Suryakumar Yadav: ಸೂರ್ಯನ ಅದ್ಭುತ ಕ್ಯಾಚ್ ಹಿಂದಿರುವ ಶಕ್ತಿ ಇವರೇ ನೋಡಿ

ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್‌ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದ ಆಟಗಾರ ಮಿಸ್ಟರ್‌ 360 ಖ್ಯಾತಿಯ ಸೂರ್ಯಕುಮಾರ್‌ ಯಾದವ್.. ಸೂರ್ಯಕುಮಾರ್‌ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಡೇವಿಡ್‌ ಮಿಲ್ಲರ್‌ ಅವರ ಅದ್ಭುತ್ ಕ್ಯಾಚ್‌ ಪಡೆಯದೇ ಇದ್ದಿದ್ದರೇ, ಪಂದ್ಯದ ಚಿತ್ರಣವೇ ಬದಲಾಗುತ್ತಿತ್ತು. ಆದರೆ, ಸ್ಕೈ ಚೆಂಡಿನ ಮೇಲೆ ಕಣ್ಣು ಬಿಡದೇ, ಟೀಮ್ ಇಂಡಿಯಾ ಅಭಿಮಾನಿಗಳ ಆಶಯನ್ನು ಈಡೇರಿಸಿದ್ದಾರೆ.

ಸೂರ್ಯಕುಮಾರ್‌ ಯಾದವ್‌ ಈಗ ಟಿ20 ವಿಶ್ವಕಪ್‌ ಚಾಂಪಿಯನ್‌ ತಂಡದ ಭಾಗವಾಗಿದ್ದಾರೆ. ಸ್ಕೈ ಟಿ20 ಜರ್ನಿ ಬಗ್ಗೆ ಹಲವು ಇಂಟ್ರಸ್ಟಿಂಗ್‌ ಸಂಗತಿಗಳನ್ನು ಈಗಾಗಲೇ ಹೇಳಿದ್ದಾರೆ. ಈಗ ಇಂಡಿಯನ್ಸ್‌ ಎಕ್ಸ್‌ಪ್ರೇಸ್‌ಗೆ ನೀಡಿದ ಸಂದರ್ಶನದಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.

What was running through Suryakumar Yadav s mind during those crucial moments He spoke openly about catch

ಕ್ಯಾಚ್‌ ಪಡೆದಾಗ ಏನೆಲ್ಲಾ ಗೊಂದಲ ಇತ್ತಾ?

ಇನ್ನು ಕ್ಯಾಚ್‌ ಪಡೆದ ಆ ಏಳು ಸೆಕೆಂಡ್‌ಗಳ ಬಗ್ಗೆಯೂ ಇವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ನಮ್ಮ ತಂಡದ ಫೀಲ್ಡಿಂಗ್ ಕೋಚ್‌ ವಿರಾಟ್‌, ಸೂರ್ಯ, ಅಕ್ಷರ್‌ ಪಟೇಲ್‌, ರವೀಂದ್ರ ಜಡೇಜಾ ಹಾಟ್‌ ಸ್ಪಾಟ್‌ಗಳಲ್ಲಿ ಫೀಲ್ಡ್‌ ಮಾಡುವಂತೆ ಸೂಚಿಸುತ್ತಿದ್ದರು. ಚೆಂಡು ಎಲ್ಲಿ ಹೆಚ್ಚಾಗಿ ಬರುತ್ತದೋ ಆ ಕ್ಷೇತ್ರವನ್ನೇ ನಮಗಾಗಿ ಮೀಸಲು ಇಡುತ್ತಿದ್ದರು.

ಫೈನಲ್‌ನಲ್ಲಿ ಹಿಡಿದ ಕ್ಯಾಚ್‌ ರೀತಿಯೇ ನಾನು ಹಲವು ಬಾರಿ ಅಭ್ಯಾಸ ಮಾಡಿದ್ದೇನೆ. ಒಂದೇ ದಿನ ನೀಡಿದ ಪ್ರದರ್ಶನ ಅಲ್ಲ. ನಾನು ಯಾವಾಗಲು ನಿಲ್ಲುವ ಸ್ಥಳದಿಂದ ಕೊಂಚ ದೂರದಲ್ಲಿ ನಿಂತಿದ್ದೇ. ಏಕೆಂದರೆ ಹಾರ್ದಿಕ್‌ ವೈಡ್‌ ಯಾರ್ಕರ್‌ ಹಾಕುವುದಾಗಿ ರೋಹಿತ್ ತಿಳಿಸಿದ್ದರು. ನಾನು ಕ್ಲೀಯರ್‌ ಆಗಿದ್ದೇ. ಅದು ಏನೇ ಆದರೂ ಸಹ ನಾನು ಕ್ಯಾಚ್‌ಗಳನ್ನು ಪಡೆಯಲೇ ಬೇಕು ಎಂಬ ವಿಶ್ವಾಸ ನನ್ನಲ್ಲಿತ್ತು.

ಏನು ಪ್ಲ್ಯಾನ್‌ ಮೇಲೆ ಬೌಂಲಿಂಗ್‌ ನಡೆದಿತ್ತು?

ರೋಹಿತ್ ಶರ್ಮಾ ಹೆಚ್ಚಾಗಿ ಲಾಂಗ್‌ ಆನ್‌ನಲ್ಲಿ ಫೀಲ್ಡ್‌ ಮಾಡುವುದಿಲ್ಲ. ಡೇವಿಡ್‌ ಮಿಲ್ಲರ್‌ ಚೆಂಡನ್ನು ಆಗಸಕ್ಕೆ ಚಿಮ್ಮಿಸುತ್ತಿದ್ದಂತೆ ರೋಹಿತ್ ಹಾಗೂ ನಾನು ಇಬ್ಬರು ಒಂದು ಕ್ಷಣ ನೋಡಿಕೊಂಡೆವು. ನಂತರ ಇದು ನನ್ನ ಕ್ಯಾಚ್‌ ಎಂದು ಭಾವಿಸಿ ಓಡಿ ಹೋದೆ. ರೋಹಿತ್‌ ಶರ್ಮಾ ನನ್ನ ಬಳಿಗೆ ಬರ್ತಾ ಇದ್ದಾರೆ ಎಂದು ನಾನು ಭಾವಿಸಿದ್ದೇ ಆದರೆ ಹಾಗೇ ಇರಲಿಲ್ಲ. ನಾನು ಕ್ಯಾಚ್ ಪಡೆದು ರೋಹಿತ್‌ ಶರ್ಮಾ ಅವರಿಗೆ ಎಸೆಯುವ ಪ್ಲ್ಯಾನ್ ಮಾಡಿಕೊಂಡಿದ್ದೇ. ಆದರೆ ಅವರು ಕೊಂಚ ದೂರದಲ್ಲಿ ನಿಂತಿದ್ದರು.

What was running through Suryakumar Yadav s mind during those crucial moments He spoke openly about catch

ಅದೇ ನಾಲ್ಕೈದು ಸೆಕೆಂಡುಗಳ ಕಾಲ ಏನಾಯಿತು ಎಂದು ವಿವರಿಸಲು ಆಗದು. ಈ ಕ್ಯಾಚ್‌ ಪಡೆದ ಮೇಲೆ ಜನರು ತಮ್ಮ ಪ್ರೀತಿ ಹಾಗೂ ಅಭಿಮಾನವನ್ನು ತೋರಿಸಿದ ರೀತಿ ಕಂಡು ಭಾವುಕನಾದೆ. ನನ್ನ ವಾಟ್ಸ್‌ಅಪ್‌ ಹಾಗೂ ಮೆಸೆಜ್‌ಗೆ ಹಲವರು ಸಂದೇಶವನ್ನು ಕಳುಹಿಸಿದ್ದರು. ಅಲ್ಲದೆ ಅದೇ ಒಂದು ಕ್ಯಾಚ್‌ ಸಾಮಾಜಿಕ ತಾಣದಲ್ಲೂ ಸಖತ್‌ ವೈರಲ್‌ ಸಹ ಆಗಿತ್ತು. ಆ ಐದು ಸೆಕೆಂಡ್‌ ನನ್ನ ಜೀವನವನ್ನೇ ಬದಲಿಸಿತು. ನಾನು ಆ ಕ್ಷಣಗಳಿಗೆ ಚಿರರುಣಿ ಎಂದು ಹೇಳಿದ್ದಾರೆ.

ಫಿಟ್ನೆಸ್‌ ಉತ್ತಮವಾಗಿದ್ದು ಹೇಗೆ?

ಟೀಮ್ ಇಂಡಿಯಾದ ಪ್ರತಿ ಯೊಬ್ಬ ಆಟಗಾರರ ಬಗ್ಗೆ ಈ ಸಂದರ್ಶನದಲ್ಲಿ ಬೆಳಕು ಚೆಲ್ಲಿರುವ ಸೂರ್ಯ ವಿರಾಟ್‌ ಕೊಹ್ಲಿ ಅವರ ಗುಣಗಾನ ಮಾಡಿದ್ದಾರೆ. ಅವರೊಬ್ಬ ಪವರ್‌ ಪ್ಯಾಕ್ಡ್‌ ಎನರ್ಜಿ ಪ್ಲೇಯರ್‌.. ವಿರಾಟ್‌ ಲಯದಲ್ಲಿರಲಿ, ಅಥವಾ ರನ್‌ ಬರ ಅನುಭವಿಸಲಿ ಅವರ ಅಷ್ಟೇ ಕೂಲ್‌ ಆಗಿ ಇರುತ್ತಾರೆ. ಮೈದಾನಕ್ಕೆ ಹೋಗುವಾಗ ತಮ್ಮದೇ ಧಾಟಿಯಲ್ಲಿ ಹೋಗುತ್ತಾರೆ. ಯಾವುದೇ ಒತ್ತಡವನ್ನು ತೆಗೆದುಕೊಳ್ಳುವುದಿಲ್ಲ. ಅವರು ಯಾವಗಲೂ ಸಿಕ್ಕರೂ ಒಬ್ಬ ಲೀಡರ್‌ ರೀತಿ ಮಾತನಾಡುತ್ತಾರೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+