Get Updates
Get notified of breaking news, exclusive insights, and must-see stories!

ಮತ್ತೆ ವಿರಾಟ್‌ ಕೊಹ್ಲಿಯ ಕೈಯಲ್ಲಿ ಆರ್‌ಸಿಬಿ ಕಮಾಂಡ್‌!

ಟೀಮ್ ಇಂಡಿಯಾ ಟಿ20 ವಿಶ್ವಕಪ್‌ ಗೆದ್ದು ಬೀಗಿದೆ. ಈ ಮೂಲಕ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ರಾಹುಲ್ ದ್ರಾವಿಡ್‌ ಕನಸು ನನಸಾಗಿದೆ. ಭಾರತ ಐಸಿಸಿ ಟ್ರೋಫಿ ಗೆಲುವಿನ ಆಸೆ ಫಲಿಸಿದೆ. ಈಗ ಈ ಇಬ್ಬರೂ ಸ್ಟಾರ್‌ ಬ್ಯಾಟರ್‌ಗಳು ಭಾರತದ ಪರ ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದಾರೆ.

ಟೀಮ್ ಇಂಡಿಯಾ ಈ ಬಾರಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೊಗಸಾದ ಪ್ರದರ್ಶನ ನೀಡಿದೆ. ಈ ಪ್ರದರ್ಶನವನ್ನೇ ಮುಂದುವರೆಸುವ ಇರಾದೆಯನ್ನು ಟೀಮ್ ಇಂಡಿಯಾ ಹೊಂದಿದೆ. ಮುಂಬರ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಹಾಗೂ ಚಾಂಪಿಯನ್ಸ್‌ ಟ್ರೋಫಿಗಳಲ್ಲಿ ರೋಹಿತ್‌ ಹಾಗೂ ವಿರಾಟ್‌ ಕೊಹ್ಲಿ ಇಬ್ಬರೂ ಆಡುವುದನ್ನು ಅಭಿಮಾನಿಗಳು ಕಾಣಬಹುದಾಗಿದೆ.

Virat Kohli to Lead RCB as Captain in IPL 2025 Sources Reveal

ಟಿ20 ವಿಶ್ವಕಪ್‌ನಿಂದ ನಿವೃತ್ತರಾದರೂ ಕೊಹ್ಲಿ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡುತ್ತಾರೆ. ಈ ಸುದ್ದಿ ನಿಜಕ್ಕೂ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌. ಆದರೆ ಇದಕ್ಕೂ ದೊಡ್ಡ ಗುಡ್‌ ನ್ಯೂಸ್‌ ಸಿಗುವ ಸಾಧ್ಯತೆ ಇದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ತನ್ನ ಪ್ರಶಸ್ತಿ ಕನಸನ್ನು ಸಾಕಾರಗೊಳಿಸಲು ಚೇಸಿಂಗ್‌ ಸ್ಟಾರ್‌ ಅವರ ಮನವೊಲಿಸಿ, ನಾಯಕತ್ವವವನ್ನು ವಹಿಸಿಕೊಳ್ಳುವಂತೆ ಮನವಿ ಮಾಡಲಿದೆ ಎಂದು ವರದಿ ಆಗಿದೆ.

ವಿರಾಟ್‌ ಅಭಿಮಾನಿಗಳಿಗೆ ಖುಷಿ ಸುದ್ದಿ

ಆರ್‌ಸಿಬಿ ಈ ಬಾರಿ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲಿಮಿನೇಟರ್‌ಗೆ ಕ್ವಾಲಿಫೈ ಆಗಿತ್ತು. ಆದರೆ ಎಲಿಮಿನೇಟರ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೋತು ಮುಖಭಂಗ ಅನುಭವಿಸಿತು. 18ನೇ ಆವೃತ್ತಿ ಐಪಿಎಲ್‌ಗೆ ತೆರೆ ಮರೆಯ ತಯಾರಿಗಳು ನಡೆದಿವೆ. ಈ ಬೆನ್ನಲ್ಲೆ ಈ ಸುದ್ದಿ ಬಂದಿರುವುದು ನಿಜಕ್ಕೂ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

Virat Kohli to Lead RCB as Captain in IPL 2025 Sources Reveal

ಟೀಮ್ ಇಂಡಿಯಾ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ, ಆರ್‌ಸಿಬಿ ತಂಡದ ಪರ ಆರಂಭದಿಂದಲೂ ಕಾಣಿಸಿಕೊಂಡಿದ್ದಾರೆ. ಇವರು ಐಪಿಎಲ್‌ನಲ್ಲಿ ಒಂದೇ ತಂಡದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯನ್ನು ಸಹ ಹೊಂದಿದ್ದಾರೆ. ವಿರಾಟ್‌ ಕೊಹ್ಲಿ ಉಪಸ್ಥಿತಿಯಲ್ಲಿ ಆರ್‌ಸಿಬಿ ಒಮ್ಮೆ ಚಾಂಪಿಯನ್‌ ಪಟ್ಟ ಅಲಂಕರಿಸಬೇಕು ಎಂಬುದೇ ಅಭಿಮಾನಿಗಳ ಆಶಯವಾಗಿದೆ.

ವಿರಾಟ್‌ ಸಕ್ಸಸ್‌ ಫುಲ್ ಕ್ಯಾಪ್ಟನ್‌

ವಿರಾಟ್ ಕೊಹ್ಲಿ ಐಪಿಎಲ್‌ ಇತಿಹಾಸದ ಸಕ್ಸಸ್‌ ಫುಲ್‌ ಕ್ಯಾಪ್ಟನ್‌ಗಳಲ್ಲಿ ಒಬ್ಬರು. ಇವರು ಟ್ರೋಫಿ ಗೆಲ್ಲದೆ ಇದ್ದರೂ ಇವರು ಗೆಲುವಿನ ಲೆಕ್ಕಚಾರಾದಲ್ಲಿ ಧೋನಿ, ರೋಹಿತ್‌ ಬಳಿಕದ ಸ್ಥಾನವನ್ನು ಹೊಂದಿದ್ದಾರೆ. ವಿರಾಟ್‌ 2011ರಿಂದ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಾ ಬಂದಿದ್ದರು. ಮತ್ತು 2023ಕ್ಕೆ ನಾಯಕತ್ವದಿಂದ ಕೆಳಗಿದರು. ಈ ವರೆಗೆ ವಿರಾಟ್‌ 143 ಪಂದ್ಯಗಳಲ್ಲಿ 66 ಜಯ 70 ಸೋಲು ಕಂಡಿದ್ದಾರೆ.

ಫಾಫ್‌ ಬಳಿಕ ಯಾರು?

ಆರ್‌ಸಿಬಿ ತಂಡವನ್ನು ಸದ್ಯ ಫಾಫ್‌ ಡುಪ್ಲೇಸಿಸ್ ಮುನ್ನಡೆಸುತ್ತಿದ್ದಾರೆ. ಇವರಿಗೆ ಈಗ 40 ವರ್ಷ ಮುಂದಿನ ನಾಯಕನ ಹುಡುಕಾಟದಲ್ಲಿ ಆರ್‌ಸಿಬಿ ತಂಡ ಇದೆ. ವಿರಾಟ್‌ಗೆ 36 ವರ್ಷ, ಇವರು ಇನ್ನು ನಾಲ್ಕು ವರ್ಷ ಲೀಗ್‌ನಲ್ಲಿ ಆಡಬಹುದು. ಹೀಗಾಗಿ ಆರ್‌ಸಿಬಿ ತಂಡ ಇವರಿಗೆ ಪಟ್ಟ ಕಟ್ಟಲು ಚಿಂತನೆ ನಡೆಸಿದೆ ಎಂಬ ಮಾಹಿತಿ ಸಿಕ್ಕಿದೆ.

ವಿರಾಟ್‌ ಕೊಹ್ಲಿ ಮುಂದಾಳತ್ವದಲ್ಲಿ ಆರ್‌ಸಿಬಿ ತಂಡ ಚಾಂಪಿಯನ್‌ ಪಟ್ಟಕ್ಕೆ ಏರಿ, ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳಲಿ ಎಂಬುದೇ ಅಭಿಮಾನಿಗಳ ಆಶಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+