Suryakumar Yadav: ಸೂರ್ಯಕುಮಾರ್ ಯಾದವ್ ಕ್ಯಾಚ್ ವೈರಲ್ ಬಳಿಕ, ಆತನ ಆಸ್ತಿ ಕೋಟಿ ಕೋಟಿ ಏರಿಕೆ?

ಸೂರ್ಯಕುಮಾರ್ ಯಾದವ್ ಈಗ ಥೇಟ್ ಸೂರ್ಯನ ರೀತಿಯೇ ಕಂಗೊಳಿಸುತ್ತಿದ್ದಾರೆ. ಈ ಆಟಗಾರ ಮೊನ್ನೆ ಮೊನ್ನೆ ನಡೆದ 2024ರ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಕೊನೆಗೆ ಹಿಡಿದ ಅದ್ಭುತವಾದ ಕ್ಯಾಚ್ ಭಾರತಕ್ಕೆ ವಿಶ್ವಕಪ್ ಗೆಲುವು ತಂದುಕೊಟ್ಟಿದೆ. ಹೀಗಾಗಿ, ಇಡೀ ಜಗತ್ತು ಸೂರ್ಯಕುಮಾರ್ ಯಾದವ್ ಅವರ ಕ್ಯಾಚ್ ಕುರಿತು ಮಾತನಾಡುತ್ತಿದೆ. ಇದೀಗ ಸೂರ್ಯಕುಮಾರ್ ಯಾದವ್ ಅವರ ಒಟ್ಟು ಆಸ್ತಿ ಎಷ್ಟು ಕೋಟಿ ಅನ್ನೋದನ್ನ ತಿಳಿಯೋಣ ಬನ್ನಿ.

ಸೂರ್ಯಕುಮಾರ್ ಯಾದವ್ ಓರ್ವ ಅದ್ಭುತ ಆಟಗಾರ ಹಾಗೇ ಸೂರ್ಯಕುಮಾರ್‌ಗೆ, ಭಾರತದ 360 ಡಿಗ್ರಿ ಅಂತಾ ಬಿರುದು ನೀಡಲಾಗಿದೆ. ಯಾಕಂದ್ರೆ ದಕ್ಷಿಣ ಆಫ್ರಿಕಾ ಟೀಂ ಆಟಗಾರ ಎಬಿ ಡಿವಿಲಿಯರ್ಸ್ ರೀತಿಯಲ್ಲೇ ಅತ್ಯದ್ಭುತ ಆಟ ಪ್ರದರ್ಶಿಸುವ ಮತ್ತು ಇಡೀ ಕ್ರಿಕೆಟ್ ಮೈದಾನದ ಮೂಲೆ ಮೂಲೆಗೆ ಬಾಲ್ ಕಳಿಸುವ ಶಕ್ತಿ ಸೂರ್ಯಕುಮಾರ್ ಯಾದವ್ ಅವರಿಗೆ ಇದೆ. ಹೀಗಾಗಿಯೇ ಸೂರ್ಯಕುಮಾರ್ ಮಿರಮಿರ ಮಿಂಚುತ್ತಿದ್ದಾರೆ, ಹಾಗಾದ್ರೆ ಕ್ರಿಕೆಟ್ ಲೋಕದ ಹೀರೋ ಸೂರ್ಯಕುಮಾರ್ ಯಾದವ್ ಬಳಿ ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ? ಇಂಚಿಂಚು ಮಾಹಿತಿಗೆ ಮುಂದೆ ಓದಿ.

Suryakumar Yadav Net Worth Complete Details Here

ಸೂರ್ಯಕುಮಾರ್ ಯಾದವ್ ಆಸ್ತಿ ವಿವರ!

1990ರ ಸೆಪ್ಟೆಂಬರ್ 14 ರಂದು ಹುಟ್ಟಿದ ಸೂರ್ಯಕುಮಾರ್ ಯಾದವ್ ಅವರು 2008 ರಿಂದ ಕೂಡ ಕ್ರಿಕೆಟ್ ಆಡುತ್ತಿದ್ದಾರೆ. ಆದರೆ ಸೂರ್ಯಕುಮಾರ್ ಯಾದವ್ ಅವರಿಗೆ ಈ ರೀತಿಯ ಖ್ಯಾತಿ ಬಂದಿದ್ದು 3-4 ವರ್ಷಗಳಿಂದ. ಭಾರತದ ಪರ ಒಟ್ಟು 68 ಟಿ20 ಪಂದ್ಯ ಸೇರಿ 37 ಏಕದಿನ ಪಂದ್ಯ, 1 ಟೆಸ್ಟ್ ಮ್ಯಾಚ್ ಆಡಿರುವ ಸೂರ್ಯಕುಮಾರ್ ಯಾದವ್ ಬಳಿ ಕೋಟಿ ಕೋಟಿ ಆಸ್ತಿ ಇದೆ. ಈಗಿನ ಮಾಹಿತಿಗಳ ಪ್ರಕಾರ ಒಟ್ಟಾರೆ 55 ಕೋಟಿ ರೂಪಾಯಿ ಆಸ್ತಿ ಒಡೆಯ ಸೂರ್ಯಕುಮಾರ್ ಯಾದವ್. ಹಾಗಾದ್ರೆ ಏನೆಲ್ಲಾ ಇದೆ ಸೂರ್ಯಕುಮಾರ್ ಯಾದವ್ ಅವರ ಮನೆಯಲ್ಲಿ? ಮುಂದೆ ಓದಿ.

ಐಷಾರಾಮಿ ಕಾರು & ಮನೆ ಇದೆ!

ಸೂರ್ಯಕುಮಾರ್ ಯಾದವ್ ಸಾಕಷ್ಟು ಸಮಸ್ಯೆಗಳಿಂದ ಎದ್ದು ಮೇಲೆ ಬಂದ ಭಾರತದ ಕ್ರಿಕೆಟ್ ಆಟಗಾರ. ಆದರೆ ಇದೀಗ ಸೂರ್ಯ ಬಳಿ ಸುಮಾರು 2 ಕೋಟಿ ರೂಪಾಯಿ ಬೆಲೆ ಬಾಳುವ ಬೆಂಜ್ ಕಾರು ಸೇರಿ, ಜೀಪ್ ಮಾದರಿಯ ವಾಹನ, ಹತ್ತಾರು ಬೈಕ್ & ಇನ್ನೂ ಹಲವು ಕಾರುಗಳು ಇವೆ. ಹಾಗೇ ವಾಣಿಜ್ಯ ನಗರಿ ಮುಂಬೈನ ಅಣುಶಕ್ತಿ ನಗರ ಭಾಗದಲ್ಲಿ ಸೂರ್ಯಕುಮಾರ್ ಯಾದವ್ ಕೋಟಿ ಕೋಟಿ ಬೆಲೆಬಾಳುವ ಮನೆ ಕೂಡ ಹೊಂದಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+