇದೇ ಹುಡುಗ ಸ್ಮೃತಿ ಮಂದಾನಾ ಅವರ, ಬಾಯ್ ಫ್ರೆಂಡ್ ಅಂತಾ ಹೇಳಲಾಗುತ್ತಿದೆ. ಮತ್ತೊಂದು ಕಡೆ ಈ ಇಬ್ಬರೂ ಬರೀ ಸ್ನೇಹಿತರು ಮಾತ್ರ ಅನ್ನೋ ಮಾತು ಕೂಡ ಇದೆ. ಇದನ್ನು ಮೀರಿ ಈವರೆಗೂ ಸ್ಮೃತಿ ಅವರು ಕೂಡ, ಬೇರೆ ಏನನ್ನೂ ಹೇಳಿಕೊಂಡಿಲ್ಲ. ಆದ್ರೂ ಹೊರಗಡೆ ಪಲಾಶ್ ಮುಚ್ಚಲ್ & ಸ್ಮೃತಿ ಮಂದಾನಾ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎಂಬ ಮಾತು ಓಡಾಡುತ್ತಿವೆ.
Smriti Mandhana and her boyfriend poses for a picture with WPL Trophy. pic.twitter.com/LLROMWjuhu
— Leeonie_0 (@Leeonie_0) March 18, 2024
ಯಾರು ಈ ಪಲಾಶ್ ಮುಚ್ಚಲ್?
ಪಲಾಶ್ ಮುಚ್ಚಲ್ ಮೂಲತಃ ಮಧ್ಯಪ್ರದೇಶದ, ಇಂದೋರ್ ನಗರದ ನಿವಾಸಿಯಾಗಿದ್ದಾರೆ. ಹಾಗೇ ಈ ಪಲಾಶ್ ಮುಚ್ಚಲ್ ಅವರು, ಒಬ್ಬ ಸಿಂಗರ್ ಕೂಡ ಅನ್ನೋದು ವಿಶೇಷವಾಗಿದೆ. ಇದೆಲ್ಲಾ ಏನೇ ಇರಲಿ, ಇಬ್ಬರ ಜೋಡಿ ಮಾತ್ರ ಚೆನ್ನಾಗಿದೆ ಅಂತಿದ್ದಾರೆ ಕೆಲವರು. ಇನ್ನೂ ಕೆಲವರು ಈ ಫೋಟೋಗೆ ದೃಷ್ಟಿ ಕೂಡ ತೆಗೆದಿದ್ದಾರೆ. ಈ ಮೂಲಕ ಇಬ್ಬರ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿವೆ. ಆದರೆ ಸ್ಮೃತಿ ಅವರು ಸಿಂಗಲ್ ಅಂತ ಕನಸು ಕಂಡ ಕೆಲವು ಅಭಿಮಾನಿಗಳಿಗೆ ಇದು ಎದೆಬಡಿತ ಹೆಚ್ಚಿಸುವ ಸುದ್ದಿಯಾಗಿದೆ. ಇದು ಏನೇ ಇರಲಿ, ಆರ್‌ಸಿಬಿ ಕಪ್ ಗೆದ್ದಿರುವುದು ಮಾತ್ರ ಈ ಶತಮಾನದ ಸಾಧನೆ ಅಂತಿದ್ದಾರೆ ಬೆಂಗಳೂರು ತಂಡದ ಫ್ಯಾನ್ಸ್.












Click it and Unblock the Notifications