Sarfaraz Khan: ರನೌಟ್ ಬಗ್ಗೆ ಮೌನ ಮುರಿದ ಸರ್ಫರಾಜ್ ಖಾನ್: ಜಡೇಜಾ ಹೇಳಿದ್ದೇನು?
ಕ್ರಿಕೆಟ್ ಜಗತ್ತಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಆಟಗಾರನ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡುವುದು ಸರ್ಫರಾಜ್ ಖಾನ್ ಅವರಷ್ಟು ಸದ್ದು ಮಾಡಿಲ್ಲ. ಸರ್ಫರಾಜ್ ಖಾನ್ ಕಳೆದ ಕೆಲವು ವರ್ಷಗಳಿಂದ ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುವವರಲ್ಲಿ ಒಬ್ಬರು. ಆದಾಗ್ಯೂ, ಬಿಸಿಸಿಐ ಆಯ್ಕೆಗಾರರು ಅವರನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಲು ಸಮಯವನ್ನು ತೆಗೆದುಕೊಂಡರು.
ರಾಜ್‌ಕೋಟ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮೂರನೇ ಟೆಸ್ಟ್‌ನಲ್ಲಿ ಅವರು ಅಂತಿಮವಾಗಿ ಅಂತಾರಾಷ್ಟ್ರೀಯ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದರು. ಅವರ ತಂದೆ ಮತ್ತು ಹೆಂಡತಿ ಖುಷಿಯಿಂದ ಕಣ್ಣೀರು ಹಾಕಿದ್ದರು.

ಮೊದಲ ಪಂದ್ಯದಲ್ಲೇ ಸರ್ಫರಾಜ್ ಖಾನ್ ಅವರು 48 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದರು. ಸ್ವಾತಂತ್ರ್ಯದ ನಂತರ ಭಾರತೀಯ ಕ್ರಿಕೆಟರ್ ಒಬ್ಬರು ಟೆಸ್ಟ್‌ನಲ್ಲಿ ಮೊದಲ ಪಂದ್ಯದಲ್ಲೇ ಗಳಿಸಿದ ವೇಗದ ಅರ್ಧಶತಕ ಇದಾಗಿದೆ. ಉತ್ತಮವಾಗಿ ಆಡುತ್ತಿದ್ದ ಅವರು ರವೀಂದ್ರ ಜಡೇಜಾ ಅವರೊಂದಿಗೆ ಭಯಾನಕ ರನ್ ಔಟ್ ಆದರು. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಸರ್ಫರಾಜ್ ಖಾನ್ ಔಟಾಗಿದ್ದಕ್ಕೆ ಕ್ಯಾಪ್ ಎಸೆದು ಹತಾಶೆ ವ್ಯಕ್ತಪಡಿಸಿದರು.
ಸರ್ಫರಾಜ್ ಖಾನ್ ಹೇಳಿದ್ದೇನು?
ದಿನದಾಟ ಮುಕ್ತಾಯದ ಬಳಿಕ ಸರ್ಫರಾಜ್ ಖಾನ್ ತಮ್ಮ ರನೌಟ್ ಬಗ್ಗೆ ಮೌನ ಮುರಿದರು. "ಕೆಲವೊಮ್ಮೆ ತಪ್ಪು ಸಂವಹನ ಆಗುತ್ತದೆ ಇದು ಆಟದ ಒಂದು ಭಾಗವಾಗಿದೆ. ಕೆಲವೊಮ್ಮೆ ನೀವು ರನ್ ಔಟ್ ಆಗುತ್ತೀರಿ. ಅಂತಹ ವಿಷಯಗಳು ಸಂಭವಿಸುತ್ತವೆ" ಎಂದು ಸರ್ಫರಾಜ್ ಖಾನ್ ಪಂದ್ಯದ ನಂತರ ಹೇಳಿದರು.
ರವೀಂದ್ರ ಜಡೇಜಾ ತನ್ನ ಇನ್ನಿಂಗ್ಸ್‌ನುದ್ದಕ್ಕೂ ನನಗೆ ಸಹಾಯ ಮಾಡಿದರು ಎಂದು ಸರ್ಫರಾಜ್ ಖಾನ್ ಹೇಳಿದ್ದಾರೆ. ನಾನು ಅವರೊಂದಿಗೆ ಊಟದ ಸಮಯದಲ್ಲಿ ಮಾತನಾಡಿದೆ. ನಾನು ಬ್ಯಾಟಿಂಗ್ ಮಾಡುವಾಗ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಮಾತನಾಡಲು ಇಷ್ಟಪಡುವ ಬ್ಯಾಟರ್ ಆಗಿದ್ದೇನೆ. ಹಾಗಾಗಿ ನಾನು ಬ್ಯಾಟಿಂಗ್ ಮಾಡುವಾಗ ನನ್ನೊಂದಿಗೆ ಮಾತನಾಡಲು ಜಡೇಜಾಗೆ ಹೇಳಿದ್ದೇನೆ. ಅವರು ಇಂದು ನನಗೆ ಸಾಕಷ್ಟು ಬೆಂಬಲ ನೀಡಿದರು ಮತ್ತು ಮಾತನಾಡಿದರು ಎಂದು ಸರ್ಫರಾಜ್ ಖಾನ್ ಹೇಳಿದರು.
ನಾನು ಸ್ವಲ್ಪ ನರ್ವಸ್ ಆಗಿದ್ದೆ, ವಿಶೇಷವಾಗಿ ನಾನು ನನ್ನ ಮೊದಲ ಸ್ವೀಪ್ ಅನ್ನು ಆಡಿದಾಗ ಮತ್ತು ಅದನ್ನು ತಪ್ಪಿಸಿದಾಗ. ಆದರೆ ಅವರು ನನಗೆ ಸ್ವಲ್ಪ ಸಮಯ ತೆಗೆದುಕೊಳ್ಳುವಂತೆ ಹೇಳಿದರು ಬಳಿಕ ಬ್ಯಾಟಿಂಗ್ ಮಾಡುವುದು ಸುಲಭವಾಗುತ್ತದೆ ಎಂದು ಹೇಳಿದರು.
ರನ್ ಔಟ್ ಆದ ಮೇಲೆ ಜಡೇಜಾ ಹೇಳಿದ್ದಕ್ಕೆ "ಸ್ವಲ್ಪ ಸಂವಹನ ತಪ್ಪಿದೆ ಎಂದು ಅವರು ಹೇಳಿದರು, ಆದರೆ ನಾನು ಪರವಾಗಿಲ್ಲ ಎಂದು ಹೇಳಿದೆ." ಎಂದು ಸರ್ಫರಾಜ್ ಖಾನ್ ಹೇಳಿದರು.
ರವೀಂದ್ರ ಜಡೇಜಾ ಹೇಳಿದ್ದೇನು?
ರವೀಂದ್ರ ಜಡೇಜಾ ಕೂಡ ಪಂದ್ಯದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ. ಆತನಿಗಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಅದು ನನ್ನದೇ ತಪ್ಪು. ಆತ ಉತ್ತಮವಾಗಿ ಆಡಿದ ಎಂದು ಹೇಳಿದ್ದಾರೆ.
ರಾಜ್‌ಕೋಟ್‌ನಲ್ಲಿ ಗುರುವಾರ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ ಮೊದಲ ದಿನದಾಟದ ಮುಕ್ತಾಯಕ್ಕೆ ಭಾರತ ಐದು ವಿಕೆಟ್‌ಗೆ 326 ರನ್ ಗಳಿಸಿದೆ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಶತಕ ಗಳಿಸಿ ಮಿಂಚಿದರು.












Click it and Unblock the Notifications