US Open 2023: ಸಂಪೂರ್ಣ ವೇಳಾಪಟ್ಟಿ, ಪಂದ್ಯಗಳ ಸಮಯ, ಲೈವ್ ಸ್ಟ್ರೀಮಿಂಗ್ ವಿವರ
ಯುಎಸ್ ಓಪನ್‌ನ 143 ನೇ ಆವೃತ್ತಿಯು ಇಂದಿನಿಂದ (ಆಗಸ್ಟ್ 28) ಪ್ರಾರಂಭವಾಗಲಿದೆ. ಭಾರತೀಯ ಕಾಲಮಾನ ರಾತ್ರಿ 8.30ಕ್ಕೆ ಪುರುಷರ ಮತ್ತು ಮಹಿಳೆಯರ ವಿಭಾಗದ ಮೊದಲ ಸುತ್ತಿನ ಪಂದ್ಯಗಳು ನಡೆಯಲಿವೆ. ಪುರುಷರು ಮತ್ತು ಮಹಿಳೆಯರ ಸಿಂಗಲ್ಸ್, ಪುರುಷರ ಮತ್ತು ಮಹಿಳೆಯರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ. ಈವೆಂಟ್‌ನಲ್ಲಿ ಹಿರಿಯ ಮತ್ತು ಕಿರಿಯ ಗಾಲಿಕುರ್ಚಿ ವಿಭಾಗದಲ್ಲಿ ಕೂಡ ಪಂದ್ಯಗಳು ನಡೆಯಲಿವೆ.
ಆಗಸ್ಟ್ 22 ರಿಂದ ಆಗಸ್ಟ್ 25 ರವರೆಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆದಿದ್ದವು. ಮುಖ್ಯ ಪಂದ್ಯಾವಳಿ ಆಗಸ್ಟ್ 28 ರಂದು ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 10 ರಂದು ಮಹಿಳೆಯರ ಡಬಲ್ಸ್ ಫೈನಲ್ ಮತ್ತು ಪುರುಷರ ಸಿಂಗಲ್ಸ್ ಫೈನಲ್‌ನೊಂದಿಗೆ ಮುಕ್ತಾಯಗೊಳ್ಳುತ್ತದೆ.

ಮಿಶ್ರ ಡಬಲ್ಸ್ ಮತ್ತು ಪುರುಷರ ಡಬಲ್ಸ್ ಫೈನಲ್ ಸೆಪ್ಟೆಂಬರ್ 8 ಅಥವಾ ಸೆಪ್ಟೆಂಬರ್ 9 ರಂದು ನಡೆಯಲಿದೆ ಮತ್ತು ಮಹಿಳೆಯರ ಸಿಂಗಲ್ಸ್ ಫೈನಲ್ ಸೆಪ್ಟೆಂಬರ್ 9 ರಂದು ಸಂಜೆ ನಡೆಯಲಿದೆ. ಯುಎಸ್ ಓಪನ್ 2023 ರಲ್ಲಿ ಡ್ಯಾನಿಲ್ ಮೆಡ್ವೆಡೆವ್, ನೊವಾಕ್ ಜೊಕೊವಿಕ್, ಕಾರ್ಲೋಸ್ ಅಲ್ಕರಾಜ್ ಮತ್ತು ಇಗಾ ಸ್ವಿಯಾಟೆಕ್ ಸೇರಿದಂತೆ ಅಗ್ರ ತಾರೆಗಳು ಮತ್ತು ಮಾಜಿ ಚಾಂಪಿಯನ್‌ಗಳು ಭಾಗವಹಿಸಲಿದ್ದಾರೆ.
ಭಾರತದಲ್ಲಿ ಪಂದ್ಯಗಳನ್ನು ವೀಕ್ಷಿಸುವುದು ಹೇಗೆ
ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ತಮ್ಮ ಚಾನೆಲ್‌ಗಳಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾದಲ್ಲಿ ಯುಎಸ್ ಓಪನ್ 2023 ಪಂದ್ಯಗಳನ್ನು ನೇರಪ್ರಸಾರ ಮಾಡಲಿದೆ. ಸೋನಿ Liv ಒಟಿಟಿ ವೇದಿಕೆಯಲ್ಲಿ ಕೂಡ ಪಂದ್ಯಗಳ ನೇರಪ್ರಸಾರ ನೋಡಬಹುದಾಗಿದೆ.
ಯುಎಸ್ ಓಪನ್ 2023 ವೇಳಾಪಟ್ಟಿ, ಸೆಷನ್ ಸಮಯ
ದಿನಾಂಕ ದಿನ ಪ್ರಾರಂಭ ಸಮಯ ಪಂದ್ಯಗಳು
| ದಿನಾಂಕ | ದಿನ | ಪ್ರಾರಂಭ ಸಮಯ | ಪಂದ್ಯಗಳು |
| ಆಗಸ್ಟ್ 28 | ಸೋಮವಾರ | 08:30:00 PM | ಪುರುಷರು ಮತ್ತು ಮಹಿಳೆಯರ 1 ನೇ ಸುತ್ತು |
| ಆಗಸ್ಟ್ 29 | ಮಂಗಳವಾರ | 04:30:00 AM | ಪುರುಷರು ಮತ್ತು ಮಹಿಳೆಯರ 1 ನೇ ಸುತ್ತು |
| ಆಗಸ್ಟ್ 29 | ಮಂಗಳವಾರ | 08:30:00 PM | ಪುರುಷರು ಮತ್ತು ಮಹಿಳೆಯರ 1 ನೇ ಸುತ್ತು |
| ಆಗಸ್ಟ್ 30 | ಬುಧವಾರ | 04:30:00 AM | ಪುರುಷರು ಮತ್ತು ಮಹಿಳೆಯರ 1 ನೇ ಸುತ್ತು |
| ಆಗಸ್ಟ್ 30 | ಬುಧವಾರ | 08:30:00 PM | ಪುರುಷರು ಮತ್ತು ಮಹಿಳೆಯರ 2ನೇ ಸುತ್ತು, ಪುರುಷರ ಮತ್ತು ಮಹಿಳೆಯರ ಡಬಲ್ಸ್ 1ನೇ ಸುತ್ತು |
| ಆಗಸ್ಟ್ 31 | ಗುರುವಾರ | 04:30:00 AM | ಪುರುಷರು ಮತ್ತು ಮಹಿಳೆಯರ 2ನೇ ಸುತ್ತು |
| ಆಗಸ್ಟ್ 31 | ಗುರುವಾರ | 08:30:00 PM | ಪುರುಷರು ಮತ್ತು ಮಹಿಳೆಯರ 2ನೇ ಸುತ್ತು, ಪುರುಷರ ಮತ್ತು ಮಹಿಳೆಯರ ಡಬಲ್ಸ್ 1ನೇ ಸುತ್ತು |
| ಸೆಪ್ಟೆಂಬರ್ 1 | ಶುಕ್ರವಾರ | 04:30:00 AM | ಪುರುಷರು ಮತ್ತು ಮಹಿಳೆಯರ 2ನೇ ಸುತ್ತು |
| ಸೆಪ್ಟೆಂಬರ್ 1 | ಶುಕ್ರವಾರ | 08:30:00 PM | ಪುರುಷರು ಮತ್ತು ಮಹಿಳೆಯರ 3ನೇ ಸುತ್ತು, ಪುರುಷರ ಮತ್ತು ಮಹಿಳೆಯರ ಡಬಲ್ಸ್ 2ನೇ ಸುತ್ತು |
| ಸೆಪ್ಟೆಂಬರ್ 2 | ಶನಿವಾರ | 04:30:00 AM | ಪುರುಷರು ಮತ್ತು ಮಹಿಳೆಯರ 3ನೇ ಸುತ್ತು |
| ಸೆಪ್ಟೆಂಬರ್ 2 | ಶನಿವಾರ | 08:30:00 PM | ಪುರುಷರು ಮತ್ತು ಮಹಿಳೆಯರ 3ನೇ ಸುತ್ತು, ಪುರುಷರ ಮತ್ತು ಮಹಿಳೆಯರ ಡಬಲ್ಸ್ 2ನೇ ಸುತ್ತು |
| ಸೆಪ್ಟೆಂಬರ್ 3 | ಭಾನುವಾರ | 04:30:00 AM | ಪುರುಷರು ಮತ್ತು ಮಹಿಳೆಯರ 3ನೇ ಸುತ್ತು |
| ಸೆಪ್ಟೆಂಬರ್ 3 | ಭಾನುವಾರ | 08:30:00 PM | ಪುರುಷರ ಮತ್ತು ಮಹಿಳೆಯರ 16 ರ ಸುತ್ತು, ಪುರುಷರ ಮತ್ತು ಮಹಿಳೆಯರ ಡಬಲ್ಸ್ 3 ನೇ ಸುತ್ತು |
| ಸೆಪ್ಟೆಂಬರ್ 4 | ಸೋಮವಾರ | 04:30:00 AM | ಪುರುಷರ ಮತ್ತು ಮಹಿಳೆಯರ 16 ರ ಸುತ್ತು |
| ಸೆಪ್ಟೆಂಬರ್ 4 | ಸೋಮವಾರ | 08:30:00 PM | ಪುರುಷರ ಮತ್ತು ಮಹಿಳೆಯರ 16 ರ ಸುತ್ತು, ಪುರುಷರ ಮತ್ತು ಮಹಿಳೆಯರ ಡಬಲ್ಸ್ 3 ನೇ ಸುತ್ತು |
| ಸೆಪ್ಟೆಂಬರ್ 5 | ಮಂಗಳವಾರ | 04:30:00 AM | ಪುರುಷರ ಮತ್ತು ಮಹಿಳೆಯರ 16ರ ಸುತ್ತು |
| ಸೆಪ್ಟೆಂಬರ್ 5 | ಮಂಗಳವಾರ | 09:30:00 PM | ಪುರುಷರ ಮತ್ತು ಮಹಿಳೆಯರ ಸಿಂಗಲ್ ಮತ್ತು ಡಬಲ್ಸ್ ಕ್ವಾರ್ಟರ್‌ಫೈನಲ್‌ಗಳು |
| ಸೆಪ್ಟೆಂಬರ್ 6 | ಬುಧವಾರ | 04:30:00 AM | ಪುರುಷರು ಮತ್ತು ಮಹಿಳೆಯರ ಕ್ವಾರ್ಟರ್‌ಫೈನಲ್‌ಗಳು |
| ಸೆಪ್ಟೆಂಬರ್ 6 | ಬುಧವಾರ | 08:30:00 PM | ಮಹಿಳೆಯರ ಡಬಲ್ಸ್ ಕ್ವಾರ್ಟರ್ ಫೈನಲ್ಸ್ |
| ಸೆಪ್ಟೆಂಬರ್ 6 | ಬುಧವಾರ | 09:30:00 PM | ಪುರುಷರು ಮತ್ತು ಮಹಿಳೆಯರ ಕ್ವಾರ್ಟರ್‌ಫೈನಲ್‌ಗಳು |
| ಸೆಪ್ಟೆಂಬರ್ 7 | ಗುರುವಾರ | 04:30:00 AM | ಪುರುಷರು ಮತ್ತು ಮಹಿಳೆಯರ ಕ್ವಾರ್ಟರ್‌ಫೈನಲ್‌ಗಳು |
| ಸೆಪ್ಟೆಂಬರ್ 7 | ಗುರುವಾರ | 08:30:00 PM | ಪುರುಷರ ಡಬಲ್ಸ್ ಸೆಮಿಫೈನಲ್ |
| ಸೆಪ್ಟೆಂಬರ್ 8 | ಶುಕ್ರವಾರ | 04:30:00 AM | ಮಹಿಳೆಯರ ಸೆಮಿಫೈನಲ್‌ಗಳು |
| ಸೆಪ್ಟೆಂಬರ್ 8 | ಶುಕ್ರವಾರ | 09:30:00 PM | ಪುರುಷರ ಡಬಲ್ಸ್ ಫೈನಲ್ (ಅಥವಾ ಮಿಶ್ರ ಡಬಲ್ಸ್ ಫೈನಲ್) |
| ಸೆಪ್ಟೆಂಬರ್ 9 | ಶನಿವಾರ | 12:30:00 AM | ಪುರುಷರ ಸೆಮಿಫೈನಲ್‌ಗಳು |
| ಸೆಪ್ಟೆಂಬರ್ 9 | ಶನಿವಾರ | 04:30:00 AM | ಪುರುಷರ ಸೆಮಿಫೈನಲ್‌ಗಳು |
| ಸೆಪ್ಟೆಂಬರ್ 9 | ಶನಿವಾರ | 09:30:00 PM | ಪುರುಷರ ಡಬಲ್ಸ್ ಫೈನಲ್ (ಅಥವಾ ಮಿಶ್ರ ಡಬಲ್ಸ್ ಫೈನಲ್) |
| ಸೆಪ್ಟೆಂಬರ್ 10 | ಭಾನುವಾರ | 01:30:00 AM | ಮಹಿಳೆಯರ ಫೈನಲ್ |
| ಸೆಪ್ಟೆಂಬರ್ 10 | ಭಾನುವಾರ | 10:30:00 PM | ಮಹಿಳೆಯರ ಡಬಲ್ಸ್ ಫೈನಲ್ |
| ಸೆಪ್ಟೆಂಬರ್ 11 | ಸೋಮವಾರ | 01:30:00 AM | ಪುರುಷರ ಫೈನಲ್ |
ಸೂಚನೆ : ವೇಳಾಪಟ್ಟಿಯು ಬದಲಾವಣೆಗೆ ಒಳಪಟ್ಟಿರುತ್ತದೆ ಮತ್ತು ಪೂರ್ಣ ವೇಳಾಪಟ್ಟಿಯನ್ನು ಬಹಿರಂಗಪಡಿಸಿದ ನಂತರ ಯಾವುದೇ ಬದಲಾವಣೆಯನ್ನು ಮಾಡಿದ್ದರೆ ಅದನ್ನು ನವೀಕರಿಸಲಾಗುತ್ತದೆ.












Click it and Unblock the Notifications