18 ವರ್ಷದ ವಿರಾಟ್ ಕೊಹ್ಲಿ ಕನ್ನಡಿಗರ ಆರ್‌ಸಿಬಿ ತಂಡಕ್ಕೆ ಆಯ್ಕೆ ಆಗಿದ್ದು ವಿಜಯ್ ಮಲ್ಯ ಕಾರಣಕ್ಕೆ... Virat Kohli
ಕನ್ನಡಿಗರು ಅತಿಹೆಚ್ಚು ಇಷ್ಟಪಡುವ ಬೆಂಗಳೂರು ತಂಡ ಆರ್‌ಸಿಬಿ ಪಾಲಿನ ಆಪ್ತ ರಕ್ಷಕ ವಿರಾಟ್ ಕೊಹ್ಲಿ ಇದೀಗ ಕ್ರಿಕೆಟ್ ಲೋಕದ ಕಿಂಗ್. ವಿರಾಟ್ ಕೊಹ್ಲಿ ಅವರನ್ನ ಕಿಂಗ್ ಆಗಿ ಮಾಡಲು ಕಾರಣವೇ ಕನ್ನಡಿಗರು ಎನ್ನಬಹುದು. ಯಾಕಂದ್ರೆ ಕೋಟಿ ಕೋಟಿ ಆರ್‌ಸಿಬಿ ಅಭಿಮಾನಿಗಳು ಕಿಂಗ್ ವಿರಾಟ್ ಕೊಹ್ಲಿ ಅವರನ್ನ ಹೃದಯಲ್ಲಿ ಇಟ್ಟುಕೊಂಡು ಮೆರೆಸುತ್ತಿದ್ದಾರೆ. ಹೀಗಿದ್ದಾಗಲೇ, 18 ವರ್ಷದ ವಿರಾಟ್ ಕೊಹ್ಲಿ ಕನ್ನಡಿಗರ ಆರ್‌ಸಿಬಿ ತಂಡಕ್ಕೆ ಆಯ್ಕೆ ಆಗಿದ್ದು ವಿಜಯ್ ಮಲ್ಯ ಕಾರಣಕ್ಕೆ...
ಹೌದು, ವಿಜಯ್ ಮಲ್ಯ ವಿರುದ್ಧ ಗಂಭೀರ ಆರೋಪ ಇದೆ. ಅದರಲ್ಲೂ ಬರೋಬ್ಬರಿ 9000 ಕೋಟಿ ರೂಪಾಯಿ ಸಾಲ ಮಾಡಿ ಭಾರತ ಬಿಟ್ಟು ಹೋಗಿರುವ ಆರೋಪ ಕೂಡ ಇದೇ ವಿಜಯ್ ಮಲ್ಯ ಅವರ ವಿರುದ್ಧವೇ ಕೇಳಿ ಬಂದಿತ್ತು. ಹೀಗಿದ್ದಾಗ ಭಾರತಕ್ಕೆ ವಿಜಯ್ ಮಲ್ಯ ವಾಪಸ್ ಬಂದ್ರೆ ಅರೆಸ್ಟ್ ಆಗ್ತಾರೆ & ಜೈಲಿಗೂ ಹೋಗುತ್ತಾರೆ ಅನ್ನೋ ಆರೋಪ ಕೂಡ ಈಗ ಇದೆ. ಹೀಗಿದ್ದಾಗಲೇ, 18 ವರ್ಷದ ವಿರಾಟ್ ಕೊಹ್ಲಿ ಕನ್ನಡಿಗರ ಬೆಂಗಳೂರು ತಂಡಕ್ಕೆ ಆಯ್ಕೆ ಆಗಿದ್ದು ಹೇಗೆ ಅಂದ್ರೆ...

18 ವರ್ಷದ ವಿರಾಟ್ ಕೊಹ್ಲಿ...
ಕಿಂಗ್ ವಿರಾಟ್ ಕೊಹ್ಲಿ ಇಲ್ಲದೆ ಕ್ರಿಕೆಟ್ ಇಲ್ಲ, ಕ್ರಿಕೆಟ್ ಭವಿಷ್ಯ ಇರುವುದೇ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಕೈಯಲ್ಲಿ ಅಂತಾರೆ 100 ಕೋಟಿಗೂ ಹೆಚ್ಚು ಅಭಿಮಾನಿಗಳು. ಆರ್‌ಸಿಬಿ ಬೆಂಗಳೂರು ತಂಡ 2025 ಐಪಿಎಲ್ ಕಪ್ ಗೆದ್ದು ಬೀಗುವ ವಿಚಾರದಲ್ಲೂ ಕಿಂಗ್ ವಿರಾಟ್ ಕೊಹ್ಲಿ ಶ್ರಮ ಬಹುದೊಡ್ಡದು. ಹೀಗಿದ್ದಾಗಲೇ, 18 ವರ್ಷದ ವಿರಾಟ್ ಕೊಹ್ಲಿ ಕನ್ನಡಿಗರ ಆರ್‌ಸಿಬಿ ತಂಡಕ್ಕೆ ಆಯ್ಕೆ ಆಗಿದ್ದು ವಿಜಯ್ ಮಲ್ಯ ಕಾರಣಕ್ಕೆ...
ಕಿಂಗ್ ವಿರಾಟ್ ಕೊಹ್ಲಿ ಆಟಕ್ಕೆ ಮಲ್ಯ ಫಿದಾ!
ವಿರಾಟ್ ಕೊಹ್ಲಿ ಅಂಡರ್-19 ವರ್ಲ್ಡ್ ಕಪ್ ಆಡುವ ಸಮಯದಲ್ಲಿ ವಿಜಯ್ ಮಲ್ಯ ಗುರುತು ಹಿಡಿದು ಗಮನಿಸಿದ್ದರು ಎಂಬ ಸಂಗತಿ ಇದೀಗ ಇಡೀ ಜಗತ್ತಿಗೇ ಗೊತ್ತಾಗಿದೆ. ಈ ಬಗ್ಗೆ ಖುದ್ದು ವಿಜಯ್ ಮಲ್ಯ ಹೇಳಿಕೆ ನೀಡಿದ್ದು, ವಿರಾಟ್ ಕೊಹ್ಲಿ ಅಂಡರ್-19 ವರ್ಲ್ಡ್ ಕಪ್ ಗೆದ್ದಾಗ ಅವರ ಆಟ ನೋಡಿದ್ದೆ. ತುಂಬಾ ಚಿಕ್ಕ ವಯಸ್ಸಿನ ಈ ಹುಡುಗ ಭವಿಷ್ಯದ ದೊಡ್ಡ ಕ್ರಿಕೆಟ್ ಆಟಗಾರ ಆಗಲಿದ್ದಾನೆ ಎಂಬುದು ಅಂದೇ ನನಗೆ ಗೊತ್ತಾಗಿತ್ತು. ಹೀಗಾಗಿ ವಿರಾಟ್ ಕೊಹ್ಲಿಯನ್ನ ನಾವು ನಮ್ಮ ಆರ್‌ಸಿಬಿ ತಂಡಕ್ಕೆ ಖರೀದಿ ಮಾಡಿದ್ದೆವು. ಮುಂದೆ ಆಗಿದ್ದೆಲ್ಲವೂ ಇತಿಹಾಸ ಎಂದು ಇದೀಗ ವಿಜಯ್ ಮಲ್ಯ ಅವರು, ಕಿಂಗ್ ವಿರಾಟ್ ಕೊಹ್ಲಿ ಅವರನ್ನ ಮೊದಲಿಗೆ ಆರ್‌ಸಿಬಿ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.












Click it and Unblock the Notifications