Badminton: ಅಮೆರಿಕದಲ್ಲಿ ಕಾರ್ಕಳದ ಆಯುಷ್ ಶೆಟ್ಟಿ ಶೈನ್: ಭವಿಷ್ಯದ ಭರವಸೆ
ಅಮೆರಿಕದಲ್ಲಿ ಇತ್ತೀಚಿಗೆ ನಡೆದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ನವತಾರೆಯ ಉಗಮವಾಗಿದೆ. 20 ವರ್ಷದ ಯುವ ಆಟಗಾರ ತನ್ನ ಪರ್ಫೆಕ್ಟ್ ಶಾಟ್ ಹಾಗೂ ಗ್ಯಾಪ್ ಶಾಟ್‌ಗಳ ಮೂಲಕ ಎದುರಾಳಿಗಳನ್ನು ಕಟ್ಟಿ ಹಾಕಿ ಅಂಕಗಳನ್ನು ಬಾಚಿಕೊಂಡಿದ್ದಾರೆ. ತಮ್ಮ ಎತ್ತರದ್ದೇ ಲಾಭವನ್ನು ಪಡೆದ ಭಾರತದ ಆಯುಷ್ ಶೆಟ್ಟಿ ಅಂಕಗಳನ್ನು ಕಲೆ ಹಾಕುತ್ತಾ ಸಾಗಿದರು. ಸೆಮಿಫೈನಲ್ ಪಂದ್ಯದಲ್ಲಿ ಕ್ಲಾಸಿಕ್ ಪ್ರದರ್ಶನ ನೀಡಿದ ಬಳಿಕ ಇವರ ಮೇಲೆ ನಿರೀಕ್ಷೆಗಳು ಹೆಚ್ಚಾದವು. ಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಎತ್ತಿ ಇವರು ದಾಖಲೆ ಬರೆದರು. ಅಲ್ಲದೆ ಇವರ ಹೆಸರು ಕೇಳಿದ ಕರ್ನಾಟಕದ ಕ್ರೀಡಾ ಅಭಿಮಾನಿಗಳು ಇವ ನಮ್ಮವ ಎಂದು ಹುಡುಕಲು ಆರಂಭಿಸಿದರು.
ಆಯುಷ್ ಶೆಟ್ಟಿ ಉಪಾಂತ್ಯ ಪಂದ್ಯದಲ್ಲಿ ತಮಗಿಂತ ಹೆಚ್ಚಿನ ಶ್ರೇಯಾಂಕಿತ ಚೌ ಟಿಯೆನ್-ಚೆನ್ ಅವರನ್ನು ಸೋಲಿಸಿದರು. ಮೊದಲ ಗೇಮ್‌ನಲ್ಲಿ ಚೈನಿಸ್ ತೈಪಿಯ ಆಟಗಾರನಿಗೆ ಕಠಿಣ ಸವಾಲು ಒಡ್ಡಿದ ಆಯುಷ್, ಬಳಿಕ ಎರಡು ಹಾಗೂ ಮೂರನೇ ಗೇಮ್ ಸುಲಭವಾಗಿ ಗೆದ್ದು ಬೀಗಿದರು. ಈ ಮೂಲಕ ಇವರು ಫೈನಲ್‌ಗೆ ಪ್ರವೇಶಿಸಿದರು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಆಯುಷ್, ಕೆನಡಾದ ಬ್ರಿಯಾನ್ ಯಾಂಗ್ ಅವರನ್ನು ಮಣಿಸಿ ಅಬ್ಬರಿಸಿದರು. ಈ ಮೂಲಕ ತಮ್ಮ ಮುಡಿಗೆ ಬಿಡಬ್ಲ್ಯುಎಫ್ ಪ್ರಶಸ್ತಿಯನ್ನು ಏರಿಸಿಕೊಂಡರು. ಈ ಮೂಲಕ ಇವರು ಭಾರೀ ಸುದ್ದಿಯಾಗಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ 20 ವರ್ಷದ ಆಯುಷ್ ಮೂರನೇ ಶ್ರೇಯಾಂಕದ ಯಾಂಗ್ ಅವರನ್ನು 21-18, 21-13 ಅಂತರದಿಂದ ಸೋಲಿಸಿದರು

ಅಮೆರಿಕದ ಮೈದಾನದಲ್ಲಿ ಆರು ಅಡಿ ಎತ್ತರದ ಆಯುಷ್ ಶೆಟ್ಟಿ ನೆಗೆದು ಶಾಟ್‌ಗಳನ್ನು ಪ್ರಯೋಗಿಸುತ್ತಾ ಇದ್ದರೆ, ಇತ್ತ ಅಭಿಮಾನಿಗಳು ಸಂಭ್ರಮಿಸುತ್ತಲೇ ಇದ್ದರು. ಇವರ ಹೆಸರನ್ನು ಕೇಳಿದ ತಕ್ಷಣ ಇವರಿಗೆ ಹಾಗೂ ಕರ್ನಾಟಕಕ್ಕೆ ಏನು ಸಂಬಂಧ ಇರುವುದು ತಿಳಿಯುತ್ತದೆ.
ಕಾರ್ಕಳ ಪ್ರತಿಭೆ
ಆಯುಷ್ ಶೆಟ್ಟಿ 2005 ರ ಮೇ 3 ರಂದು ಜನಿಸಿದರು. ಇವರು 7 ನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದರು. ತಮ್ಮ ಹೊಲದಲ್ಲೇ ಕೋರ್ಟ್ ಮಾಡಿಕೊಂಡು ಆಡಲು ಆರಂಭಿಸಿದ ಆಯುಷ್ ಆರಂಭದಲ್ಲಿ ಕಾರ್ಕಳ್ ಹಾಗೂ ಮಂಗಳೂರಿನಲ್ಲಿ ಬ್ಯಾಡ್ಮಿಂಟನ್ ತರಬೇತಿ ಪಡೆದರು. ಬಳಿಕ 12ನೇ ವಯಸ್ಸಿನಲ್ಲಿ ಆಯುಷ್ ಹೆಚ್ಚಿನ ತರಬೇತಿಗಾಗಿ ಬೆಂಗಳೂರಿಗೆ ಶಿಫ್ಟ್ ಆದರು. ಇಲ್ಲಿ ಇವರು ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಸೇರಿಕೊಂಡರು.
ಅವರು ತಮ್ಮ ತಂದೆಯೊಂದಿಗೆ ಮನೆಯ ಹಿಂದಿನ ಹೊಲದಲ್ಲಿ ತರಬೇತಿ ಪಡೆಯುತ್ತಿದ್ದರು. ತಮ್ಮ ವೃತ್ತಿಜೀವನದ ಆರಂಭದಲ್ಲಿ, ಅವರು ಕಾರ್ಕಳ ಮತ್ತು ಮಂಗಳೂರಿನಲ್ಲಿ ತರಬೇತುದಾರರಾದ ಸುಭಾಷ್ ಮತ್ತು ಚೇತನ್ ಅವರ ಅಡಿಯಲ್ಲಿ ತರಬೇತಿ ಪಡೆದರು. ಉತ್ತಮ ತರಬೇತಿಗಾಗಿ ಆಯುಷ್ 12 ನೇ ವಯಸ್ಸಿನಲ್ಲಿ ತಮ್ಮ ಕುಟುಂಬದೊಂದಿಗೆ ಬೆಂಗಳೂರಿಗೆ ಸ್ಥಳಾಂತರಗೊಂಡರು. ಅವರು ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಗೆ ಹೋಗಿ ಸಾಗರ್ ಚೋಪ್ರಾ ಅವರ ಅಡಿಯಲ್ಲಿ ತರಬೇತಿ ಪಡೆದರು. ಇವರು 18ನೇ ವಯಸ್ಸಿನಲ್ಲಿದ್ದಾಗ ಬಿಡಬ್ಲ್ಯೂಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದು ಬೆಳಕಿಗೆ ಬಂದರು.
ಆಯುಷ್ ಶೆಟ್ಟಿ ಹಿರಿಯರ ಬ್ಯಾಡ್ಮಿಂಟನ್ ತಂಡಕ್ಕೆ ತಮ್ಮದೇ ಆದ ಧಾಟಿಯಲ್ಲಿ ಎಂಟ್ರಿ ನೀಡಿ ಅಬ್ಬರಿಸಿದರು. ಅಲ್ಲದೆ ಆಗಿನ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರನ್ನು ಮಣಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದರು. ಸದ್ಯ ಪುರಷರ ಸಿಂಗಲ್ಸ್ ವಿಭಾಗದಲ್ಲಿ ಇವರು 31ನೇ ಶ್ರೇಯಾಂಕವನ್ನು ಹೊಂದಿದ್ದಾರೆ. ಇವರು ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದಲ್ಲಿ ಕ್ರೀಡಾ ವಿಜ್ಞಾನದಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications