IPL Auction: ರಿಷಬ್ ಪಂತ್‌ಗೆ ₹33 ಕೋಟಿ ಕೊಟ್ಟ ಪಂಜಾಬ್ ಕಿಂಗ್ಸ್!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಮೆಗಾ ಹರಾಜಿಗೆ ಕ್ಷಣ ಗಣನೆ ಆರಂಭವಾಗಿದೆ. ಎಲ್ಲಾ ತಂಡಗಳು ಕೊನೆಯ ಹಂತದ ಲೆಕ್ಕಾಚಾರದಲ್ಲಿ ನಿರತವಾಗಿದ್ದು, ಬಲಿಷ್ಠ ತಂಡ ಕಟ್ಟಲು ಯೋಜನೆ ಹಾಕಿಕೊಂಡಿವೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಮೆಗಾ ಹರಾಜು ಆರಂಭವಾಗಲಿದ್ದ, ಈ ಬಾರಿ ಜೆಡ್ಡಾದ ಐಷಾರಾಮಿ ಹೋಟೆಲ್‌ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಐಪಿಎಲ್ ಮೆಗಾ ಹರಾಜಿಗೆ ಮುನ್ನ ಹಲವು ಫ್ರಾಂಚೈಸಿಗಳು, ಯೂಟ್ಯೂಬ್ ವಾಹಿನಿಗಳು ಅಣಕು ಹರಾಜು ನಡೆಸಿವೆ. ಎಲ್ಲಾ ಅಣಕು ಹರಾಜಿನಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್‌ಗೆ ಭಾರಿ ಪೈಪೋಟಿ ನಡೆದಿದೆ. ಕೆಕೆಆರ್ ಫ್ರಾಂಚೈಸಿ ನಡೆಸಿದ ಅಣಕು ಹರಾಜಿನಲ್ಲಿ ₹18.75 ಕೋಟಿಗೆ ಹರಾಜಾದರು. ರವಿಚಂದ್ರನ್ ಅಶ್ವಿನ್ ನಡೆಸಿದ ಐಪಿಎಲ್ ಅಣಕು ಹರಾಜಿನಲ್ಲಿ, ಅವರು 20.5 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್‌ಗೆ ಹೋದರು.

ರಿಷಬ್ ಪಂತ್‌ಗೆ ಬರೋಬ್ಬರಿ 33 ಕೋಟಿ
ಇದೀಗ ಮತ್ತೊಮ್ಮೆ ರಿಷಬ್ ಪಂತ್ ಈ ಬಾರಿ ಮೆಗಾ ಹರಾಜಿನ ದುಬಾರಿ ಆಟಗಾರ ಎನ್ನುವ ಸೂಚನೆ ಕೊಟ್ಟಿದ್ದಾರೆ. ಜಿಯೋ ಸಿನಿಮಾದಲ್ಲಿ ನಡೆದ ಮೆಗಾ ಹರಾಜು ವಾರ್ ರೂಮ್‌ನಲ್ಲಿ ರಿಷಬ್ ಪಂತ್ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಬರೋಬ್ಬರಿ 33 ಕೋಟಿ ರೂಪಾಯಿಗೆ ಅವರು ಹರಾಜಾಗಿದ್ದು ಪಂಜಾಬ್ ಕಿಂಗ್ಸ್ ಪಾಲಾದರು. ಪಂಜಾಬ್ ತಂಡವನ್ನು ಪ್ರತಿನಿಧಿಸಿದ ಇಯಾನ್ ಮಾರ್ಗನ್ ರಿಷಬ್ ಪಂತ್‌ಗಾಗಿ ಭಾರಿ ಪೈಪೋಟಿಗೆ ಇಳಿದರು. 110.5 ಕೋಟಿ ರೂಪಾಯಿ ಪರ್ಸ್ ಹೊಂದಿರುವ ಪಂಜಾಬ್ ಕಿಂಗ್ಸ್ ರಿಷಬ್ ಪಂತ್‌ಗಾಗಿ ದೊಡ್ಡ ಮೊತ್ತ ನೀಡಲು ತಯಾರಿದೆ ಎನ್ನುವ ಸೂಚನೆ ಕೊಟ್ಟಿದೆ.
ಪಂತ್ ಈ ಬಾರಿ ಹೆಚ್ಚು ಬೇಡಿಕೆಯಿರುವ ಆಟಗಾರ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೊತೆ ಮನಸ್ತಾಪದಿಂದ ಪಂತ್ ಫ್ರಾಂಚೈಸಿಯಿಂದ ದೂರಾಗಿದ್ದರೆ ಎನ್ನಲಾಗಿದೆ. ಅದಕ್ಕಾಗಿಯೇ ಪಂತ್ ಅವರನ್ನು ರಿಟೆನ್ಷನ್‌ನಲ್ಲಿ ಉಳಿಸಿಕೊಳ್ಳಲಿಲ್ಲ. ರಿಷಬ್ ಪಂತ್‌ಗಾಗಿ ಪಂಜಾಬ್ ಕಿಂಗ್ಸ್ ಮಾತ್ರವಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸಿಎಸ್‌ಕೆ ಮತ್ತು ಕೆಕೆಆರ್ ತಂಡಗಳು ಪೈಪೋಟಿ ನಡೆಸುವ ಸಾಧ್ಯತೆ ಇದೆ. ರಿಷಬ್ ಪಂತ್ ಐಪಿಎಲ್‌ನಲ್ಲಿ 111 ಪಂದ್ಯಗಳನ್ನಾಡಿದ್ದು, 35.31ರ ಸರಾಸರಿಯಲ್ಲಿ 148.93 ರ ಸ್ಟ್ರೈಕ್ ರೇಟ್‌ನಲ್ಲಿ 3284 ರನ್ ಗಳಿಸಿದ್ದಾರೆ.
ಜಿಯೋ ಸಿನಿಮಾ ಐಪಿಎಲ್ ಮೆಗಾ ಹರಾಜು ವಾರ್ ರೂಮ್‌ನಲ್ಲಿ ಪಂಜಾಬ್ ಕಿಂಗ್ಸ್ ರಿಷಬ್ ಪಂತ್ ಮಾತ್ರವಲ್ಲ ಜೋಸ್ ಬಟ್ಲರ್ ಅವರನ್ನು ಕೂಡ ಖರೀದಿ ಮಾಡಿತು. ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್‌ಗಾಗಿ ಆರ್ ಟಿಎಂ ಬಳಸಿತು. ಮೆಗಾ ಹರಾಜಿನಲ್ಲಿ ಹಲವು ಪ್ರಮುಖ ಆಟಗಾರರು ಕೋಟಿ ಕೋಟಿ ಪಡೆಯುವ ಸಾಧ್ಯತೆ ಇದೆ.












Click it and Unblock the Notifications