RCB vs RR Eliminator: ಎಲಿಮಿನೇಟರ್ ಪಂದ್ಯಕ್ಕೆ ಮಳೆ ಕಾಟ ನೀಡಿದರೆ ಆರ್‌ಸಿಬಿ ಸ್ಥಿತಿ ಏನು?
ಈಗಾಗಲೇ ಕೆಕೆಆರ್ ತಂಡ ಮೊದಲ ಐಪಿಎಲ್ 2024ರ ಮೊದಲ ಕ್ವಾಲಿಫೈರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ, ಫೈನಲ್ ಪ್ರವೇಶ ಪಡೆದುಕೊಂಡಿದೆ. ಫೈನಲ್ ಪ್ರವೇಶಿಸುವ ಇನ್ನೊಂದು ತಂಡ ಯಾವುದು ಎಂಬ ಪ್ರಶ್ನೆಗೆ ಶುಕ್ರವಾರ ಉತ್ತರ ಸಿಗಲಿದೆ. ಶುಕ್ರವಾರ ಕ್ವಾಲಿಫೈರ್ ಪಂದ್ಯದ್ಯಲ್ಲಿ ಎಸ್‌ಆರ್‌ಎಚ್ ಹಾಗೂ ಇಂದು ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಜಯಿಸುವ ತಂಡಗಳು ಕಾದಾಟ ನಡೆಸಲಿವೆ.
ಬುಧವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಟ ನಡೆಸಲಿವೆ. ಐಪಿಎಲ್ 2024 ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಹೊಂದಿರುವ ರಾಜಸ್ಥಾನ ರಾಯಲ್ಸ್ ಹಾಗೂ ನಾಲ್ಕನೇ ಸ್ಥಾನ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯವನ್ನು ಕಣ್ಣು ತುಂಬಿಕೊಳ್ಳಲು ಕಾತುರರಾಗಿದ್ದಾರೆ.

ಎಲಿಮಿನೇಟರ್ ಪಂದ್ಯದಲ್ಲಿ ಸೋಲು ಕಾಣುವ ತಂಡದ ಅಭಿಯಾನ ಪ್ರಸಕ್ತ ಟೂರ್ನಿಯಲ್ಲಿ ಇಂದೇ ಕೊನೆಗೊಳ್ಳಲಿದೆ. ಗೆದ್ದ ತಂಡ ಎರಡನೇ ಕ್ವಾಲಿಫೈರ್ ಪಂದ್ಯದಲ್ಲಿ ಎಸ್‌ಆರ್‌ಎಚ್ ತಂಡದ ವಿರುದ್ಧ ಕಾದಾಟ ನಡೆಸಲಿದೆ. ಆದರೆ ಆರ್‌ಸಿಬಿ ತಂಡ ಪಂದ್ಯವನ್ನು ಆಡದೆ ಈ ಸೀಸನ್‌ನಿಂದ ಹೊರಗುಳಿಯುವ ನಿಯಮ ಒಂದಿದೆ.
ಮಳೆ ಕಾಟ ನೀಡಿದರೆ
ವಾಸ್ತವವಾಗಿ, IPL 2024 ರ ಕೆಲವು ಪಂದ್ಯಗಳಿಗೆ ಮಳೆಯು ಹಾನಿಯನ್ನುಂಟುಮಾಡಿದೆ. ಈ ಪರಿಸ್ಥಿತಿಯಲ್ಲಿ ಎಲಿಮಿನೇಟರ್ ಪಂದ್ಯಕ್ಕೆ ಮಳೆ ಕಾಟ ನೀಡಿದರೆ ಆರ್‌ಸಿಬಿ ತಂಡಕ್ಕೆ ಹಿನ್ನಡೆ ಆಗಬಹುದು. ಐಪಿಎಲ್ ಆಡಳಿತ ಮಂಡಳಿಯು ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಿಗೆ ಮೀಸಲು ದಿನವನ್ನು ಸಹ ಇಟ್ಟಿಲ್ಲ. ಹೀಗಿರುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯುವ ಪಂದ್ಯದಲ್ಲಿ ಮಳೆ ಬಂದರೆ ಕನಿಷ್ಠ 5-5 ಓವರ್ ಗಳ ಪಂದ್ಯವನ್ನಾಗಿಸಲು ಪ್ರಯತ್ನಿಸಬಹುದು. ಅಥವಾ ಸೂಪರ್ ಓವರ್ ಮೂಲಕ ಫಲಿತಾಂಶವನ್ನೂ ನಿರ್ಧರಿಸಬಹುದು. ಆದರೆ ಪಂದ್ಯದಲ್ಲಿ ಒಂದೇ ಒಂದು ಚೆಂಡು ಬೌಲ್ ಆಗದಿದ್ದರೆ ಪಾಯಿಂಟ್ ಪಟ್ಟಿಯ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ.

ಹೀಗೆ ಆದಲ್ಲಿ ಆರ್‌ಸಿಬಿ ಕಥೆ ಏನು?
ಲೀಗ್ ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮೂರನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕನೇ ಸ್ಥಾನ ಪಡೆಯುವ ಮೂಲಕ ಪ್ಲೇ ಆಫ್‌ನಲ್ಲಿ ತನ್ನ ಸ್ಥಾನವನ್ನು ಗಳಿಸಿತು. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯವನ್ನು ರದ್ದುಗೊಂಡರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೀಸನ್ ಈ ಋತುವಿನಲ್ಲಿ ಕೊನೆಗೊಳ್ಳುತ್ತದೆ. ರಾಜಸ್ಥಾನ್ ರಾಯಲ್ಸ್ ತಂಡವು ಲೀಗ್ ಹಂತದಲ್ಲಿ RCB ಗಿಂತ ಅಂಕ ಗಳಿಕೆಯಲ್ಲಿ ಮುಂದಿದೆ.
ಮಳೆಯಿಂದ ಪಂದ್ಯ ರದ್ದಾದರೆ, ಕ್ವಾಲಿಫೈಯರ್-2ರಲ್ಲಿ ರಾಜಸ್ಥಾನ ರಾಯಲ್ಸ್ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಅಹಮದಾಬಾದ್‌ನಲ್ಲಿ ಇಂದು ಸ್ಪಷ್ಟವಾದ ಹವಾಮಾನವನ್ನು ನಿರೀಕ್ಷಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯದಲ್ಲಿ ಯಾವುದೇ ಗೊಂದಲ ಉಂಟಾಗುವುದಿಲ್ಲ.
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಅಬಿದ್ ಮುಷ್ತಾಕ್, ಅವೇಶ್ ಖಾನ್, ಧ್ರುವ್ ಜುರೆಲ್, ಡೊನೊವನ್ ಫೆರೇರಾ, ಜೋಸ್ ಬಟ್ಲರ್, ಕುಲದೀಪ್ ಸೇನ್, ಕೃನಾಲ್ ಸಿಂಗ್ ರಾಥೋಡ್, ನಾಂದ್ರೆ ಬರ್ಗರ್, ನವದೀಪ್ ಸೈನಿ, ರವಿಚಂದ್ರನ್ ಅಶ್ವಿನ್, ರಯಾನ್ ಪರಾಗ್, ಸಂದೀಪ್ ಶರ್ಮಾ, ಶಿಮ್ರೋನ್ ಹೆಟ್ಮಿಯರ್ ದುಬೆ, ರೋವ್ಮನ್ ಪೊವೆಲ್, ಟಾಮ್ ಕೊಹ್ಲರ್-ಕೆಡ್ಮೋರ್, ಟ್ರೆಂಟ್ ಬೌಲ್ಟ್, ಯಶಸ್ವಿ ಜೈಸ್ವಾಲ್, ಯುಜ್ವೇಂದ್ರ ಚಾಹಲ್ ಮತ್ತು ತನುಷ್ ಕೋಟ್ಯಾನ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ವೆಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್‌ಕುಮಾರ್ ವಿಶಾಕ್, ಆಕಾಶ್ ದೀಪ್, ಆಕಾಶ್ ದೀಪ್ ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮೆರಾನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರಾನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾನ್.












Click it and Unblock the Notifications