ಟೀಮ್ ಇಂಡಿಯಾ ಬತ್ತಳಿಕೆಯಲ್ಲಿ ಇಂಗ್ಲೆಂಡ್ ಬಗ್ಗುಬಡೆಯುವ ಮೂರು ಅಸ್ತ್ರಗಳು!
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯ ಇಂದು ನಡೆಯಲಿದೆ. ಈ ಪಂದ್ಯದ ಮೇಲೆ ವಿಶ್ವದ ಚಿತ್ತ ನೆಟ್ಟಿದೆ. ಈ ಪಂದ್ಯವನ್ನುಗೆದ್ದು ಫೈನಲ್‌ಗೆ ಅರ್ಹತೆ ಪಡೆಯುವ ಕನಸನ್ನು ಟೀಮ್ ಇಂಡಿಯಾ ಕಾಣುತ್ತಿದೆ. ಎದುರಾಳಿ ಇಂಗ್ಲೆಂಡ್ ತಂಡವನ್ನು ಕಾಡಬಲ್ಲ ಮೂರು ಪ್ರಮುಖ ಅಸ್ತ್ರಗಳು ಟೀಮ್ ಇಂಡಿಯಾ ಬಳಿ ಇವೆ. ಹಾಗಿದ್ದರೆ ಆ ಅಸ್ತ್ರಗಳು ಯಾವವು ಎಂಬ ಬಗ್ಗೆ ವರದಿ ಇಲ್ಲಿದೆ.
ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಲೀಗ್ ಹಾಗೂ ಸೂಪರ್ 8 ಹಂತದ ಪಂದ್ಯದಲ್ಲಿ ಸೊಗಸಾದ ಆಟವನ್ನು ಆಡಿ, ಉಪಾಂತ್ಯಕ್ಕೆ ಪ್ರವೇಶ ಪಡೆದಿದೆ. ಈಗ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಗೆದ್ದು ಪ್ರಶಸ್ತಿಗೆ ಇನ್ನೊಂದು ಹೆಜ್ಜೆ ಹತ್ತಿರವಾಗುವ ಆಸೆ ರೋಹಿತ್ ಬಾಯ್ಸ್‌ದಾಗಿದೆ. ಈ ನಿಟ್ಟಿನಲ್ಲಿ ಟೀಮ್ ಇಂಡಿಯಾ ಆಟಗಾರರು ಇಂಗ್ಲೆಂಡ್ ತಂಡದ ರಣ ತಂತ್ರವನ್ನು ಸದೆ ಬಡೆಯಲು ಸಜ್ಜರಾಗಿದ್ದಾರೆ. ಈ ಬಾರಿ ಟೀಮ್ ಇಂಡಿಯಾ ಸಂಘಟಿತ ಆಟದ ಪ್ರದರ್ಶನ ನೀಡುತ್ತಿದೆ. ಆದರೆ ಇಂಗ್ಲೆಂಡ್ ತಂಡಕ್ಕೆ ಈ ಮೂವರು ಆಟಗಾರರು ಮಾರಕವಾಗಲಿದ್ದಾರೆ.

ಟೀಮ್ ಇಂಡಿಯಾ ಬಳಿ ಇರುವು ಅಸ್ತ್ರಗಳು ಯಾವವು?
ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಪ್ರದರ್ಶನ ಸ್ಥಿರವಾಗಿದೆ. ಇನ್ನು ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾದ ಆಟಗಾರರು ಅಬ್ಬರದ ಆಟವನ್ನು ಆಡಿ ಅಬ್ಬರಿಸಿದ್ದಾರೆ. ಹಿಂದಿನ ಮುಖಾಮುಖಿಯಲ್ಲಿ ವಿರಾಟ್ ಕೊಹ್ಲಿ ಸಹ ಆಂಗ್ಲರನ್ನು ಕಾಡಿದ್ದರು. ಆದರೆ ಈ ಬಾರಿ ಅವರ ರನ್ ಕಲೆ ಹಾಕಲು ವಿಫಲರಾಗುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಆದರೆ ಭಾರತ ತಂಡದಲ್ಲಿರುವ ಆ ಮೂವರು ಸ್ಟಾರ್ ಆಟಗಾರರು ಇಂಗ್ಲೆಂಡ್ ತಂಡ ನಿದ್ದೆಯನ್ನು ಗೆಡಿಸಿದ್ದಾರೆ.
ಮಿಡ್ಲ್ ಆರ್ಡರ್‌ಗೆ ಇವರೇ ಆಧಾರ
ಟೀಮ್ ಇಂಡಿಯಾದಲ್ಲಿ ಸದ್ಯ ಸ್ಟಾರ್ ಆಟಗಾರರ ದಂಡೇ ಇದೆ. ಇದರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಆಟಗಾರ ಎಂದರೆ, ಸೂರ್ಯಕುಮಾರ್ ಯಾದವ್. ಟೀಮ್ ಇಂಡಿಯಾ ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಂಡಿರುವ ಮೊದಲ ಪ್ರಮುಖ ಅಸ್ತ್ರ ಸೂರ್ಯ. ಈ ಪ್ಲೇಯರ್ ಸದ್ಯ ವಿಶ್ವಕಪ್‌ನಲ್ಲಿ ಲಯಕ್ಕೆ ಮರಳುತ್ತಿದ್ದಾರೆ. ಅಲ್ಲದೆ ಸ್ಥಿರ ಪ್ರದರ್ಶನ ನೀಡಿದ್ದಾರೆ. ಸ್ಕೈ ಈ ಬಾರಿಯ ವಿಶ್ವಕಪ್‌ನಲ್ಲಿ ಧಮಾಕೆದಾರ ಪ್ರದರ್ಶನ ನೀಡದೆ ಇದ್ದರೂ ತನ್ನ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಡುತ್ತಿದ್ದಾರೆ.

ಸೂರ್ಯಕುಮಾರ್ ಇಂಗ್ಲೆಂಡ್ ತಂಡವನ್ನು ಕಾಡುವ ಬ್ಯಾಟರ್. ಇವರು ಈಗಾಗಲೇ ಇಂಗ್ಲೆಂಡ್ ವಿರುದ್ಧ ಆಡಿದ ಏಳು ಪಂದ್ಯಗಳಲ್ಲಿ 274 ರನ್ ಸಿಡಿಸಿದ್ದಾರೆ. ಇವರನ್ನು ಕಟ್ಟಿ ಹಾಕುವುದು ಇಂಗ್ಲೆಂಡ್ ತಂಡಕ್ಕೆ ಸವಾಲಾಗಲಿದೆ.
ಆಲ್‌ರೌಂಡರ್ ಪ್ರದರ್ಶನ
ರೋಹಿತ್ ಬತ್ತಳಿಕೆಯಲ್ಲಿರುವ ಎರಡನೇ ಅಸ್ತ್ರ ಹಾರ್ದಿಕ್ ಪಾಂಡ್ಯ. ಹಾರ್ದಿಕ್ ತನ್ನ ಶ್ರೇಷ್ಠ ಪ್ರದರ್ಶನವನ್ನು ನೀಡಿ ತಂಡಕ್ಕೆ ನೆರವಾಗುತ್ತಿದ್ದಾರೆ. ಇವರು ಸಹ ಇಂಗ್ಲೆಂಡ್ ವಿರುದ್ಧ ಅಬ್ಬರಿಸಿ ಬೊಬ್ಬೆರಿದಿದ್ದಾರೆ. ಇವರು ಈ ಹಿಂದೆ ಆಡಿದ 14 ಪಂದ್ಯಗಳಲ್ಲಿ 279 ರನ್ ಸೇರಿಸಿ, 14 ವಿಕೆಟ್ ಕಬಳಿಸಿದ್ದಾರೆ. ಇವರು ನಿಶ್ಚಿತವಾಗಿ ಇಂಗ್ಲೆಂಡ್ ತಂಡಕ್ಕೆ ತಲೆ ನೋವಾಗಬಹುದು. ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ 116 ರನ್ ಬಾರಿಸಿದ್ದು, 8 ವಿಕೆಟ್ ಕಬಳಿಸಿ ತಮ್ಮ ಸ್ಥಾನಕ್ಕೆ ನ್ಯಾಯ ಒದಗಿಸಿದ್ದಾರೆ.
ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೊರ್ವ ಪ್ಲೇಯರ್ ಚೈನಾ ಮೆನ್ ಬೌಲರ್ ಕುಲ್‌ದೀಪ್ ಯಾದವ್.. ಕುಲ್‌ದೀಪ್ ವಿಶ್ವಕಪ್ 2024 ಸೂಪರ್ 8 ಪಂದ್ಯದಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ. ಇವರು ಈಗಾಗಲೇ ಐದು ವಿಕೆಟ್ ಪಡೆದು ತಮ್ಮ ಕ್ಷಮತೆ ಏನು ಎಂಬುದನ್ನು ಸಾಬೀತು ಪಡೆಸಿದ್ದಾರೆ. ಇಂಗ್ಲೆಂಡ್ ತಂಡಕ್ಕೆ ಸ್ಪಿನ್ ಬೌಲರ್‌ಗಳನ್ನು ಆಡುವುದು ಕಷ್ಟ ಎಂಬುದು ಅರಿವಿದ್ದು, ಇವರು ಸೆಮಿಪೈನಲ್ ಪಂದ್ಯದಲ್ಲಿ ಎಕ್ಸ್ ಫ್ಯಾಕ್ಟರ್ ಆಗಬಹುದು.












Click it and Unblock the Notifications