T-20 World Cup 2026: ಬಿಸಿಸಿಐಗೆ ಸೆಡ್ಡು ಹೊಡೆದ ಬಾಂಗ್ಲಾಗೆ ಕೋಟಿ ಕೋಟಿ ನಷ್ಟ
T-20 World Cup 2026 Bangladesh: ಫೆಬ್ರವರಿ 7ರಿಂದ ಟಿ-20 ವಿಶ್ವಪ್ ಆರಂಭ ಆಗಲಿದೆ. ಈ ಟೂರ್ನಿಯಿಂದ ಬಾಂಗ್ಲಾ ತಂಡ ಹಿಂದೆ ಸರಿದಿದೆ. ಇದರಿಂದ ಬಾಂಗ್ಲಾದೇಶಕ್ಕೆ ಕೋಟಿ.. ಕೋಟಿ ನಷ್ಟವಾಗಲಿದೆ. ಹಾಗಾದ್ರೆ, ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತನ್ನ 2026 ಟಿ-20 ವಿಶ್ವಕಪ್ ಗ್ರೂಪ್ ಪಂದ್ಯಗಳನ್ನು ಭಾರತದ ಹೊರಗೆ ಸ್ಥಳಾಂತರಿಸಬೇಕು ಎಂದು ಮನವಿ ಮಾಡಿತ್ತು. ಆದರೆ, ಈ ಮನವಿಯನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದ್ದು, ಇದರಿಂದ ಭದ್ರತಾ ಕಾಳಜಿಯ ನೆಪವೊಡ್ಡಿ ಬಾಂಗ್ಲಾದೇಶ ಟೂರ್ನಿಯಿಂದ ಹಿಂದೆ ಸರಿದಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಸಿದ ಬೆನ್ನಲ್ಲೇ ಐಪಿಎಲ್ ತಂಡ ಕೆಕೆಆರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಸಿಸಿಐ ಸೂಚನೆ ಮೇರೆಗೆ ಕೈಬಿಟ್ಟಿತು. ಬಳಿಕ ಬಾಂಗ್ಲಾ ಭಾರತದಲ್ಲಿ ನಿಗದಿಯಾಗಿದ್ದ ಟಿ-20 ವಿಶ್ವಕಪ್ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿತ್ತು. ಆದರೆ, ಇದನ್ನು ಐಸಿಸಿ ತಿರಸ್ಕರಿಸಿದ ಕಾರಣ ಈ ಟೂರ್ನಿಯಿಂದ ಬಾಂಗ್ಲಾದೇಶ ಹಿಂದೆ ಸರಿದಿದೆ.
ಬಾಂಗ್ಲಾಗೆ ಎಷ್ಟು ನಷ್ಟ?: ಭದ್ರತಾ ಕಾಳಜಿ ನೆಪವೊಡ್ಡಿ ಭಾರತಕ್ಕೆ ಟಿ-20 ವಿಶ್ವಕಪ್ ಪಂದ್ಯಗಳನ್ನು ಆಡಲು ತಮ್ಮ ದೇಶದ ತಂಡವನ್ನು ಕಳುಹಿಸಲು ಬಿಸಿಬಿ ನಿರಾಕರಿಸಿದೆ. ಇನ್ನೂ ಐಸಿಸಿ ಭದ್ರತಾ ಬೆದರಿಕೆ ಇಲ್ಲ ಎಂದು ಬಾಂಗ್ಲಾದ ಮನವಿ ತಿರಸ್ಕರಿಸಿತು. ಈ ನಿಲುವಿನಿಂದ ಬಾಂಗ್ಲಾ ಟೂರ್ನಿಯಿಂದ ಹಿಂದೆ ಸರಿದಿದೆ. ಇದರಿಂದ ಮಾಹಿತಿ ಪ್ರಕಾರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ)ಗೆ ಸುಮಾರು 3.25 ಬಿಲಿಯನ್ ಟಾಕಾ ಅಂದರೆ, ಭಾರತದ ರೂಪಾಯಿ ಲೆಕ್ಕದಲ್ಲಿ 240 ಕೋಟಿ ನಷ್ಟ ಆಗಲಿದೆ. ದ್ವಿಪಕ್ಷೀಯ ಸರಣಿಗಳ ಮೇಲೂ ಇದು ಹೊಡೆತ ಬೀಳಲಿದೆ ಎಂದು ಹೇಳಲಾಗುತ್ತದೆ.
ಬಾಂಗ್ಲಾ ಕ್ರೀಡಾ ಸಲಹೆಗಾರ ಹೇಳಿದ್ದೇನು?: ಬಾಂಗ್ಲಾದೇಶ 2026ರ ಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದು, ಭದ್ರತಾ ಕಾರಣಗಳಿಂದಾಗಿ ತಂಡವನ್ನು ಭಾರತಕ್ಕೆ ಕಳುಹಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಿರಾಕರಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಬಾಂಗ್ಲಾದೇಶದ ಯುವಜನ ಮತ್ತು ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಭಾರತದ ಭದ್ರತಾ ಪರಿಸ್ಥಿತಿ ಬದಲಾಗಿಲ್ಲ. ಆದದ್ದರಿದ ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸುತ್ತಿಲ್ಲ ಎಂದು ಹೇಳಿದ್ದರು.
ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಪಂದ್ಯಾವಳಿಯನ್ನು ಆಯೋಜಿಸುತ್ತಿವೆ. ಆದ್ದದರಿಂದ ಬಾಂಗ್ಲಾದೇಶದ ಗುಂಪು ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರ ಮಾಡುವಂತೆ ಬಿಸಿಬಿ, ಐಸಿಸಿಗೆ ಮನವಿ ಮಾಡಿತ್ತು. ಆದರೆ, ಐಸಿಸಿ ಮಂಡಳಿಯ ಸಭೆಯು ಭಾರತದಲ್ಲಿ ಯಾವುದೇ ಭದ್ರತಾ ಬೆದರಿಕೆ ಇಲ್ಲ ಎಂದು ಹೇಳಿ ಬಾಂಗ್ಲಾದ ಪ್ರಸ್ತಾಪವನ್ನು ತಿರಸ್ಕರಿಸಿದೆ.
ಅಷ್ಟೇ ಅಲ್ಲದೆ, ಬಾಂಗ್ಲಾ ತಂಡ ಭಾರತಕ್ಕೆ ಪ್ರಯಾಣ ಮಾಡದಿದ್ದರೆ, ನಿಮ್ಮ ಸ್ಥಾನದಲ್ಲಿ ಬೇರೆ ತಂಡವನ್ನು ಟಿ-20 ವಿಶ್ವಕಪ್ಗೆ ಆಯ್ಕೆ ಮಾಡಲಾಗುತ್ತದೆ ಎಂದು ಐಸಿಸಿ, ಬಿಸಿಬಿಗೆ ಸೂಚನೆ ನೀಡಿತ್ತು. ಇದರ ಹೊರತಾಗಿಯೂ, ಬಾಂಗ್ಲಾದೇಶ ತನ್ನ ನಿಲುವು ಬದಲಾಯಿಸದೆ ಪಂದ್ಯಾವಳಿಯಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಇದರಿಂದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಗೆ ಐಸಿಸಿಯಿಂದ ಬರುವ ವಾರ್ಷಿಕ ಆದಾಯದ ಪಾಲಿನಲ್ಲಿ ಸುಮಾರು 240 ಕೋಟಿ ರೂಪಾಯಿ ನಷ್ಟ ಆಗಬಹುದು ಎಂದು ವರದಿ ಆಗಿದೆ.
ತಾನು ತೋಡಿದ್ದ ಹಳ್ಳಕ್ಕೆ ಬಿದ್ದ ಬಾಂಗ್ಲಾ: ಇದನ್ನು ಸೇರಿದಂತೆ ಇನ್ನೂ ಹಲವು ಕಡೆಗಳಿಂದ ಬರುತ್ತಿದ್ದ ಆದಾಯಕ್ಕೂ ಕೂಡ ಕತ್ತರಿ ಬಿದ್ದಿದ್ದು, ಇದರಿಂದ ಬಾಂಗ್ಲಾ ಭಾರೀ ಆರ್ಥಿಕ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಬಾಂಗ್ಲಾ ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದಿದೆ ಎಂದು ಹೇಳಿದರೆ, ತಪ್ಪಾಗಲಾರದು.












Click it and Unblock the Notifications